ವೇಣೂರು: ನಿಷೇದಿತ ಮಾದಕ ವಸ್ತು ಗಾಂಜಾವನ್ನು ಸೇವಿಸಿ ಸಾವ೯ಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿದ ನಾಲ್ಕು ಮಂದಿಯನ್ನು ವೇಣೂರು ಪೊಲೀಸರು ವಶಕ್ಕೆ ಪಡೆದ ಪ್ರಕರಣ ಎ.23 ರಂದು ವರದಿಯಾಗಿದೆ.
ಶ್ರೀಶೈಲ ದುಂಡಪ್ಪ ಮುರಗೋಡು ಪೊಲೀಸ್ ಉಪ ನಿರೀಕ್ಷಕರು ವೇಣೂರು ತನ್ನ ಸಿಬ್ಬಂದಿಯವ
ರೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ, ಎ. 23 ರಂದು ಬೆಳಗ್ಗಿನ ಜಾವ 5 ಗಂಟೆಗೆ ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ ವೇಣೂರು ಕೆಳಗಿನ ಪೇಟೆ ಸಾರ್ವಜನಿಕ ಬಸ್ಸು ನಿಲ್ದಾಣದ ಬಳಿ ಆರೋಪಿತರುಗಳಾದ ಕೆ.ಆರ್ ಪುರಂ ಬೆಂಗಳೂರು ಗ್ರಾಮಾಂತರದ ವಾರಣಾಸಿ ಗ್ರಾಮದ ನಿವಾಸಿಗಳಾದ ಗೌರಿಶಂಕರ್ ಆರ್(19 ವರ್ಷ), ವಿಶ್ವಾಸ್ ,ಮನು ಪಿ(19 ವರ್ಷ), ಅಭಿ ಕೆ.ಎಲ್( 19 ವರ್ಷ), ಮೋಹನ್ ರಾಜ್ ಎಸ್(18 ವರ್ಷ) ಟಾಟಾ ಕ್ವಾಲಿಸ್ ಕಾರನ್ನು ನಿಲ್ಲಿಸಿ ಯಾವುದೋ ಅಮಲು ಪದಾರ್ಥ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದವರನ್ನು ವಿಚಾರಿಸಲಾಗಿ ಆರೋಪಿತರುಗಳು ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಸೇವಿಸಿರುವುದಾಗಿ ತಪ್ಪೊಪ್ಪಿಕೊಂಡರೆನ್ನಲಾಗಿದೆ.
ಆರೋಪಿತರನ್ನು ವಶಕ್ಕೆ ಪಡೆದು ಕಾರನ್ನು ಸ್ವಾಧೀನಪಡಿಸಿ, ಆರೋಪಿತರುಗಳನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಸೇವಿಸಿರುವುದು ದೃಢಪಟ್ಟಿದ್ದು, ಆರೋಪಿತರುಗಳ ವಿರುದ್ಧ ಸ್ವ-ಫಿರ್ಯಾದಿಯನ್ನು ತಯಾರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.