September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸಮಾಜದ ಮುಖಂಡ ಸತ್ಯಜಿತ್ ತೇಜೋವಧೆ ಮಾಡುತ್ತಿರುವುದನ್ನು ಖಂಡಿಸುತ್ತೇವೆ : ಎಂ.ಕೆ ಪ್ರಸಾದ್

ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸಮಾಜದ ಮುಖಂಡ ಶ್ರೀ ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ರವರನ್ನು ಶಾಸಕರು ಹಾಗೂ ಇವರ ಬೆಂಬಲಿಗರು ಫೇಸ್‌ಬುಕ್ ನಕಲಿ ಪೇಜ್ ಮತ್ತು ಖಾತೆಗಳಲ್ಲಿ ತೇಜೋವಧೆ ಮಾಡುತ್ತಿರುವುದನ್ನು ತಾಲೂಕಿನ ಎಲ್ಲಾ ಬಿಲ್ಲವ ಸಂಘಗಳು ಒಕ್ಕೊರಳಿನಿಂದ ಖಂಡಿಸುತ್ತೇವೆ ಎಂದು ಯುವ ವಾಹಿನಿ ಮಂಗಳೂರು ಇದರ ಅಧ್ಯಕ್ಷ ಎಂ.ಕೆ ಪ್ರಸಾದ್ ಹೇಳಿದರು.

ಅವರು ಮೇ.1 ರಂದು ಬೆಳ್ತಂಗಡಿ ಶ್ರೀ ಗುರುನಾರಾಯನ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಕಾಶ್ ಕೋಟ್ಯಾನ್ ಎನ್ನುವ ನಕಲಿ ಹೆಸರಿನ ಫೇಸ್‌ಬುಕ್ ಖಾತೆಯಿಂದ ಸತ್ಯಜಿತ್ ಸುರತ್ಕಲ್ ಇವರನ್ನು ತೇಜೋವಧೆ ಮಾಡುತ್ತಿರುವುದು ಅಕ್ಷಮ್ಯ ಅಪರಾಧ. ಇದನ್ನು ಬಿಲ್ಲವ ಸಮಾಜ ಎಂದಿಗೂ ಸಹಿಸುವುದಿಲ್ಲ. ಈ ನಕಲಿ ಫೇಸ್‌ಬುಕ್ ಖಾತೆಯಿಂದ ಹಲವು ಬಾರಿ ನಮ್ಮ ಸಮಾಜದ ಮುಖಂಡರನ್ನು ಅವಹೇಳನ ಮಾಡುವ ಮೂಲಕ ಬಿಲ್ಲವ ಸಮಾಜ ಹಾಗೂ ಧಮನಿತ ಸಮಾಜದ ನಡುವೆ ಗೊಂದಲಗಳನ್ನು ಮೂಡಿಸುತ್ತಿರುವುದು ಕಂಡುಬಂದಿರುತ್ತದೆ. ಇಲ್ಲಿ ನಾವು ಯಾವುದೇ ಪಕ್ಷದ ಪರವಾಗಿ ಅಥವಾ ರಾಜಕೀಯ ವ್ಯಕ್ತಿಯ ಪರವಾಗಿ ಮಾತನಾಡುತ್ತಿಲ್ಲ ಸತ್ಯಜಿತ್ ಸುರತ್ಕಲ್ ಇವರಿಗೆ ಈಗ ಯಾವುದೇ ಪಕ್ಷದಲ್ಲಿಯಾಗಲಿ ಹಿಂದೂ ಸಂಘಟನೆಯಲ್ಲಾಗಲಿ ಜವಾಬ್ದಾರಿಯಿಲ್ಲ. ಕಳೆದ ಮೂರು ವರ್ಷಗಳಿಂದ ಶ್ರೀ ನಾರಾಯಣಗುರು ವಿಚಾರ ವೇದಿಕೆಯ ರಾಜಾಧ್ಯಕ್ಷರಾಗಿ ಜವಾಬ್ದಾರಿಯನ್ನು ತೆಗೆದುಕೊಂಡು ಬಿಲ್ಲವ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಾ ಇದ್ದಾರೆ. ಈ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷದ ಪರವಾಗಿ ಹೋಗುತ್ತಾ ಇಲ್ಲವೆಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಡ್ಕ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಕೋಟ್ಯಾನ್, ಯುವ ವಾಹಿನಿ ತಾಲೂಕು ಅಧ್ಯಕ್ಷ ಅಶೋಕ್ ಕುಮಾರ್, ಪ್ರಮುಖರಾದ ಮಾಧವ ಪೂಜಾರಿ ಉಪಸ್ಥಿತರಿದ್ದರು.

Related posts

ಗುರುವಾಯನಕೆರೆ:ಎಕ್ಸೆಲ್ ಕಾಲೇಜಿನಲ್ಲಿ ಪ್ರತಿಭಾವಂತರಿಗೆ ಸಂಪೂರ್ಣ ಉಚಿತ ನೀಟ್ ಕೋಚಿಂಗ್ : ಶೈಕ್ಷಣಿಕ ಸಾಧನೆಗಳ ಮೂಲಕ ರಾಜ್ಯದಲ್ಲಿ ಗುರುತಿಸ್ಪಟ್ಟ ಕಾಲೇಜು ಎಕ್ಸೆಲ್

Suddi Udaya

ತಣ್ಣೀರುಪಂತ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ರೂ. 306.80ಕೋಟಿ ವ್ಯವಹಾರ, ರೂ. 1.09 ಕೋಟಿ ಲಾಭ, ಶೇ.12 ಡಿವಿಡೆಂಡ್

Suddi Udaya

ಮುಂಡಾಜೆ: ಮಂಜುಶ್ರೀ ಭಜನಾ ಮಂದಿರದ ಜೀರ್ಣೋದ್ಧಾರ ಹಾಗೂ ನವರಾತ್ರಿ ಪೂಜೆ ಭಜನಾ ಕಾರ್ಯಕ್ರಮ

Suddi Udaya

ಕಳಿಯ ಗ್ರಾಮದ ಕೊರಂಜ ನಿವಾಸಿ ಜಯಪ್ರಕಾಶ್ ನಿಧನ

Suddi Udaya

ವಾಯುಭಾರ ಕುಸಿತ: ತಾಲೂಕಿನದ್ಯಾಂತ ವ್ಯಾಪಕ ಮಳೆ-ರೆಡ್ ಅಲರ್ಟ್; ಮುಂಡಾಜೆಯಲ್ಲಿ103 ಮಿ.ಮೀ.ಮಳೆ

Suddi Udaya

ವೇಣೂರು: ಅಕ್ರಮವಾಗಿ ಸಾಗಿಸುತ್ತಿದ್ದ 125 ಕೆ‌ಜಿ ರಕ್ತ ಚಂದನ: ವಾಹನ ಸಮೇತ ರಕ್ತ ಚಂದನ ವಶಕ್ಕೆ ಪಡೆದ ವೇಣೂರು ಅರಣ್ಯಧಿಕಾರಿಗಳು

Suddi Udaya
error: Content is protected !!