September 6, 2026
ಅಪರಾಧ ಸುದ್ದಿಜಿಲ್ಲಾ ಸುದ್ದಿ

ಹಾಡುಹಗಲೇ ರೂ.3.11 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಬಂಟ್ವಾಳ: ಮನೆಯಲ್ಲಿ ಇರಿಸಿದ್ದ ಬೀಗದಿಂದಲೇ ಮನೆಯ ಬಾಗಿಲು ತೆರೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ಇರಾದಲ್ಲಿ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಹಗಲು ಹೊತ್ತಿನಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಗ್ರಾಮಾಂತರ ಪೋಲೀಸ್ ಠಾಣೆಗೆ ಮನೆಯ ಮಾಲಕಿ ರೋಹಿಣಿ ದೂರು ನೀಡಿದ್ದಾರೆ.

ರೋಹಿಣಿ ಹಾಗೂ ಅವರ ಗಂಡ ಇಬ್ಬರು ಮನೆಗೆ ಬೀಗ ಹಾಕಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಅದೇ ರೀತಿ ಮಾ.7.ರಂದು ಮನೆಯಿಂದ ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದರು. ಕೆಲಸಕ್ಕೆ ಹೋಗುವ ವೇಳೆ ಮನೆಗೆ ಬೀಗ ಹಾಕಿ ಬೀಗದ ಕೀಯನ್ನು ಬಚ್ಚಲು ಕೋಣೆಯಲ್ಲಿ ಇರಿಸಿ ಹೋಗುತ್ತಿದ್ದರು.ನಿನ್ನೆಯೂ ಅದೇ ರೀತಿ ಬೀಗದ ಕೀಯನ್ನು ಬಚ್ಚಲು ಮನೆಯ ಕಿಟಕಿ ಯಲ್ಲಿಟ್ಟು ತೆರಳಿದ್ದರು.

ಸಂಜೆ ಗಂಡ ಹೆಂಡತಿ ಕೆಲಸ ಮುಗಿಸಿ ಮನೆಗೆ ಬಂದು ನೋಡುವಾಗ ಮನೆಗೆ ಬೀಗ ಹಾಕಿತ್ತು.ಬೀಗ ತೆಗೆದು ಮನೆಯ ಒಳಗೆ ಹೋದಾಗ ಕೋಣೆಯಲ್ಲಿದ್ದ ಗೋದ್ರೆಜ್ ನಿಂದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಕೆಳಗೆ ಬಿದ್ದಿತ್ತು.ಗೊದ್ರೆಜ್ ಓಪನ್ ಮಾಡಿ ನೋಡಿದಾಗ ಅದರೊಳಗಿದ್ದ ಚಿನ್ನಾಭರಣಗಳು ಕಳವುವಾಗಿರು
ವುದು ಗಮನಕ್ಕೆ ಬಂದಿದೆ.
ಒಟ್ಟು 3,11,550 ರೂ ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಲಾಗಿದೆ. ಕಿವಿಯ ಬೆಂಡೋಳೆ ಅಂದಾಜು 10 ಗ್ರಾಂ, 3 ಉಂಗುರಗಳು ಅಂದಾಜು ತೂಕ 8 ಗ್ರಾಂ, ಹವಳದ ಸರ ಅಂದಾಜು ತೂಕ 20 ಗ್ರಾಂ ಹಾಗೂ ಅದರ ಪಕ್ಕದಲ್ಲಿ ಇಟ್ಟಿದ್ದ ಕರಿಮಣಿ ಸರ, ಅಂದಾಜು ತೂಕ 35 ಗ್ರಾಂ, 2 ಕೈಬಳೆಗಳು ಅಂದಾಜು ತೂಕ 20ಗ್ರಾಂ, ಇವುಗಳು ಕಳವಾಗಿದೆ. ಇವುಗಳ ಒಟ್ಟು ತೂಕ 93 ಗ್ರಾಂ ಆಗಿದೆ ಎನ್ನಲಾಗಿದೆ.ಸ್ಥಳಕ್ಕೆ ಗ್ರಾಮಾಂತರ ಎಸ್.ಐ.ಉದಯ ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ಕೊಕ್ಕಡ: ಮನೆಯಲ್ಲಿಟ್ಟ ಚಿನ್ನಾಭರಣ ಕಳ್ಳತನ

Suddi Udaya

ಕಲ್ಮಂಜ ನಿಡಿಗಲ್‌ನಲ್ಲಿ ಭೀಕರ ವಾಹನ ಅಪಘಾತ ಬೈಕ್‌ ಮತ್ತು ಸ್ಕಾಪಿ೯ಯೋ ನಡುವೆ ಅಪಘಾತ

Suddi Udaya

ಧರ್ಮಸ್ಥಳ ಲಕ್ಷದೀಪೋತ್ಞವಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನ ಉದ್ಘಾಟನೆ

Suddi Udaya

ನಾಳೆಯಿಂದ ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ: ಮಂಡ್ಯ ಜಿಲ್ಲೆಯ ಆರತಿಪುರದ ಪೂಜ್ಯ ಸಿದ್ಧಾಂತಕೀರ್ತಿ ಸ್ವಾಮೀಜಿ ಭಜನಾ ಕಮ್ಮಟ ಉದ್ಘಾಟನೆ

Suddi Udaya

ಕಳೆಂಜ: ಅಕ್ರಮ ಗೋ ಸಾಗಾಟ: ಇಬ್ಬರ ಬಂಧನ

Suddi Udaya

ಲಾಯಿಲದ ಹೊಸಕುಮೇರು ನಿವಾಸಿ ಯುವತಿ ಮಂಗಳೂರಿನಲ್ಲಿ ಆತ್ಮಹತ್ಯೆ

Suddi Udaya
error: Content is protected !!