September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆ

ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿ ರಕ್ಷಿತ್ ಶಿವರಾಂ ಕೈ ಬಲ ಪಡಿಸಿದ ಮಚ್ಚಿನ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ

ಬೆಳ್ತಂಗಡಿಯ ಬಿಜೆಪಿ ಪಕ್ಷದಿಂದ ಬೇಸತ್ತು, ಬಹಿರಂಗವಾಗಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ಪಕ್ಷಕ್ಕೆ ಮಚ್ಚಿನ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕುಲಾಲ್ ಸಮುದಾಯದ ಮುಖಂಡರಾದ ಚಂದಪ್ಪ ಕುಲಾಲ್ ಅವರು ಮಾಜಿ ಶಾಸಕರಾದ ವಸಂತ ಬಂಗೇರರ ನೇತೃತ್ವದಲ್ಲಿ ಸೇರ್ಪಡೆಗೊಂಡಿದ್ದಾರೆ.

ಮಡಂತ್ಯಾರಿನಲ್ಲಿ ನಡೆದ ಪಕ್ಷ ಸೇರ್ಪಡೆಯಲ್ಲಿ ಕಾಂಗ್ರೆಸ್ ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಅವರು ಮಾತನಾಡಿ, ಚಂದಪ್ಪ ಕುಲಾಲ್ ಅವರಂತಹ ಪ್ರಮುಖರು ಪಕ್ಷಕ್ಕೆ ಸೇರಿದ್ದು ನಮಗೆ ಬಲ ಬಂದಂತಾಗಿದೆ. ನಮ್ಮ ಗೆಲುವು ಖಚಿತ ಎಂದು ವಿಸ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಚಿತ್ರನಟ ವಿಜಯ ರಾಘವೇಂದ್ರ, ಪಕ್ಷದ ಮುಖಂಡರಾದ ಸತೀಶ್ ಕಾಶಿಪಟ್ಣ, ಪ್ರಮೋದ್ ಕುಮಾರ್ ಮಚ್ಚಿನ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಪೆರ್ನಾಂಡೀಸ್ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Related posts

ಉಜಿರೆ: ಎಸ್.ಡಿ.ಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಪರಿಸರ ದಿನಾಚರಣೆ

Suddi Udaya

ನಿವೃತ್ತ ಶಿಕ್ಷಕ ಶಂಕರ್ ಎನ್. ತಾಮನ್ಕರ್ ಅವರಿಂದ ರೂ.47 ಸಾವಿರ ಧನಸಹಾಯ

Suddi Udaya

ಬಳ್ಳಮಂಜ : ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ: ಕಣ್ಮಣ ಸೆಳೆದ ಬ್ರಹ್ಮರಥೋತ್ಸವ

Suddi Udaya

ಕಳೆಂಜ: ಕಾಯರ್ತಡ್ಕ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ

Suddi Udaya

ಧರ್ಮಸ್ಥಳ ಗ್ರಾ.ಪಂ. ನ ದ್ವಿತೀಯ ಹಂತದ ಗ್ರಾಮ ಸಭೆ

Suddi Udaya

ಏಕರೂಪ ಸಮವಸ್ತ್ರ ನೀತಿ ಪಾಲನೆ ಹಾಗೂ ಬಕ್ರೀದ್ ಹಬ್ಬದ ಹಿನ್ನಲೆ ಅಕ್ರಮ ಗೋಹತ್ಯೆ ತಡೆಗೆ ಆಗ್ರಹ: ಹಿಂದೂ ಜನಜಾಗೃತಿ ಸಮಿತಿಯಿಂದ ತಹಶೀಲ್ದಾರ್ ರಿಗೆ ಮನವಿ

Suddi Udaya
error: Content is protected !!