April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಸಾವ್ಯ: ಶುಭೋದಯ ಯುವಕ ಮಂಡಲದಿಂದ ಸಾಮೂಹಿಕ ಶ್ರೀ ಶನೈಶ್ವರ ಪೂಜೆ

ಸಾವ್ಯ: ಶುಭೋದಯ ಯುವಕ ಮಂಡಲ ಇದರ ವತಿಯಿಂದ ನಡೆದ 12ನೇ ವರ್ಷದ ಸಾಮೂಹಿಕ ಶ್ರೀ ಶನೈಶ್ವರ ಪೂಜೆಯು ಎ.22 ರಂದು ಕೆಳ ಕಾಶಿಪಟ್ಣ ಅನಂತ ಅಶ್ರಣ್ಣ ರ ನೇತೃತ್ವದಲ್ಲಿ ನಡೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಆಶೀರ್ವಚನ ನೀಡಿದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಧರ್ಮದ ಉಳಿವಿಗಾಗಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಹೇಳಿದರು.

ನಂತರ ಧಾರ್ಮಿಕ ಪ್ರವಚನ ಮಾಡಿದ ಅಕ್ಷಯ ಗೋಖಲೆ ಅವರು ಮಾತನಾಡಿ ಸಂಘಟನೆಯ ಅಗತ್ಯತೆ, ಧರ್ಮದ ಉಳಿವಿಗಾಗಿ ಮಹಿಳೆಯರು ಮಾಡಬೇಕಾದ ಕರ್ತವ್ಯದ ಬಗ್ಗೆ ಹೇಳಿ ಭಾರತ ದೇಶದ ನೆಲ ಜಲ ಸಂಸ್ಕೃತಿ ಯ ಬಗ್ಗೆ ಹೇಳಿದರು.

ಸಭಾ ವೇದಿಕೆಯ ಅಧ್ಯಕ್ಷ ತೆಯನ್ನು ಯುವಕ ಮಂಡಲ ದ ಅಧ್ಯಕ್ಷರಾದ ರಕ್ಷಿತ್ ಆರ್ ಗುರುರಕ್ಷ ವಹಿಸಿದ್ದರು.
ವೇದಿಕೆಯಲ್ಲಿ ಯುವಕ ಮಂಡಲ ಗೌರವ ಅಧ್ಯಕ್ಷ ಶ್ರೀಧರ ಭೂತಡ್ಕ, ಕ್ಷೇಮ ಕ್ಲಿನಿಕ್ ನ ಶ್ರೀ ವಿಷ್ಣು ಕುಮಾರ್ ಹೆಗ್ಡೆ
ಸರಕಾರಿ ವಕೀಲರಾದ ಸತೀಶ್ ಕೆ, ಉಪಸ್ಥಿತರಿದ್ದರು.

ವಿನೀತ್ ಕೋಟ್ಯಾನ್ ಸ್ವಾಗತಿಸಿ, ಹರೀಶ್ ಹೆಗ್ಡೆ ವಂದಿಸಿದರು.
ಚೈತನ್ಯ ಕಲಾವಿದರು ಬೈಲೂರು ಇವರಿಂದ ವಾರ್ಡ್ ನಂಬರ್ 2 ನಾಟಕ ನಡೆಯಿತು.

Related posts

ಪಡಂಗಡಿ: ಕಾಂಗ್ರೆಸ್ ಕಾರ್ಯಕರ್ತ ನಝೀರ್ ಬಿಜೆಪಿ ಸೇರ್ಪಡೆ

Suddi Udaya

ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಿ ವೈ ವಿಜಯೇಂದ್ರರವರಿಗೆ ಶಾಸಕ ಹರೀಶ್ ಪೂಂಜರಿಂದ ಅಭಿನಂದನೆ

Suddi Udaya

ಸೌಜನ್ಯ ಕೊಲೆ ಪ್ರಕರಣ : ಮರು ತನಿಖೆಗೆ ಒತ್ತಾಯಿಸಿ ಆ.27: ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಗಳ ಬಿಜೆಪಿ ಶಾಸಕರುಗಳಿಂದ ಬೆಳ್ತಂಗಡಿಯ ಮಿನಿ ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ

Suddi Udaya

ಡಿ.21 :ಕೊಡಿಂಬಾಡಿಯಲ್ಲಿ ಲಲಿತ ಮೆಡಿಕಲ್ ಸ್ಟೋರ್‍ಸ್ ಶುಭಾರಂಭ

Suddi Udaya

ಕುತ್ಲೂರು ಕಾಡಬಾಗಿಲು ಸೇತುವೆ ಕುಸಿತ: ಸಂಕಷ್ಟದಲ್ಲಿ ಅರಣ್ಯವಾಸಿಗಳು

Suddi Udaya

ವಸಂತ ಬಂಗೇರ ಅವರ ನಿಧನಕ್ಕೆ ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟರಿಂದ ಸಂತಾಪ

Suddi Udaya
error: Content is protected !!