ಬೆಳ್ತಂಗಡಿ: ಜನಪದ ಸಂದಿ ಪಾಡ್ದನದಲ್ಲಿ ಪ್ರಖ್ಯಾತರಾಗಿದ್ದ, ಮಾಚಾರು ಗೋಪಾಲ ನಾಯ್ಕ(88 ವಷ೯) ಎ.24 ರಂದು ನಿಧನರಾದರು.
ಜನಪದ ಸಂದಿ ಹೇಳುವುದರಲ್ಲಿ ಪ್ರಖ್ಯಾತ ರಾಗಿದ್ದ ಇವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತ ರಾಗಿದ್ದರು.
ಅವರು ಸೃಜಿಸಿರುವ ಸಿರಿ ಕಾವ್ಯದ ಎರಡು ಪಠ್ಯಗಳಿವೆ. ಮೊದಲನೆಯದು ಅವರು ಹಾಡಿದ ಪಠ್ಯ. 15,683 ಸಾಲುಗಳಿರುವ ದೀರ್ಘ ಪಠ್ಯ. ಎರಡನೆಯದು ಅವರು ಬರೆದುಕೊಳ್ಳಲು ಅನುಕೂಲವಾಗುವಂತೆ ಹೇಳಿದ ಪಠ್ಯ. ಇದು ಹಾಡಿದ ಪಠ್ಯದ ಅರ್ಧದಷ್ಟಿದೆ. ಹಾಡಿದ ಮತ್ತು ಹೇಳಿದ ಎರಡು ಪಠ್ಯಗಳು ನಾಯ್ಕ ಅವರ ಹೆಸರಿನಲ್ಲಿ ಮಾತ್ರ ಇವೆ. ತೌಲನಿಕ ಅಧ್ಯಯನಕ್ಕೆ ಮತ್ತು ಕಾವ್ಯ ನಿರ್ಮಾಣದ ನೆಲೆಗಳನ್ನು ಶೋಧಿಸುವುದಕ್ಕೆ ಅವರ ಈ ಎರಡು ಪಠ್ಯಗಳು ಸಹಾಯಕವಾಗಿವೆ.ಮೃತರು ಕುಟುಂಬಸ್ಥರನ್ನು ಅಗಲಿದ್ದಾರೆ.