25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನ್ಯಾಯವಾದಿ ಮೇಲೆ ದಾಳಿ: ಹಿಂದೂ ಜನಜಾಗೃತಿ ಸಮಿತಿಯಿಂದ ಬೆಳ್ತಂಗಡಿ ತಹಶೀಲ್ದಾರರಿಗೆ ಮನವಿ

ಬೆಳ್ತಂಗಡಿ: ಕರ್ನಾಟಕದಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಹಿಂದೂಗಳ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದ ಹಿಂದುತ್ವನಿಷ್ಠ ನ್ಯಾಯವಾದಿ ಕೃಷ್ಣಮೂರ್ತಿಯವರ ಮೇಲಿನ ದಾಳಿಯನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸಿದೆ. ದಾಳಿಯ ಹಿಂದೆ ಪಿ.ಎಫ್.ಐ ಅಥವಾ ನಕ್ಸಲ್‌ವಾದಿಗಳ ಕೈವಾಡವಿದೆಯೇ ಎಂದು ಪತ್ತೆ ಹಚ್ಚಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಬೆಳ್ತಂಗಡಿ ತಹಶೀಲ್ದಾರರಾದ ಟಿ. ಸುರೇಶ್ ಕುಮಾರ್ ರವರಿಗೆ ಮನವಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ವಕೀಲರುಗಳಾದ ಶ್ರೀ ಉದಯಕುಮಾರ್ ಬಿ.ಕೆ, ಶ್ರೀ ಪ್ರಕಾಶ್ ಬೆಳ್ತಂಗಡಿ, ಶ್ರೀ ಆನಂದ ಗೌಡ ತೆರಿಗೆ ಸಲಹೆಗಾರರು ಬೆಳ್ತಂಗಡಿ,ಶ್ರೀ ಕೇಶವ ಅಚ್ಚಿ ನಡ್ಕ, ಶ್ರೀ ಮುರಳಿದರ ಸಾರ್ವಜನಿಕ ಶಾರದೋತ್ಸವ ಸಮಿತಿಯ ಅಧ್ಯಕ್ಷರು ಬೆಳ್ತಂಗಡಿ, ಶ್ರೀ ಶ್ರೀಶ ಭಟ್ ನಂದ ಗೋಕುಲ ಗೋಶಾಲ ಪ್ರಬಂಧಕರು ಕಳೆಂಜ, ಸೌ. ಕಮಲಾ ಪೈ ಉಜಿರೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ: ರೂ. 32 ಲಕ್ಷ ನಿವ್ವಳ ಲಾಭ, ಶೇ.9 ಡಿವಿಡೆಂಡ್

Suddi Udaya

ಸೇವಾಭಾರತಿಯಿಂದ ಈ ವರ್ಷದ “ಸೇವಾ ಶ್ರೇಷ್ಠ -2024” ಪುರಸ್ಕಾರ:

Suddi Udaya

ಎಕ್ಸೆಲ್ ಕಾಲೇಜಿನಲ್ಲಿ ಪ.ಪೂ. ವಿಜ್ಞಾನ ವಿಭಾಗದ ಶೈಕ್ಷಣಿಕ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಜ್ಯೋತಿ ಆಸ್ಪತ್ರೆಗೆ ಆಳ್ವಾಸ್ ಕಾಲೇಜು ಅಡ್ಮಿಸ್ರಶನ್ ವಿಭಾಗದ ವಿದ್ಯಾರ್ಥಿಗಳು ಭೇಟಿ

Suddi Udaya

ಚಿರಂಜೀವಿ ಶೆಟ್ಟಿ ನಾಳ ನಿರ್ಮಾಣದ ‘ಮೃತ್ಯುಂಜಯ’ ಮೈರಲ್ಕೆ ಶ್ರೀ ಕಿರಾತಮೂರ್ತಿ ದೇವಸ್ಥಾನದ ಭಕ್ತಿ ಗೀತೆ ಬಿಡುಗಡೆ

Suddi Udaya

ಲೋಕಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ ಯುವ ಮತದಾರರೊಂದಿಗೆ ಸಂವಾದ

Suddi Udaya
error: Content is protected !!