24.8 C
ಪುತ್ತೂರು, ಬೆಳ್ತಂಗಡಿ
March 7, 2026
ಪ್ರಮುಖ ಸುದ್ದಿ

ಉಜಿರೆ ಶ್ರೀ ಧ.ಮಂ ಕಾಲೇಜು ವತಿಯಿಂದ ನಿವೃತ್ತ ಕರ್ನಲ್ ನಿತಿನ್ ಭಿಡೆ ಅವರಿಗೆ ಸನ್ಮಾನ

ಉಜಿರೆ: ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಹರಿಸುವ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಿದ್ಧವಾಗಬೇಕು.ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕೌಶಲ್ಯವನ್ನು ವಿದ್ಯಾರ್ಥಿ ಜೀವನದಲ್ಲೇ ಆರಂಭಿಸಬೇಕು. ಎಂದು ಭಾರತೀಯ ಸೇನೆಯ ನಿವೃತ್ತ ಕರ್ನಲ್ ನಿತಿನ್ ಆರ್ ಭಿಡೆ ಅಭಿಪ್ರಾಯಪಟ್ಟರು.

ಶ್ರೀ ಧ. ಮಂ. ಡಿ.ಎಡ್. ಕಾಲೇಜು ಸಭಾಂಗಣದಲ್ಲಿ ಉಜಿರೆ ಎಸ್ ಡಿ ಎಮ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘವು ನಡೆಸಿಕೊಟ್ಟ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ “ಎಸ್ ಡಿ ಎಂ ನೆನಪಿನಂಗಳ” ಕಾರ್ಯಕ್ರಮದ ಮೂರನೇ ಸರಣಿಯಲ್ಲಿ ಗೌರವ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಯಾವುದೇ ದೌರ್ಬಲ್ಯಗಳನ್ನು ತೋರ್ಪಡಿಸದೇ ಎದುರಾಗುವ ಸವಾಲುಗಳನ್ನು ದಿಟ್ಟವಾಗಿ ಎದುರಿಸಬೇಕೆಂದು ಪ್ರೋತ್ಸಹಿಸಿದರು.ತಮ್ಮ ಕಾಲೇಜಿನ ದಿನಗಳನ್ನು ನೆನಪಿಸಿಕೊಂಡು ಇಂದಿನ ವಿದ್ಯಾರ್ಥಿಗಳೂ ಕೂಡ ಅಂದಿನ ವಿದ್ಯಾರ್ಥಿಗಳಂತೆ ಸವಾಲುಗಳಿಗೆ ಸೆಟೆದು ನಿಲ್ಲಬೇಕು,ಸವಾಲನ್ನೆದುರಿಸುವ ಕಿಚ್ಚನ್ನು ಮನದಲ್ಲಿ ಬೆಳೆಸಿಕೊಳ್ಳಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ ಎ ಕುಮಾರ ಹೆಗ್ಡೆ ಅವರು ನಿತಿನ್ ಭಿಡೆಯವರ ಪ್ರತಿಭೆ ಹಾಗೂ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಎನ್ ಸಿ ಸಿ ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ಕೆಡೆಟ್ ಗಳನ್ನು ಗೌರವಿಸಲಾಯಿತು ಮತ್ತು ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಯಾದ ಶಾಮ ಪ್ರಸಾದ್‌ಗೆ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ 5000 ರೂ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮ ದಲ್ಲಿ ಕೆಡೆಟ್ ರಾಘವೇಂದ್ರ ಸ್ವಾಗತಿಸಿದರು. ಕೆಡೆಟ್ ಗಳಾದ ಯಶ್ವಂತ್ ಮತ್ತು ಪ್ರತಿಮಾ ಅವರು ವಿದ್ಯಾರ್ಥಿ ಸಾಧಕರನ್ನು ಪರಿಚಯಿಸಿದರು. ಕೆಡೆಟ್ ಉದಿತ್ ಮುಖ್ಯ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕೆಡೆಟ್ ರಕ್ಷಿತಾ ವಂದಿಸಿದರು. ಕೆಡೆಟ್ ಸೀಮಾ ನಿರೂಪಿಸಿದರು. ಲೆಫ್ಟಿನೆಂಟ್ ಕಮಾಂಡರ್ ಡಾ. ಶ್ರೀಧರ್ ಭಟ್, ಲೆಫ್ಟಿನೆಂಟ್ ಶುಭಾ ರಾಣಿ, ನೆನಪಿನಂಗಳ ಕಾರ್ಯಕ್ರಮ ಸಂಯೋಜಕರು ಮತ್ತು ಪ್ರಾಧ್ಯಾಪಕರಾದ ಡಾ. ಎಂ. ಪಿ. ಶ್ರೀನಾಥ್, ಮತ್ತು ಶೈಲೇಶ್ ಕುಮಾರ್, ಶ್ರೀಮತಿ ಭಿಡೆ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ನಿಂದ ಅತ್ಯುತ್ತಮ ಗ್ರಾಮ ಪಂಚಾಯತ್ ಆಗಿ ಆಯ್ಕೆಯಾದ ಉಜಿರೆ ಗ್ರಾಮ ಪಂಚಾಯತ್ ಗೆ ಡಾ|| ಚಿಕ್ಕ ಕೋಮರಿ ಗೌಡ ದತ್ತಿ ಪ್ರಶಸ್ತಿ ಪ್ರದಾನ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನಲ್ಲಿ ತಾ| ಮಟ್ಟದ ಫುಟ್ ಬಾಲ್ ಪಂದ್ಯಾಟ

Suddi Udaya

ಕಾಪಿನಡ್ಕ: ರಾಜ್ಯ ಹೆದ್ದಾರಿಯ ಪಕ್ಕದ ಗುಡ್ಡಕ್ಕೆ ಬೆಂಕಿ: ಅಗ್ನಿಶಾಮಕ ಹಾಗೂ ಊರವರಿಂದ ಬೆಂಕಿ ನಂದಿಸುವ ಕಾರ್ಯ

Suddi Udaya

ಧಮ೯ಸ್ಥಳ: ದೂರುದಾರನ ಜೊತೆ ಬೊಳಿಯಾರ್ ನ ಹೊಸ ಜಾಗಕ್ಕೆ ಬಂದ ಎಸ್ ಐಟಿ ತಂಡ

Suddi Udaya

ಗುರುವಾಯನಕೆರೆ ಪೇಟೆಯಲ್ಲಿ ಬೀದಿ ನಾಯಿಗಳ ಹಾವಳಿ: ಶಾಲಾ ಮಕ್ಕಳು, ದ್ವಿಚಕ್ರ ವಾಹನ ಸವಾರರಿಗೆ ತಂದೊಡ್ಡಿದ ಸಂಕಷ್ಟ

Suddi Udaya

ಉಜಿರೆ ಗ್ರಾಮ ಪಂಚಾಯತ್ ನಲ್ಲಿ ವಿಶೇಷ ಚೇತನರ ವಿಶೇಷ ಗ್ರಾಮ ಸಭೆ

Suddi Udaya
error: Content is protected !!