ಬೆಳ್ತಂಗಡಿ: ಚುನಾವಣೆ ಹಿನ್ನೆಲೆಯಲ್ಲಿ ಮುಂಡಾಜೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಎ.29ರಂದು ವಾಹನಗಳ ವಿಶೇಷ ತಪಾಸಣೆ ನಡೆಸಲಾಯಿತು.
ಮುಂಡಾಜೆಯ ಭಿಡೆ ಕ್ರಾಸ್ ಬಳಿ ‘ಸರ್ಪ್ರೈಸ್ ಚೆಕ್ಕಿಂಗ್’ ಎಂಬ ಹೆಸರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ದಿಡುಪೆ-ಪೈಚಾರು ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಲ್ಲಿ ಸಂಚರಿಸುವವರ ಮಾಹಿತಿ ವಿವರ ಸಂಗ್ರಹಿಸುವುದರ ಜತೆ ಪ್ರಯಾಣಿಕರ ಸೊತ್ತುಗಳನ್ನು ತಪಾಸಣೆಯನ್ನು ಅರೆಸೇನಾ ಪಡೆಯ ಸಹಕಾರದಲ್ಲಿ ನಡೆಸಿದರು.
ತಾಲೂಕಿನ ಚಾರ್ಮಾಡಿ, ಕೊಕ್ಕಡ, ಪುಂಜಾಲಕಟ್ಟೆ,ನಾರಾವಿ ಮೊದಲಾದ ಕಡೆಗಳಲ್ಲಿ ಚುನಾವಣಾ ಹಿನ್ನೆಲೆಯಲ್ಲಿ ಈಗಾಗಲೇ ಚೆಕ್ ಪೋಸ್ಟ್ ಗಳು ಕಾರ್ಯನಿರ್ವಹಿಸುತ್ತಿದ್ದು, ವಾರಾಂತ್ಯ ಚುನಾವಣೆ ದಿನಾಂಕ ಸಮೀಪಿಸುತ್ತಿರುವ ಕಾರಣದಿಂದ ಈ ಬಿಗು ಕಾರ್ಯಾಚರಣೆ ನಡೆದಿದೆ. ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಪರೀತ ವಾಹನ ದಟ್ಟಣೆ ಇದ್ದು ಪೊಲೀಸರು ಪ್ರತಿ ವಾಹನವನ್ನು ತಪಾಸಣೆ ನಡೆಸಿದ ಬಳಿಕವೇ ಸಂಚರಿಸಲು ಅವಕಾಶ ನೀಡಲಾಯಿತು.