ಬೆಳ್ತಂಗಡಿ: ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮಸ್ಟರಿಂಗ್
ಮೇ 9 ರಂದು ಉಜಿರೆ ಧ.ಮಂ ಪ.ಪೂ.ಕಾಲೇಜಿನಲ್ಲಿ ಜರುಗಿತು.
ಬೆಳ್ತಂಗಡಿ ಕ್ಷೇತ್ರದ 241 ಬೂತುಗಳ ಚುನಾವಣಾಧಿಕಾರಿ ಹಾಗೂ ಸಿಬ್ಬಂದಿ ಗಳಿಗೆ ಚುನಾವಣಾ ಮತ ಯಂತ್ರಗಳನ್ನು ಹಾಗೂ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಪರಿಕರಗಳನ್ನು ವಿತರಿಸಲಾಯಿತು.
ಪ್ರತಿ ಮತಗಟ್ಟೆಗಳಿಗೆ ಅಧಿಕಾರಿಗಳು ಹೋಗಲು ಬಸ್ ಹಾಗೂ ಇತರ ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ಬೆಳಿಗ್ಗೆ ಆರಂಭಗೊಂಡ ಮತಯಂತ್ರಗಳ ವಿತರಣಾ ಕಾಯ೯ ಮಧ್ಯಾಹ್ನ ಮುಕ್ತಾಯಗೊಂಡಿತು. ಅಧಿಕಾರಿಗಳು ತಮಗೆ ಮೀಸಲಾದ ವಾಹನಗಳಲ್ಲಿ ಪೊಲೀಸ್ ಭದ್ರತೆಯಲ್ಲಿ ಮತಗಟ್ಟೆಗಳಿಗೆ ತೆರಳಿದರು.
ತಾಲೂಕು ಚುನಾವಣಾ ಅಧಿಕಾರಿ ಯೋಗೇಶ್ ಇವರ ನೇತೃತ್ವದಲ್ಲಿ ಮಸ್ಟರಿಂಗ್ ಯಶಸ್ವಿಯಾಗಿ ನಡೆಯಿತು. ಪೊಲೀಸ್ ಅಧಿಕಾರಿಗಳು, ಸಿಆರ್ ಪಿ ತಂಡಗಳು ಭದ್ರತೆ ಒದಗಿಸಿದರು.