September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆಪ್ರಮುಖ ಸುದ್ದಿಬೆಳ್ತಂಗಡಿವರದಿ

ಚುನಾವಣಾ ಕಾನೂನು ಸುವ್ಯವಸ್ಥೆ, ಕಾಪಾಡುವ ಹಿತದೃಷ್ಟಿಯಿಂದ : ಎ.17 ಸೋಮವಾರ ಬೆಳ್ತಂಗಡಿ ಸಂತೆಕಟ್ಟೆ‌ಯಿಂದ ಬಸ್ ನಿಲ್ದಾಣದವರೆಗೆ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ವ್ಯಾಪಾರ ನಿಷೇಧ

ಬೆಳ್ತoಗಡಿ : ಪೊಲೀಸ್ ಇಲಾಖೆಯ ಕೋರಿಕೆಯಂತೆ ಕಾನೂನು ಸುವ್ಯವಸ್ಥೆ, ಕಾಪಾಡುವ ಹಿತದೃಷ್ಟಿಯಿಂದ ವಿಧಾನ ಸಭಾ ಚುನಾವಣೆ 2023 ಗೆ ಸಂಬಂಧಿಸಿದ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಎ. 17 ರಂದು ಸೋಮವಾರ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 4.00 ಗಂಟೆಯ ವರೆಗೆ ನಾಮಪತ್ರ ಸಲ್ಲಿಕೆಯನ್ನು ಮೆರವಣಿಗೆ ಮೂಲಕ ನಗರದ ವಿವಿಧ ಭಾಗಗಳಿಂದ ಪ್ರಾರಂಭಿಸಿ ಮುಖ್ಯ ರಸ್ತೆಯ ಮೂಲಕವಾಗಿ ಚುನಾವಣಾ ಅಧಿಕಾರಿಗಳ ಕಛೇರಿಯವರೆಗೆ (ತಾಲೂಕು ಆಡಳಿತ ಸೌಧ) ಸಲ್ಲಿಸಲಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಂಭವವಿರುವುದರಿಂದ ಎ. 17 ರಂದು ನಡೆಯುವ ಸೋಮವಾರದ ವಾರದ ಸಂತೆಯ ದಿನ ವರ್ತಕರು, ವ್ಯಾಪಾರಸ್ಥರು ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಸಂತೆಕಟ್ಟೆಯಿಂದ ಬಸ್‌ ನಿಲ್ದಾಣದವರೆಗೆ ವ್ಯಾಪಾರ ಮಾಡುವುದನ್ನು ನಿಷೇಧಿಸಿದೆ.

ರಸ್ತೆಯ ಎರಡು ಬದಿಯ ಸ್ಥಳದಲ್ಲಿ ವ್ಯಾ ಪಾರ ಮಾಡುವ ವ್ಯಾಪಾರಿಗಳಿಗೆ ಸಂತೆ ಮಾರುಕಟ್ಟೆ ಒಳಗಡೆ ವ್ಯಾಪಾರ ಮಾಡಲು ಅನುಕೂಲ ಕಲ್ಪಿಸಲಾಗಿದ್ದು ವರ್ತಕರು ಹಾಗೂ ಸಾರ್ವಜನಿಕರು ಸಹಕರಿಸಲು ಕೋರಿದೆ.

Related posts

ಅಳದಂಗಡಿ: ಆಯಾನ್ಸ್ ಮೊಬೈಲ್ ಮಾಲಕ ಅರಿಹಂತ್ ಜೈನ್ ರವರ ಪತ್ನಿ ಪಲ್ಲವಿ ಜೈನ್ ನಿಧನ

Suddi Udaya

ಕಳಿಯ: ಮನೆಗೆ ನುಗ್ಗಿದ್ದ ಕಳ್ಳರು : ಸುಮಾರು ರೂ.46450 ಮೌಲ್ಯದ ಸೊತ್ತುಗಳು ಕಳವು

Suddi Udaya

ಪಡ್ಡಂದಡ್ಕ ನಿವೃತ್ತ ಮುಖ್ಯೋಪಾಧ್ಯಾಯ ತಿರುಮಲೇಶ್ವರ ಭಟ್ಟರಿಗೆ ‘ಹವ್ಯಕ ಶಿಕ್ಷಕ ರತ್ನ’ ಪ್ರಶಸ್ತಿ

Suddi Udaya

ಮಡಂತ್ಯಾರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದಿಂದ ಮಳೆಗಾಲದ ಠೇವಣಿ ಹಾಗೂ ಚಿನ್ನಾಭರಣ ಸಾಲಕ್ಕೆ ಹೊಸ ಆಫರ್ ಬಿಡುಗಡೆಯ ಕರಪತ್ರ ಬಿಡುಗಡೆ

Suddi Udaya

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸಿಂಹ ಸಂಕ್ರಾಂತಿ ಕೊಪ್ಪರಿಗೆ ಏರುವ ಶುಭ ಸಂದರ್ಭ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೇರಿದಂತೆ ಅನೇಕ ಭಕ್ತರು ಭಾಗಿ

Suddi Udaya

ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ವತಿಯಿಂದ 79ನೇ ಸ್ವಾತಂತ್ರೋತ್ಸವ ಆಚರಣೆ

Suddi Udaya
error: Content is protected !!