26.7 C
ಪುತ್ತೂರು, ಬೆಳ್ತಂಗಡಿ
May 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹರೀಶ್ ಪೂಂಜರವರ ಗೆಲುವಿಗಾಗಿ ಅಭಿಮಾನಿಗಳಿಂದ ಕಟೀಲು ಕ್ಷೇತ್ರಕ್ಕೆ ಪಾದಯಾತ್ರೆಯ ಸಂಕಲ್ಪ

ಉಜಿರೆ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರು ಬಹುಮತಗಳ ಅಂತರದಿಂದ ಗೆಲುವು ಸಾಧಿಸಿದರೆ ಕಟೀಲು ಕ್ಷೇತ್ರಕ್ಕೆ ಪಾದಯಾತ್ರೆ ಕೈಗೊಳ್ಳುವುದೆಂದು ಉಜಿರೆಯ 3 ಮಂದಿ ಯುವಕರು ಸಂಕಲ್ಪ ಮಾಡಿದ್ದು ಇಂದು ಪಾದಯಾತ್ರೆ ಕೈಗೊಂಡಿದ್ದಾರೆ.

ಶಾಸಕ ಹರೀಶ್ ಪೂಂಜರವರ ಅಪ್ಪಟ ಅಭಿಮಾನಿಗಳಾದ ಉಜಿರೆಯ ಆಟೋ ಡ್ರೈವರ್ ಸುಧೀರ್ ಕಲ್ಮಂಜ, ಎಲೆಕ್ಟ್ರಿಷಿಯನ್ ರವೀಂದ್ರ ಉಜಿರೆ, ಉಜಿರೆಯ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ರಾಧಾಕೃಷ್ಣ ಕಲ್ಮಂಜ ಅವರ ಸಂಕಲ್ಪ ನೇರವೇರಿದ್ದು ಇಂದು ಸಂಜೆ ಉಜಿರೆ ಜನಾರ್ದನ ಸ್ವಾಮಿ ದೇಗುಲದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ.

ಉಜಿರೆಯಿಂದ ಇಗಾಗಲೇ ಪಾದಯಾತ್ರೆ ಕೈಗೊಂಡು ರಸ್ತೆ ಸಮೀಪದಲ್ಲಿರುವ ಹಲವಾರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಉಜಿರೆಯಿಂದ ಕಟೀಲು ಕ್ಷೇತ್ರಕ್ಕೆ ಅಂದಾಜು 70 ಕಿ‌.ಮೀ ದೂರವಿದ್ದು ಅವರು ನಾಳೆ ಬೆಳಿಗ್ಗೆ 10 ಗಂಟೆಗೆ ಕ್ಷೇತ್ರ ತಲುಪಲಿದ್ದಾರೆ. 2018 ರ ಬೆಳ್ತಂಗಡಿ ವಿಧಾನಸಭಾ ಚುನಾವಣೆಯಲ್ಲಿಯೂ ಹರೀಶ್ ಪೂಂಜರ ಗೆಲುವಿಗೆ ಪ್ರಾರ್ಥಿಸಿ ಕಟೀಲು ಕ್ಷೇತ್ರಕ್ಕೆ ಪಾದಯಾತ್ರೆ ಕೈಗೊಂಡಿದ್ದೇವೆ ಎಂದು ಅವರು ತಿಳಿಸಿದರು.

Related posts

ಧರ್ಮಸ್ಥಳ: ಪಾದಯಾತ್ರಿಗಳಿಗೆ ಸನ್ಮಾನ

Suddi Udaya

ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ಹಿರಿಯ ನಾಗರಿಕರಿಗೆ ಸನ್ಮಾನ

Suddi Udaya

ಶಿಶಿಲ: ಕೊಳ್ಕೆಬೈಲು ಸ.ಕಿ.ಪ್ರಾ. ಶಾಲೆಯ ಶಿಕ್ಷಕಿ ಸುಗುಣ ಕುಮಾರಿ ಸೇವಾ ನಿವೃತ್ತಿ

Suddi Udaya

ಕನ್ಯಾಡಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ರಕ್ಷಿತ್ ಶಿವರಾಮ್

Suddi Udaya

ಮೇ 25 : ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನ ಪದಗ್ರಹಣ ಸಮಾರಂಭ: ಆಂಬುಲೆನ್ಸ್ ಲೋಕಾರ್ಪಣೆ, ಅಶಕ್ತರಿಗೆ ನೆರವು-ಸಾಧಕರಿಗೆ ಸನ್ಮಾನ ಕಾರ್ಯಕ್ರಮ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚೇರ್ ವಿತರಣೆ

Suddi Udaya
error: Content is protected !!