24 C
ಪುತ್ತೂರು, ಬೆಳ್ತಂಗಡಿ
April 3, 2025
ಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿ

2024 ಫೆಬ್ರವರಿ ತಿಂಗಳಲ್ಲಿ ವೇಣೂರು ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ

ಉಜಿರೆ: ಶ್ರೀ ಬಾಹುಬಲಿ ಸ್ವಾಮಿ ಕ್ಷೇತ್ರ ವೇಣೂರುನಲ್ಲಿ ಬಾಹುಬಲಿ ಸ್ವಾಮಿಯ ಮಹಾಮಸ್ತಭಿಷೇಕ ಬರುವ 2024 ರ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ಸಿದ್ಧವನ ಗುರುಕುಲದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಕ್ರಿ.ಶ 1604 ರಲ್ಲಿ ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮೂರ್ತಿಯು ಪ್ರತಿಷ್ಠಾಪನೆ 36 ಅಡಿ ಎತ್ತರದ ಏಕಶಿಲಾ ವಿಗ್ರಹವಾಗಿದ್ದು ವೇಣೂರು ಅಜಿಲ ವಂಶದ ಅರಸರಾದ ವೀರ ತಿಮ್ಮಣ್ಣಾಜಿಲ ರಿಂದ ಸ್ಥಾಪನೆಯಾಗಿದೆ. ಕರ್ನಾಟಕದ ಏಕಶಿಲಾ ವಿಗ್ರಹಗಳ ಪೈಕಿ 4ನೇಯದು ಅತ್ಯಂತ ಎತ್ತರವಾದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮೂರ್ತಿಯಾಗಿದ್ದು, ಆಚಾರ್ಯ ಶ್ರೀಗಳವರು ಅಥವಾ ದಿಗಂಬರ ಮುನಿಶ್ರೀಗಳವರ ಪಾವನ ಉಪಸ್ಥಿತಿಯಾಗಿದೆ. ಈ ಹಿಂದೆ ವೇಣೂರಿನಲ್ಲಿ ಪ್ರಾಚೀನ ಏಳು ಬಸದಿಗಳ ಉಸ್ತುವಾರಿಗಾಗಿ (ಶ್ರೀ ಬಾಹುಬಲಿ ಬೆಟ್ಟ ಸೇರಿ ) 1950 ರಲ್ಲಿ ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ರಚನೆಯಾಗಿದೆ. ಸಮಿತಿ ರಚನೆಯಾದ ಬಳಿಕ 1956 ರಲ್ಲಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ 1971 ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭಗವಾನ್ ಬಾಹುಬಲಿ ಸ್ವಾಮಿಯ ಮೂರ್ತಿಯ ಸಾಗಾಟದ ಸಂದರ್ಭದಲ್ಲಿ ವೇಣೂರು ಶ್ರೀ ಬಾಹುಬಲಿ ಸ್ವಾಮಿಗೆ ಕ್ಷೇತ್ರದ ವತಿಯಿಂದ ಒಂದು ದಿನದ ಮಹಾಮಸ್ತಕಾಭಿಷೇಕನಡೆಯಿತು. 1998-99 ರಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೊತ್ಥಾನ ಟ್ರಸ್ಟ್ ವತಿಯಿಂದ ಮಾತೃ ಶ್ರೀ ರತ್ನಮ್ಮ ಹೆಗ್ಗಡೆಯವರ ಮುತುವರ್ಜಿಯಲ್ಲಿ ಪೂಜ್ಯ ಹೆಗ್ಗಡೆಯವರ ಆಶಿರ್ವಾದದೊಂದಿಗೆ ಬಾಹುಬಲಿ ಸ್ವಾಮಿಯ ಪೀಠದ ದುರಸ್ತಿ ಕಾಮಗಾರಿ ನಡೆದಿದೆ.

2000 ನೇ ಇಸವಿಯಲ್ಲಿ ಶತಮಾನದ ಮೊದಲ ಮಹಾಮಸ್ತಕಾಭಿಷೇಕ ಶ್ರವಣಬೆಳಗೊಳ ಶ್ರೀಗಳವರ ಮಾರ್ಗದರ್ಶನ ಹಾಗೂ ಮೂಡಬಿದಿರೆ ಶ್ರೀಗಳವರ ನೇತೃತ್ವ ಹಾಗೂ ಸಮಸ್ತ ಭಟ್ಟರಕರುಗಳ ಆಶೀರ್ವಾದ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿಗಳ ಪೂರ್ಣ ಮಾರ್ಗದರ್ಶನ ಹಾಗೂ ಸಹಕಾರ ಅಜಿಲವಂಶಸ್ಥ ಅರಸರ ಉಪಸ್ಥಿತಿಯೊಂದಿಗೆ ಜರುಗಿತು.

ಪತ್ರಿಕಾಗೋಷ್ಠಿಯಲ್ಲಿ ಮೂಡಬಿದ್ರೆ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಡಿ. ಸುರೇಂದ್ರ ಕುಮಾರ್, ಅಳದಂಗಡಿ ತಿಮ್ಮಣ್ಣ ಅರಸರಾದ ಡಾ. ಪದ್ಮಪ್ರಸಾದ ಅಜಿಲ, ಪ್ರವೀಣ್ ಕುಮಾರ್ ಇಂದ್ರ ಉಪಸ್ಥಿತರಿದ್ದರು.

Related posts

ಮಾರುತಿ ಕಾರಿನಲ್ಲಿ 1.550 ಕೆ.ಜಿ. ಗಾಂಜಾ ಪತ್ತೆ: ಕೊಟ್ಟಿಗೆಹಾರದಲ್ಲಿ ಆರೋಪಿ ಬಂಧನ

Suddi Udaya

ತೋಟಾತ್ತಾಡಿ:ಜುಗಾರಿ ಅಡ್ಡೆಗೆ ಪೊಲೀಸರ ದಾಳಿ

Suddi Udaya

ಸಾಮಾಜಿಕ ಜಾಲತಾಣದಲ್ಲಿ ಕುಣಿತ ಭಜನೆಯ ಕುರಿತು ಅವಹೇಳನ ಬರಹ : ಸೂಕ್ತ ಕಾನೂನು ಕ್ರಮಕ್ಕಾಗಿ ಕುಣಿತ ಭಜನಾ ತರಬೇತುದಾರರಿಂದ ಧರ್ಮಸ್ಥಳ ಠಾಣೆಯಲ್ಲಿ ದೂರು

Suddi Udaya

ಮಾಲಾಡಿ ಬಿ ಎಂ ಆಟೋ ಚಾಲಕ ಮಾಲಕರ ಸಂಘ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳ್ತಂಗಡಿ: ಜೆಪಿ ಅಟ್ಯಾಕ್ರ್ಸ್ ಪ್ರಾಯೋಜಕತ್ವದಲ್ಲಿ ತಾಲೂಕು ಮಟ್ಟದ ಅಂಡರ್ ಆರ್ಮ್ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ

Suddi Udaya

ಕೊಕ್ಕಡ ಡೇವಿಡ್ ಜೈಮಿ ಮನೆಗೆ ಎನ್.ಎಸ್.ಎಸ್ ವಿದ್ಯಾರ್ಥಿಗಳ ತಂಡ ಭೇಟಿ

Suddi Udaya
error: Content is protected !!