ಕಾಪಿನಡ್ಕ: ಶಿವಗಿರಿ ಕೃಪಾದಲ್ಲಿ ಅಂಧರ ಗೀತಾ ಗಾಯನ ಕಾರ್ಯಕ್ರಮ

Suddi Udaya

ಕಾಪಿನಡ್ಕ : ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ, ಹಿರಿಯರಾದ ವಸಂತ ಕೆ ಸಾಲ್ಯಾನ್ ರವರ ಶಿವಗಿರಿ ಕೃಪಾ ಮನೆಯಲ್ಲಿ ಎ.23 ರಂದು ಸತ್ಯನಾರಾಯಣ ಪೂಜೆ, ಅಂದ್ರ ಗೀತಾ ಗಾಯನ ಕಾರ್ಯಕ್ರಮ ಜರುಗಿತು.

ಪ್ರತೀವರ್ಷ ನಡೆಯುವ ಈ ಪೂಜಾ ಕಾರ್ಯಕ್ರಮವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಲು ಶ್ರೀ ಶಾರದಾ ಅಂಧರ ಗೀತಾ ಗಾಯನ ಕಲಾ ಸಂಘ ಮಂಗಳೂರು ಇವರ ಸಂಗೀತ ಕಾರ್ಯಕ್ರಮವನ್ನು ನಡೆಸಲಾಯಿತು.‌ ಅತ್ಯಂತ ಮಹತ್ವಪೂರ್ಣವಾದ ಸಂದೇಶವನ್ನು ಸಾರಿದ ಈ ಕಾರ್ಯಕ್ರಮ ಬಂದವರ ಮನಸು ಗೆದ್ದಿತು.

ತುಮಕೂರು, ಕಾರವಾರ, ಕಡೂರು, ಶೃಂಗೇರಿಯ ಒಂಬತ್ತು ಅಂಧ ಕಲಾವಿದರು ನಡೆಸಿಕೊಟ್ಟ ಈ ಕಾರ್ಯಕ್ರಮ‌ ಬದುಕಿಗೆ ಸ್ಫೂರ್ತಿಯನ್ನ ತುಂಬಿತು.ಕಾರ್ಯಕ್ರಮದಲ್ಲಿ ವಸಂತ ಸಾಲಿಯಾನ್ ಕುಟುಂಬಿಕರು ಎಲ್ಲಾ ಕಲಾವಿದರನ್ನು ಗುರುತಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ, ಹಿರಿಯರಾದ ವಸಂತ ಸಾಲ್ಯಾನ್, ಶ್ರೀಮತಿ ಜಲಜಾ ವಿ ಸಾಲಿಯಾನ್ , ಸಂತೋಷ್ ಕುಮಾರ್-ಭಾರತಿ ಸಂತೋಷ್, ಸುಜಯ ಆರ್ ಸಾಲಿಯಾನ್-ರಮೇಶ್ ಸಾಲಿಯಾನ್ ಇರ್ವತ್ತೂರು, ಯೋಗೀಶ್ ಪೂಜಾರಿ ಕಡ್ತಿಲ- ಸಂಧ್ಯಾಲಕ್ಷ್ಮಿ ಮಡಂತ್ಯಾರು, ಸೌಮ್ಯಲಕ್ಷ್ಮಿ- ರತ್ನಾಕರ ಸುವರ್ಣ ಮಂಗಳೂರು,ದಿವ್ಯಾಲಕ್ಷ್ಮಿ ಮತ್ತು ಮನೋಜ್ ಕುಮಾರ್ ಇರ್ವತ್ತೂರು,ರಾಜಲಕ್ಷ್ಮಿ- ಜೀವನ್ ಎನ್ ಉಪಸ್ಥಿತರಿದ್ದರು.

ಯುವಸಾಹಿತಿ ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!