ಕಾಶಿಪಟ್ಟಣ; ಎನ್.ಎಸ್.ಎಸ್ ಶಿಬಿರವು ವಿದ್ಯಾರ್ಥಿಯ ಸರ್ವಾಂಗಿನ ಬೆಳವಣಿಗೆಗೆ ಒಂದು ಉತ್ತಮವಾದ ವೇದಿಕೆಯಾಗಿದೆ ಎನ್.ಎಸ್.ಎಸ್ ನಲ್ಲಿ ವಿದ್ಯಾರ್ಥಿ ಪರಿಸರದ ಮಹತ್ವ ಗ್ರಾಮಸ್ಥರೊಂದಿಗೆ ಒಡನಾಟ ಸ್ವಚ್ಛತೆ ಸಮಯ ಪರಿಪಾಲನೆ ಮುಂತಾದ ಜೀವನಕ್ಕೆ ಬೇಕಾದ ಅತ್ಯಮೂಲ್ಯವಾದ ವಿಷಯಗಳನ್ನು ಕಲಿಯುತ್ತಾರೆ ಎಂದು ವಂ. ಸ್ವಾಮಿ ಸೈಮನ್ ಡಿಸೋಜ ಸಂಚಾಲಕರು ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳು ನಾರಾವಿ ಅವರು ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೇಳದ ಪೇಟೆ ಕಾಶಿಪಟ್ಟಣ ಇಲ್ಲಿ ನಡೆಯುತ್ತಿದ್ದ ಸಂತ ಅಂತೋನಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ ಆಲ್ವಿನ್ ಸೆರಾವೋ “ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸ ಸದಾ ಯಶಸ್ಸನ್ನು ತಂದುಕೊಡುತ್ತದೆ ಎಂದು ಹೇಳಿದರು. “
ವೇದಿಕೆಯಲ್ಲಿದ್ದ ದ.ಕ.ಜಿ.ಪಂ.ಹಿರಿಯ ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯರಾದ ಪ್ರಶಾಂತ್ ಎ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯಕ್ಕಾಗಿ ಶುಭ ಹಾರೈಸಿದರು. ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಕೇಳದಪೇಟೆ ಇಲ್ಲಿನ S.D.M.C ಸದಸ್ಯರು ಸಂತ ಅಂತೋನಿ ಕಾಲೇಜು ನಾರಾವಿ ಇಲ್ಲಿನ ಎನ್.ಎಸ್.ಎಸ್ ಯೋಜನಾಧಿಕಾರಿಯಾದ ದಿನೇಶ್ ಬಿ.ಕೆ ಅವರ ಸೇವೆಗಾಗಿ ಸನ್ಮಾನಿಸಿದರು.
ವೇದಿಕೆಯಲ್ಲಿ ಕೃಷ್ಣಮೂರ್ತಿ ಭಟ್ ಕೇಳದ ಪೇಟೆ, ಅಶೋಕ್ ಕೋಟ್ಯಾನ್ ಪಡೋಡಿ, ಶಿವಪ್ರಸಾದ್ ಮೆರ್ಕಲ್, ಎಸ್.ಡಿ.ಎಮ್.ಸಿ. ಅಧ್ಯಕ್ಷ ಪ್ರಕಾಶ್ ಮಜಲಡ್ಕ, ಹಾಗೂ ಉಪಾಧ್ಯಕ್ಷೆ ಶ್ರೀಮತಿ ಚಿತ್ರ, ಸಂತ ಅಂತೋನಿ ಪದವಿ ಕಾಲೇಜಿನ ಉಪಪ್ರಾಂಶುಪಾಲ ಸಂತೋಷ್ ಸಲ್ದಾನ, ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘ ಅಧ್ಯಕ್ಷ ಜಯಪ್ರಸಾದ್ ಕೆ, ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘ ಕಾರ್ಯದರ್ಶಿ ಶಶಿಕಾಂತ್ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಸಹಶಿಬಿರಾಧಿಕಾರಿಯಾದ ಸಂತೋಷ್ ಸ್ವಾಗತಿಸಿದರು, ಸಹ ಶಿಬಿರಾಧಿಕಾರಿ ಕುಮಾರಿ ಅಶ್ಮಿತಾ ಸೆರಾವೋ ಧನ್ಯವಾದವಿತ್ತರು. ಸಹಶಿಬಿರಾಧಿಕಾರಿ ಅವಿನಾಶ್ ಲೋಬೊ ಕಾರ್ಯಕ್ರಮವನ್ನು ನಿರೂಪಿಸಿದರು. ನಿಕಟಪೂರ್ವ ಯೋಜನಾಧಿಕಾರಿ ಅವಿಲ್ ಮೊರಸ್, ಉಪನ್ಯಾಸಕರಾದ ಪ್ರದೀಪ್ ಬಿ, ಶ್ರೀಮತಿ ಛಾಯಾ ತುಳುಪುಳೆ, ಶ್ರೀ ಪ್ರಕಾಶ್ ಹಾಗೂ ಎನ್.ಎಸ್.ಎಸ್ ಕಾರ್ಯದರ್ಶಿ ಸುಹಾಸ್ ಹಗ್ಡೆ ಹಾಗೂ ಕುಮಾರಿ ನವ್ಯಶ್ರೀ ಸಹಕರಿಸಿದರು.