ಹೊಕ್ಕಾಡಿಗೋಳಿ: ಸ.ಉ.ಪ್ರಾ ಶಾಲೆ ಹೊಕ್ಕಾಡಿಗೋಳಿಯಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ರೈಶಾ ಸುಹಾನ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯವರಿಂದ ರಾಜ್ಯದ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸುವ 2022-23ನೇ ಸಾಲಿನ ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸರ್ಟಿಫಿಕೇಟ್ (ಎನ್.ಎಂ.ಎಂ.ಎಸ್) ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿರುತ್ತಾರೆ.
ಈ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಮುಂದಿನ ನಾಲ್ಕು ವರ್ಷಗಳ ಕಾಲ ಅಂದರೆ ಅವರ ಪಿಯುಸಿ ಶಿಕ್ಷಣದವರೆಗೆ ಮಾಸಿಕ ರೂಪಾಯಿ 1000 ದಂತೆ ವಿದ್ಯಾರ್ಥಿವೇತನವನ್ನು ಪಡೆಯಲಿದ್ದಾರೆ. ಬೆಳ್ತಂಗಡಿ ತಾಲೂಕಿನಿಂದ ಆಯ್ಕೆಯಾಗಿರುವ 30 ವಿದ್ಯಾರ್ಥಿಗಳಲ್ಲಿ ಒಬ್ಬರಾದ ಇವರು ಅಂಗರಕರಿಯದ ಅಬ್ದುಲ್ ರಝಾಕ್ ಹಾಗೂ ಶ್ರೀಮತಿ ಸಕೀನಾ ಇವರ ಪುತ್ರಿಯಾಗಿದ್ದಾರೆ.
ಇವರಿಗೆ ಶಾಲೆಯ ಶಿಕ್ಷಕರು ಮಾರ್ಗದರ್ಶನ ನೀಡಿರುತ್ತಾರೆ.