
ಬೆಳ್ತಂಗಡಿ : ತಾಲೂಕು ಆಸ್ಪತ್ರೆ ಬೆಳ್ತಂಗಡಿ ಇಲ್ಲಿ ತಾಲೂಕಿನ ಎಲ್ಲಾ ವಿಕಲಚೇತನ ಗುರುತಿನ ಚೀಟಿಯ ನವೀಕರಣ ಮಾಡಲು ಹಾಗೂ ಹೊಸ ಗುರುತಿಸುವಿಕೆಯ ಶಿಬಿರವನ್ನು ತಾಲೂಕು ಆಸ್ಪತ್ರೆ ಬೆಳ್ತಂಗಡಿಯಲ್ಲಿ ವಿಕಲಚೇತನ ಮೇಲ್ವಿಚಾರಕರು (MRW ) ರವರಾದ ಜೋನ ಬ್ಯಾಪಿಸ್ಟ್ ರವರ ಮುಂದಾಳತ್ವದಲ್ಲಿ ಎ.18 ರಂದು ನಡೆಸಲಾಯಿತು.

ಶಿಬಿರದಲ್ಲಿ ತಾಲೂಕಿನ ಗ್ರಾಮೀಣ ಪೂರ್ವ ವಸತಿ ಕಾರ್ಯಕರ್ತರಾದ ವಿಪುಲ್, ಗ್ರಾಮ ಪಂಚಾಯತ್ ಉಜಿರೆ, ಚಿರಂಜೀವಿ ಗ್ರಾಮ ಪಂಚಾಯತ್ ಕಣಿಯೂರು, ರಾಧಿಕಾ ಗ್ರಾಮ ಪಂಚಾಯತ್ ಇಳoತಿಲ, ಕೀರ್ತನ್ ಗ್ರಾಮ ಪಂಚಾಯತ್ ಕೊಯ್ಯುರು, ಹರೀಶ್ ಗ್ರಾಮ ಪಂಚಾಯತ್ ಶಿರ್ಲಾಲು, ಶಮೀಮ ಭಾನು ಗ್ರಾಮ ಪಂಚಾಯತ್ ಪುದುವೆಟ್ಟು, ಮಾನಸ ಗ್ರಾಮ ಪಂಚಾಯತ್ ಗೇರುಕಟ್ಟೆ, ಪೌಝಿಯಾ ನಗರ ಪಂಚಾಯತ್ ಬೆಳ್ತಂಗಡಿ ಉಪಸ್ಥಿತರಿದ್ದರು.
ಜಿಲ್ಲಾ ವೈದ್ಯಕೀಯ ಮಂಡಳಿ ಅನೇಕ ಬುದ್ದಿ ಮಂಧ್ಯ ಮಾನಸಿಕ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವಲ್ಲಿ ಸಹಕರಿಸಿ ಸೌಲಭ್ಯ ವನ್ನು ಪಡೆದುಕೊಂಡರು.











