April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜಕೀಯ

ಜೆಡಿಎಸ್ ಅಭ್ಯರ್ಥಿ ಅಶ್ರಫ್ ಆಲಿಕುಂಞಿ ರವರಿಂದ ರೋಡ್ ಶೋ: ಗಣ್ಯರ ಭೇಟಿ

ಬೆಳ್ತಂಗಡಿ; ಜನತಾದಳ ಜಾತ್ಯಾತೀತ ಪಕ್ಷದ ಬೆಳ್ತಂಗಡಿ ಅಭ್ಯರ್ಥಿ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರು ಬೆಳ್ತಂಗಡಿ ತಾಲೂಕಿನ ಪ್ರಮುಖ ನಗರಗಳಲ್ಲಿ ಮತಯಾಚನೆಯ ರೋಡ್ ಶೋ ನಡೆಸಿದರು.
ಜೊತೆಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಾಜಕೀಯ ಪ್ರಮುಖರ, ಹಿರಿಯ ಕಾರ್ಯಕರ್ತರ ಭೇಟಿ ಮುಂದುವರಿಸಿದರು.

ಮಡಂತ್ಯಾರು, ಮದ್ದಡ್ಕ, ಸಬರಬೈಲು, ಕೊಲ್ಪೆದಬೈಲು, ಕುಪ್ಪೆಟ್ಟಿ, ಕಲ್ಲೇರಿ, ಕರಾಯ, ಗೇರುಕಟ್ಟೆ, ಉಜಿರೆ ಅತ್ತಾಜೆ, ಟಿ.ಬಿ ಕ್ರಾಸ್, ಕಿಲ್ಲೂರು, ಕಾಜೂರು, ಮುಂಡಾಜೆ, ಕಕ್ಕಿಂಜೆ, ಚಾರ್ಮಾಡಿ, ಅಣಿಯೂರು, ಬೆಳ್ತಂಗಡಿ ನಗರ, ಮುಂತಾದೆಡೆ ರೋಡ್ ಶೋ ನಡೆಸಿದರು.

ಧ್ವನಿವರ್ಧಕದ ಮೂಲಕ ತಾಲೂಕಿನ ಮೂಲೆಮೂಲೆಗಳಲ್ಲಿ ನಿರಂತರ ಪ್ರಚಾರ ಕಾರ್ಯ ನಡೆಯುತ್ತಿದೆ‌. ಅಭ್ಯರ್ಥಿಯಾಗಿರುವ ಗ್ರಾಮೀಣ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರ ಸ್ವಪರಿಚಯ ಇರುವ ಕರಪತ್ರ, ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗೆ ನೀಡುವ ಸೌಲಭ್ಯಗಳ ಪ್ರಣಾಳಿಕೆ, ಮಾದರಿ ಮತಪತ್ರಗಳನ್ನು ಹಂಚಿಕೆ ಮಾಡಲಾಯಿತು.

ಸೋಮವಾರ ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು, ಮಂಗಳವಾರ ಸಂಜೆಯವರೆಗೂ ಮನೆ ಮನೆ ಭೇಟಿಗೆ ಯೋಜನೆ ರೂಪಿಸಲಾಗಿದೆ. ಪಕ್ಷದ ಕಾರ್ಯಾಧ್ಯಕ್ಷ ರಾಮ ಆಚಾರಿ, ಸಂಘಟನಾ ಕಾರ್ಯದರ್ಶಿ ಹೆಚ್.ಎನ್ ನಾಗರಾಜ್, ಹಿರಿಯರಾದ ಪ್ರಕಾಶ್ ಹೆಬ್ಬಾರ್ ಅರಸಿನಮಕ್ಕಿ, ಹಿರಿಯ‌ ಸಂಘಟಕರಾದ ಮುಂಡಾಜೆ ಸಹಕಾರಿ ಸಂಘದ ನಿರ್ದೇಶಕ ಸಂಜೀವ ಗೌಡ, ರಾಮಕೃಷ್ಣ ಗೌಡ ನೆರಿಯ, ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಬಂಡಸಾಲೆ, ಕಾರ್ಯದರ್ಶಿ ಶಾಹಿದ್ ಪಾದೆ, ಪುನೀತ್ ಪೂಜಾರಿ, ವಸಂತ ಪೂಜಾರಿ, ಅಮ್ಮಿ‌ ನಾಯ್ಕ, ಸಂಜೀವ ಕುಲಾಲ್, ಲುಕ್ಮಾನುಲ್ ಹಕೀಂ ಧರ್ಮಸ್ಥಳ, ಹಂಝ, ಇಬ್ರಾಹಿಂ ಕನ್ಯಾಡಿ, ರಾಮ ಕುಮಾರ್, ರಿಝ್ವಾನ್, ಆಸಿಫ್, ಶರೀಫ್, ಮುಹಮ್ಮದ್ ಕಾಜೂರು, ಸಿರಾಜ್, ಕಿಟ್ಟ, ಮೊದಲಾದವರು ಭಾಗಿಯಾಗಿದ್ದರು.

Related posts

ಸಿ.ವಿ.ಸಿ ಹಾಲ್ ವಸತಿ ವಿದ್ಯಾರ್ಥಿನಿ ನಿಲಯದ ಸಮಸ್ಯೆಗೆ ಸಿಕ್ಕಿತು ವಾರ್ಡನ್ ನಿಯೋಜನೆ ಬಳಿಕ ಪರಿಹಾರ

Suddi Udaya

ತೆಂಕಕಾರಂದೂರು ಪಳಿಕೆ ಲೀಲಾವತಿ ಶೆಟ್ಟಿ ನಿಧನ

Suddi Udaya

ಫೆ.7-10: ಶಿಶಿಲ ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದೇರುಗಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya

ಚಂದ್ರಯಾನ 3 ರ ಯಶಸ್ಸು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಉಜಿರೆ ಹಾಗೂ ಉಜಿರೆ ನಾಗರಿಕರಿಂದ ವಿಜಯೋತ್ಸವ

Suddi Udaya

ಜ.4-5: ಬರೆಂಗಾಯ ಸ.ಉ.ಹಿ.ಪ್ರಾ. ಶಾಲಾ ಅಮೃತ ಮಹೋತ್ಸವ ಕಾರ್ಯಕ್ರಮ

Suddi Udaya

ಅರಿಕೆಗುಡ್ಡೆ ಶ್ರೀ ವನದುರ್ಗ ಕ್ಷೇತ್ರಕ್ಕೆ ಯುವ ವಾಗ್ಮಿ ಹಾರಿಕಾ ಮಂಜುನಾಥ್ ಭೇಟಿ

Suddi Udaya
error: Content is protected !!