24 C
ಪುತ್ತೂರು, ಬೆಳ್ತಂಗಡಿ
April 3, 2025
ತಾಲೂಕು ಸುದ್ದಿ

ಉಜಿರೆಯ ಸುಲೋಚನರಿಗೆ ಕರ್ನಾಟಕ ಬುಕ್ ಆಫ್ ರೆಕಾರ್ಡ್ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ

ಉಜಿರೆ : ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆ ಪತಿ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಯಾವುದೇ ಚಿಂತೆಗೊಳಗಾಗದೆ ಪತಿಯ ಕಾರ್ಯವನ್ನು ಪ್ರೋತ್ಸಾಹಿಸಿ,

ಸಮಾಜದಲ್ಲಿ ಆದರ್ಶಯುತವಾಗಿ ಜೀವನ ಸಾಗಿಸಿದ ಉಜಿರೆಯ ನಿವೃತ್ತ ಸೇನಾನಿ ಗೋಪಾಲಕೃಷ್ಣ ಕಾಂಚೋಡು ಇವರ ಪತ್ನಿ ಸುಲೋಚನಾ ಇವರಿಗೆ ಕರ್ನಾಟಕ ಬುಕ್ ಆಫ್ ರೆಕಾರ್ಡ್ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಮೇ 8 ರಂದು ಬೆಂಗಳೂರಿನ ಎಸ್‌ಎಸ್‌ಬಿ ತರಬೇತಿ ಅಕಾಡೆಮಿಯಲ್ಲಿ ನಡೆದ ವಿಶ್ವ ತಾಯಂದಿರ ದಿನದಂದು ನಾರಿ ಶಕ್ತಿ ಕಾರ್ಯಕ್ರಮಲ್ಲಿ ದಕ್ಷಿಣ ಭಾರತದ ಸೇನಾಪಡೆಯ ಪ್ರಧಾನ ಕಮಾಂಡರ್ಗಳ ಸಮಕ್ಷಮ ಸುಲೋಚನಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತನ್ನ ಪತಿ ಜಮ್ಮು ಕಾಶ್ಮೀರ ಸೇರಿದಂತೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಯಾವುದೇ ಚಿಂತೆಗೆ ಒಳಗಾಗದೆ ಪತಿಯನ್ನು ಪ್ರೋತ್ಸಾಹಿಸುತ್ತಾ ಒಬ್ಬ ಮಹಿಳೆಯಾಗಿ ವೀರ ನಾರಿಯಾಗಿ,ಮಕ್ಕಳಿಗೆ ವೀರ ಮಾತೆಯಾಗಿ,ಉತ್ತಮ ಸಂಸ್ಕಾರ ಗಳನ್ನು ನೀಡಿ ಒಳ್ಳೆಯ ವಿದ್ಯಾವಂತ ಸಂಸ್ಕಾರಯುತ ಪ್ರಜೆಗಳನ್ನಾಗಿಸುವಲ್ಲಿ, ಒಬ್ಬ ಮಹಿಳೆಯಾಗಿ ಸಮಾಜಕ್ಕೆ ಆದರ್ಶಪ್ರಾಯರಾಗಿ ಬಾಳಿರುವುದನ್ನು ಗುರುತಿಸಿ ಅವರನ್ನು ಈ ಪ್ರತಿಷ್ಟಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

Related posts

ಬಂದಾರು: ಮೈರೋಳ್ತಡ್ಕ ಬೂತ್ 218 ರಲ್ಲಿ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಬಲಿದಾನ್ ದಿವಸ್ ಆಚರಣೆ

Suddi Udaya

ಯನಪೋಯ ಆರ್ಟ್ಸ್ ಸೈನ್ಸ್ ಕಾಮರ್ಸ್ ಪದವಿ ವಿದ್ಯಾರ್ಥಿಗಳಿಂದ ಸ. ಹಿ. ಪ್ರಾ. ಶಾಲೆ ಸರಳಿಕಟ್ಟೆಯಲ್ಲಿ ಎನ್ ಎಸ್ ಎಸ್ ಶಿಬಿರ

Suddi Udaya

ದ.ಕ. ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ: ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 78655 ಅಂತರದಿಂದ ಭಾರಿ ಮುನ್ನಡೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಹಿನ್ನಡೆ

Suddi Udaya

ಹೊಸಂಗಡಿ ಗ್ರಾ.ಪಂ. ಗ್ರಾಮ ಸಭೆ

Suddi Udaya

ನಿರಂಜನ್ ಬಾವಂತಬೆಟ್ಟು ನಿಧನಕ್ಕೆ ಮಾಜಿ ಶಾಸಕ ವಸಂತ ಬಂಗೇರರಿಂದ ಸಂತಾಪ

Suddi Udaya

ಕೊಕ್ಕಡ: ಸಂಗಮ ಹಾಳೆತಟ್ಟೆ ಉತ್ಪಾದಕ ಘಟಕ ಉದ್ಘಾಟನೆ

Suddi Udaya
error: Content is protected !!