23.6 C
ಪುತ್ತೂರು, ಬೆಳ್ತಂಗಡಿ
May 19, 2025
ಜಿಲ್ಲಾ ಸುದ್ದಿ

ಕುಲಶೇಖರ ಬ್ರಹ್ಮಕಲಶೋತ್ಸವ ಸಂಭ್ರಮ: ಶ್ರೀ ವೀರ ನಾರಾಯಣ ದೇವರಿಗೆ ದಾನಿಗಳಿಂದ ನೂತನ ರಥ ಸಮರ್ಪಣೆ


ಬೆಳ್ತಂಗಡಿ : ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಆಡಳಿತದಲ್ಲಿರುವ ಇತಿಹಾಸ ಪ್ರಸಿದ್ಧ ಕುಲಾಲ ಸಮುದಾಯದ ಕುಲದೇವರಾದ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನವು ಶಿಲಾಮಯವಾಗಿ ರೂ. 10 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡು ಮೇ 14 ರಿಂದ 25 ವರೆಗೆ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವವು ಬಹಳ ವಿಜೃಂಭಣೆಯಿಂದ ಜರಗಲಿದ್ದು, ದಾನಿಗಳಿಂದ ನಿನ್ನೆ ಮೇ 12ರಂದು
ಸಂಜೆ ದೇವರಿಗೆ ನೂತನ ರಥ ಸಮರ್ಪಣೆ ಮಾಡಲಾಯಿತು.

ಬರ್ಕೆ ಫ್ರೆಂಡ್ಸ್‌ನ ಗೌರವಾಧ್ಯಕ್ಷರಾದ ಯಜ್ಞೇಶ್ ಬರ್ಕೆ ಹಾಗೂ ಅಧ್ಯಕ್ಷರಾಗಿರುವ ಸುಚೀಂದ್ರ ಅಮೀನ್ ಅವರು ರೂ. 10 ಲಕ್ಷ ವೆಚ್ಚದಲ್ಲಿ ಶ್ರೀ ದೇವರಿಗೆ ಕೊಡುಗೆಯಾಗಿ ನೀಡಿದ ನೂತನ ರಥವನ್ನು ಕ್ಷೇತ್ರದ ಕ್ಷೇತ್ರದ ಸಮಿತಿಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ಶ್ರೀ ಕ್ಷೇತ್ರಕ್ಕೆ ಸಮರ್ಪಿಸಿದರು.

ದೇವಸ್ಥಾನದ ಪ್ರಧಾನ ಗೋಪುರ
ರೂ. 25 ಲಕ್ಷ ವೆಚ್ಚದಲ್ಲಿ ದೇವಸ್ಥಾನದ ಮುಖ ಪ್ರಧಾನ ಗೋಪುರದ ವೆಚ್ಚವನ್ನು ಮುಂಬೈ ಉದ್ಯಮಿ ಸುನಿಲ್‌ರಾಜೀವ್ ಸಾಲ್ಯಾನ್ ಮತ್ತು ದೇವಕಿ ಎಸ್. ಸಾಲ್ಯಾನ್ ನೀಡಿದ್ದಾರೆ.

ಮಾರ್ಬಲ್ ಅಳವಡಿಕೆ:
ಸುತ್ತುಪೌಳಿಯ ಒಳಾಂಗಣಕ್ಕೆ ರೂ. 15 ಲಕ್ಷ ವೆಚ್ಚದಲ್ಲಿ ಮಾರ್ಬಲ್ ಅಳವಡಿಸಲಾಗಿದ್ದು, ಇದರ ವೆಚ್ಚವನ್ನು ಬೆಂಗಳೂರಿನ ಅಮೂಲ್ಯ ರಬ್ಬರ್ ಇಂಡಸ್ಟ್ರೀಸ್‌ನ ಮಾಲಕ ಉದ್ಯಮಿ ದಿವಾಕರ ಮೂಲ್ಯ ಅವರು ನೀಡಿದ್ದಾರೆ.

ಬೆಳ್ಳಿ ಕವಚ ಪಲ್ಲಕ್ಕಿ :
ಶ್ರೀ ವೀರನಾರಾಯಣ ದೇವರ ಬೆಳ್ಳಿ ಕವಚದ ಪಲ್ಲಕ್ಕಿಯನ್ನು ರೂ. 10 ಲಕ್ಷ ವೆಚ್ಚದಲ್ಲಿ ಮುಂಬೈ ಉದ್ಯಮಿ ಅಶೋಕ್ ಮೂಲ್ಯ ಥಾಣೆ ಅವರು ಕೊಡುಗೆಯಾಗಿ ನೀಡಿದ್ದಾರೆ. ಅತ್ಯಾಕರ್ಷಕ ಪಲ್ಲಕ್ಕಿಯನ್ನು ಕೋಟೇಶ್ವರದ ಗೋಪಾಲ ಆಚಾರ್ಯ ನಿರ್ಮಿಸಿದ್ದಾರೆ.

Related posts

ಮಾಜಿ ಮುಖ್ಯ ಮಂತ್ರಿ ಹೆಚ್. ಡಿ ಕುಮಾರ ಸ್ವಾಮಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

Suddi Udaya

ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಮೆರವಣಿಗೆ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಿತ್ ಶಿವರಾಮ್ ನಾಮಪತ್ರ ಸಲ್ಲಿಕೆ

Suddi Udaya

ವಿಧಾನ ಪರಿಷತ್ ಉಪ ಚುನಾವಣೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳ ನೇಮಕ

Suddi Udaya

ಮಾಜಿ ಶಾಸಕ ವಸಂತ ಬಂಗೇರ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌

Suddi Udaya

ಹಾಡುಹಗಲೇ ರೂ.3.11 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Suddi Udaya

ಅವಳಿ ಸಹೋದರಿಯರ ವಿಶೇಷ ಸಾಧನೆ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಮಾನ ಅಂಕ

Suddi Udaya
error: Content is protected !!