April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿ

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಿತ್ ಶಿವರಾಮ್ ರವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಬೆಳ್ತಂಗಡಿ: ಬ್ಲಾಕ್ ಕಾಂಗ್ರೆಸ್ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಿತ್ ಶಿವರಾಮ್ ರವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಎ.17 ರಂದು ಗುರುವಾಯನಕೆರೆಯ ಕಿನ್ಯಮ್ಮ ಯಾನೆ ಗುಣವತಿಯಮ್ಮ ಸಭಾ ಭವನದಲ್ಲಿ ಜರುಗಿತು.
ಸಭಾ ಕಾರ್ಯಕ್ರಮದಲ್ಲಿ ಕೆ. ಪಿ. ಸಿ. ಸಿ ಮಾಧ್ಯಮ ವಕ್ತಾರರಾದ ನಿಕೇತ್ ರಾಜ್ ಮೌರ್ಯ ರವರು ಪ್ರಧಾನ ಭಾಷಣ ಮಾಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಎಂ.ಎಲ್.ಸಿ ಹರೀಶ್ ಕುಮಾರ್ , ಅಭ್ಯರ್ಥಿ ರಕ್ಷಿತ್ ಶಿವರಾಂ, ಚಲನಚಿತ್ರ ನಟ ವಿಜಯ ರಾಘವೇಂದ್ರ, ಮಾಜಿ ಶಾಸಕರಾದ ಕೆ. ವಸಂತ ಬಂಗೇರ, ಕೆ. ಪಿ. ಸಿ. ಸಿ ಸಂಯೋಜಕರಾದ ಶಾಹಿದ್ ತೆಕ್ಕಿಲ್ , ಪ್ರಮುಖರಾದ ಪ್ರತಿಭಾ ಕುಳಾಯಿ, ರಾಜಶೇಖರ ಅಜ್ರಿ, ಕೇಶವ ಗೌಡ ಬೆಳಾಲು, ಮೋಹನ್ ಶೆಟ್ಟಿಗಾರ್, ಶೇಖರ್ ಕುಕ್ಕೇಡಿ, ಶಾಹುಲ್ ಹಮೀದ್, ಮೋಹನ್ ಗೌಡ, ಸತೀಶ್

ಕಾಶಿಪಟ್ಣ, ಭಗೀರಥ ಜಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್, ಹಾಗೂ ರಂಜನ್ ಗೌಡ, ಅಬ್ದುಲ್ ರಹಿಮಾನ್ ಪಡ್ಪು, ಎ.ಸಿ ಮ್ಯಾಥ್ಯೂ, ಲೋಕೇಶ್ವರಿ ವಿನಯಚಂದ್ರ,

ಜೆಸಿಂತಾ ಮೋನಿಸ್, ಬಿ.ಎಂ ಹಮೀದ್, ಪ್ರಶಾಂತ್ ವೇಗಸ್, ಪ್ರವೀಣ್ ವಿ.ಜಿ, ದಿನೇಶ್ ಕೋಟ್ಯಾನ್, ಬಾಲಕೃಷ್ಣ ಗೌಡ, ಮತ್ತು ಜಿಲ್ಲಾ ಮಟ್ಟದ ಪಕ್ಷದ ನಾಯಕರುಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ವಿವಿಧ ಪಕ್ಷಗಳ ನೂರಾರು ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.


ಬಹಿರಂಗ ಚುನಾವಣಾ ಪ್ರಚಾರ ಸಭಾ ಕಾರ್ಯಕ್ರಮ ಮುಗಿದ ನಂತರ ಮೆರವಣಿಗೆಯಲ್ಲಿ ತೆರಳಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ನಾಮಪತ್ರ ಸಲ್ಲಿಸಲಿದ್ದಾರೆ.
.

Related posts

ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಶಾಂತಿವನದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬೆಳ್ತಂಗಡಿ:ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಕೆ. ಹರೀಶ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಗಂಗಾಧರ ಮಿತ್ತಮಾರು ಅವಿರೋಧ ಆಯ್ಕೆ

Suddi Udaya

ಉಜಿರೆ: ಎಸ್.ಡಿ.ಎಂ. ಕಾಲೇಜಿನಲ್ಲಿ ಸಮಾಜಕಾರ್ಯ ಪದವೀಧರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದಲ್ಲಿ ಸಿನರ್ಜಿ ಎಚ್‌ಆರ್‌ಡಿ ಸರಣಿ ಕಾರ್ಯಕ್ರಮ

Suddi Udaya

ಅಳದಂಗಡಿ ಅರಸರಿಂದ ಗಣೇಶ್ ಪೂಜಾರಿ ಬೊಂಟ್ರೋಟ್ಟು ಅವರಿಗೆ ಪಟ್ಟಿ ಪ್ರದಾನ

Suddi Udaya

ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಂಜನಾ ಎಂ.ಡಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬೆಳಾಲು ಎಸ್.ಡಿ.ಎಮ್. ಅನುದಾನಿತ ಪ್ರೌಢಶಾಲೆಯಲ್ಲಿ ವಲಯ ಮಟ್ಟದ ತ್ರೋಬಾಲ್ ಪಂದ್ಯಾಟ

Suddi Udaya
error: Content is protected !!