24.3 C
ಪುತ್ತೂರು, ಬೆಳ್ತಂಗಡಿ
September 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹರೀಶ್ ಪೂಂಜರವರ ಗೆಲುವಿಗಾಗಿ ಅಭಿಮಾನಿಗಳಿಂದ ಕಟೀಲು ಕ್ಷೇತ್ರಕ್ಕೆ ಪಾದಯಾತ್ರೆಯ ಸಂಕಲ್ಪ

ಉಜಿರೆ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರು ಬಹುಮತಗಳ ಅಂತರದಿಂದ ಗೆಲುವು ಸಾಧಿಸಿದರೆ ಕಟೀಲು ಕ್ಷೇತ್ರಕ್ಕೆ ಪಾದಯಾತ್ರೆ ಕೈಗೊಳ್ಳುವುದೆಂದು ಉಜಿರೆಯ 3 ಮಂದಿ ಯುವಕರು ಸಂಕಲ್ಪ ಮಾಡಿದ್ದು ಇಂದು ಪಾದಯಾತ್ರೆ ಕೈಗೊಂಡಿದ್ದಾರೆ.

ಶಾಸಕ ಹರೀಶ್ ಪೂಂಜರವರ ಅಪ್ಪಟ ಅಭಿಮಾನಿಗಳಾದ ಉಜಿರೆಯ ಆಟೋ ಡ್ರೈವರ್ ಸುಧೀರ್ ಕಲ್ಮಂಜ, ಎಲೆಕ್ಟ್ರಿಷಿಯನ್ ರವೀಂದ್ರ ಉಜಿರೆ, ಉಜಿರೆಯ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ರಾಧಾಕೃಷ್ಣ ಕಲ್ಮಂಜ ಅವರ ಸಂಕಲ್ಪ ನೇರವೇರಿದ್ದು ಇಂದು ಸಂಜೆ ಉಜಿರೆ ಜನಾರ್ದನ ಸ್ವಾಮಿ ದೇಗುಲದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ.

ಉಜಿರೆಯಿಂದ ಇಗಾಗಲೇ ಪಾದಯಾತ್ರೆ ಕೈಗೊಂಡು ರಸ್ತೆ ಸಮೀಪದಲ್ಲಿರುವ ಹಲವಾರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಉಜಿರೆಯಿಂದ ಕಟೀಲು ಕ್ಷೇತ್ರಕ್ಕೆ ಅಂದಾಜು 70 ಕಿ‌.ಮೀ ದೂರವಿದ್ದು ಅವರು ನಾಳೆ ಬೆಳಿಗ್ಗೆ 10 ಗಂಟೆಗೆ ಕ್ಷೇತ್ರ ತಲುಪಲಿದ್ದಾರೆ. 2018 ರ ಬೆಳ್ತಂಗಡಿ ವಿಧಾನಸಭಾ ಚುನಾವಣೆಯಲ್ಲಿಯೂ ಹರೀಶ್ ಪೂಂಜರ ಗೆಲುವಿಗೆ ಪ್ರಾರ್ಥಿಸಿ ಕಟೀಲು ಕ್ಷೇತ್ರಕ್ಕೆ ಪಾದಯಾತ್ರೆ ಕೈಗೊಂಡಿದ್ದೇವೆ ಎಂದು ಅವರು ತಿಳಿಸಿದರು.

Related posts

ಬೆಳ್ತಂಗಡಿ : ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ನಡೆದ ಬಹು ಕೋಟಿ ಹಗರಣ ಪ್ರಕರಣ: ಸೊಸೈಟಿ ಅಧ್ಯಕ್ಷ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿ 9 ಮಂದಿಯ ಆಸ್ತಿ ತೀರ್ಪು ಪೂರ್ವ ಜಪ್ತಿ ಮಾಡಿ ಆದೇಶ

Suddi Udaya

ಕಾವಳಕಟ್ಟೆ ವಲಯ ಬಂಟರ ಸಂಘದಿಂದ ಸಮಾಜಮುಖಿ ಚಿಂತನಾ ಕಾರ್ಯಕ್ರಮ

Suddi Udaya

ಶ್ರೀರಾಮ ನವಮಿ ಪ್ರಯುಕ್ತ ಮಠದ ಪಟ್ಟದ ದೇವರಿಗೆ ಪಂಚಾಮೃತ ಅಭಿಷೇಕ ರಾಮೋತ್ಸವ

Suddi Udaya

ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೌಶಲ್ಯ ವರ್ಧನ ಕಾರ್ಯಾಗಾರ

Suddi Udaya

ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್ ವಿಧಿವಶ

Suddi Udaya

ಮದ್ದಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿಯ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!