ಬಣಕಲ್, ಕೊಟ್ಟಿಗೆಹಾರ ಭಾಗದ ಜನರ ಬಹುದಿನಗಳ ಬೇಡಿಕೆ ಸುಸಜ್ಜಿತ ಆರೋಗ್ಯ ಕೇಂದ್ರ “ಸಾಯಿಕೃಷ್ಣ ಹೆಲ್ತ್ ಸೆಂಟರ್ ಬಣಕಲ್”,ಇದರ ಉದ್ಘಾಟನಾ ಸಮಾರಂಭ ಎ.24 ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನಾಗೇಶ್ ಭಟ್ ತಳವಾರ್, ಶ್ರೀಮತಿ ಲಲಿತಾ ನಾಗೇಶ್, ಮತ್ತು ಶಕುಂತಳಾ ಇರ್ವತ್ರಾಯ ಬೆಂದ್ರಾಳ, ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಮುರಳಿಕೃಷ್ಣ ಇರ್ವತ್ರಾಯ, ವೈದ್ಯಕೀಯ ಅಧೀಕ್ಷಕರಾದ ಡಾ| ವಂದನಾ ಎಂ ಇರ್ವತ್ರಾಯ, ಆಡಳಿತ ನಿರ್ದೇಶಕರಾದ ನವೀನ್ ಭಟ್ ತಳವಾರ್, ಶ್ರೀಮತಿ ಭವ್ಯ ನವೀನ್, ಹೊಯ್ಸಳ ಹೆಲ್ತ್ ಕೇರ್ ಮೂಡಿಗೆರೆಯ ವೈದ್ಯಕೀಯ ನಿರ್ದೇಶಕರಾದ ಡಾ| ಅರ್ಪಿತಾ ಸಿಂಹ, ಆಸ್ಪತ್ರೆಯ ಆಡಳಿತಾಧಿಕಾರಿ ಜ್ಯೋತಿ ವಿ ಸ್ವರೂಪ್, ಶಂಕರನಾರಾಯಣ ಕೊಡೆಂಚ,ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ, ತುಳು ಶಿವಳ್ಳಿ ಸಭಾ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ, ಉಜಿರೆ ಜನಾರ್ದನ ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷರಾದ ನಾಗೇಶ್ ರಾವ್ ಮುಂಡ್ರುಪ್ಪಾಡಿ, ಉದ್ಯಮಿ ಗಿರೀಶ್ ಕುದ್ರೆಂತಾಯ ಧರ್ಮಸ್ಥಳ, ಪ್ರಸಾದ್ ಪೊಲ್ನಾಯ, ಡಾ| ಬಾಲಕೃಷ್ಣ ಶೆಟ್ಟಿ, ಸುದರ್ಶನ್ ಕುಮಾರ್ ಜೈನ್, ಹರಿಕೃಷ್ಣ ಇರ್ವತ್ರಾಯ ಬೆಂದ್ರಾಳ, ಸುರೇಶ್ ಭಟ್ ಕಟೀಲು, ಆಸ್ಪತ್ರೆಯ ವೈದ್ಯರುಗಳಾದ ಡಾ ಅಲ್ಬಿನ್, ಡಾ.ಮೌಲ್ಯ , ಡಾ. ಅಜೀತ್ ಹರಿ, ಆಸ್ಪತ್ರೆಯ ಸಿಬ್ಬಂದಿಗಳಾದ ಗಣೇಶ್, ಅನಂತ್ ಪ್ರಸಾದ್, ಹೈದರ್ ಅಲಿ ಉಪಸ್ಥಿತರಿದ್ದರು.
ಆಸ್ಪತ್ರೆಯಲ್ಲಿ ಹಲೋಪತಿ ವಿಭಾಗ, ಆಯುರ್ವೇದ ಮತ್ತು ಪಂಚಕರ್ಮ ವಿಭಾಗ, ಫಿಸಿಯೋಥೆರಪಿ ವಿಭಾಗ ಅಕ್ಯುಪಂಚರ್ (ಸೂಜಿ ಚಿಕಿತ್ಸೆ) ಮತ್ತು ಹೈಡ್ರೊಥೆರಪಿ(ಜಲಚಿಕಿತ್ಸೆ)ವಿಭಾಗವನ್ನೊಳಗೊಂಡ ಸುಸಜ್ಜಿತ ಆಸ್ಪತ್ರೆ ಇದಾಗಿದೆ.