25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಮೂಲಗೇಣಿದಾರರಿಗೆ ಸರಕಾರ ಶೀಘ್ರವೇ ನ್ಯಾಯ ಒದಗಿಸಲಿ: ಪ್ರತಾಪಸಿಂಹ ನಾಯಕ್

ಬೆಳ್ತಂಗಡಿ: ಕರ್ನಾಟಕದಲ್ಲಿ 2012 ರಲ್ಲಿ ಇದ್ದ ಬಿಜೆಪಿ ಸರಕಾರ ಡಾ.ವಿ.ಎಸ್.ಆಚಾರ್ ಅವರ ವಿಶೇಷ ಮುತುವರ್ಜಿಯಲ್ಲಿ ಕರಾವಳಿಯ ಮೂಲಗೇಣಿದಾರರಿಗೆ ಸಂಪೂರ್ಣ ಹಕ್ಕು ನೀಡುವ ಕುರಿತು ಕರ್ನಾಟಕ ಕಾಯ್ದೆ ಸಂಖ್ಯೆ 24/2012 ನ್ನು ರೂಪಿಸಿತ್ತು. ಕರ್ನಾಟಕ ಮೂಲಗೇಣಿ ಅಥವಾ ಒಳಮೂಲಗೇಣಿದಾರರಿಗೆ ಸಂಪೂರ್ಣ ಮಾಲಕತ್ವ ಪ್ರದಾನ ಮಾಡುವ ಅಧಿನಿಯಮ ಸಿಂಧುತ್ವವನ್ನು ಪ್ರಶ್ನಿಸಿ ರಿಟ್ ಅರ್ಜಿ ಸಂಖ್ಯೆ 11158/2013 ಮತ್ತು ಇತರ ಅರ್ಜಿಗಳನ್ನು ಹೈಕೋರ್ಟ್ ಗೆ ಮೂಲಿದಾರರು ಸಲ್ಲಿಸಿದ್ದರು .

ರಾಜ್ಯ ಸರಕಾರದ ಈ ಅಧಿನಿಯಮ ಮಾಡುವ ಅಧಿಕಾರವನ್ನು ಪ್ರಶ್ನಿಸಿ, ಮೂಲಿದಾರರು ತಮ್ಮ ಮೂಲಭೂತ ಹಕ್ಕುಗಳಿಗೆ ಇದು ವಿರುದ್ಧವಾಗಿದೆ ಎಂದು ಪ್ರತಿಪಾದನೆ ಮಾಡಿದರು. ಈ ರಿಟ್ ಅರ್ಜಿಗಳನ್ನು ಉಚ್ಚ ನ್ಯಾಯಾಲಯವು ವಜಾಗೊಳಿಸಿ ಸರಕಾರಕ್ಕೆ ಈ ಕುರಿತು ಅಧಿನಿಯಮವನ್ನು ಮಾಡುವ ಅಧಿಕಾರವಿದೆ ಎಂದು ತೀರ್ಪು ನೀಡಿದೆ.

ಇದರಿಂದಾಗಿ ದಶಕಗಳಿಂದ ಸಂಪೂರ್ಣ ಹಕ್ಕಿಗಾಗಿ ಕಾಯುತ್ತಿರುವ ಕರಾವಳಿಯ ಸಾವಿರಾರು ಮೂಲಗೇಣಿದಾರರಿಗೆ ಅಧಿಕಾರ ಸಿಗುವ ದಿಕ್ಕಿನಲ್ಲಿ ದಾರಿ ಸುಗಮವಾಗಿದೆ. ಸರಕಾರ ತಕ್ಷಣವೇ ಕಾರ್ಯಪ್ರವೃತ್ತರಾಗಿ ಮುಂದಿನ ಮೊದಲ ಅಧಿವೇಶನದಲ್ಲಿಯೇ ಪರಿಹಾರಕ್ಕಾಗಿ ಜಾತಕಪಕ್ಷಿಯಂತೆ ಕಾಯುತ್ತಿರುವ ಮೂಲ ಗೇಣಿದಾರರಿಗೆ ನ್ಯಾಯ ನೀಡುವಲ್ಲಿ ಕಾರ್ಯಪ್ರವೃತ್ತರಾಗಬೇಕು ಮತ್ತು ಯಾವುದೇ ಕಾರಣಕ್ಕೆ ವಿಳಂಬನೀತಿ ಅನುಸರಿಸದೆ ತಕ್ಷಣ ಜಾರಿಗೊಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ಆಗ್ರಹಿಸಿದ್ದಾರೆ.

Related posts

ಅಳದಂಗಡಿಯಲ್ಲಿ ಸರಕಾರಿ ಸೌಲಭ್ಯ ವಂಚಿತರಾದ ವೃದ್ಧ ಮಹಿಳೆಯ ಮನೆಗೆ ತಹಶೀಲ್ದಾರ್ ಭೇಟಿ: ಅಜ್ಜಿಗೆ ವಾಸ್ತವ್ಯ ದೃಢೀಕರಣ ಪತ್ರ, ಆಹಾರ ಸಾಮಾಗ್ರಿ ಕಿಟ್ ವಿತರಣೆ: ಸುದ್ದಿ ಉದಯ ಸ್ಪೆಷಲ್ ರಿಪೋರ್ಟ್ Effect

Suddi Udaya

ಕೊಯ್ಯೂರು ರಸ್ತೆಗೆ ಉರುಳಿದ ಹೆಮ್ಮರ : ಸ್ಥಳೀಯರ ಸಹಕಾರದಲ್ಲಿ ಇಲಾಖೆಯಿಂದ ತೆರವು

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ವಿಶ್ವ ಸಂಗೀತ ದಿನ ಆಚರಣೆ

Suddi Udaya

ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವೇಣೂರು ಶಾಖೆಯಲ್ಲಿ ಈ ಸ್ಟಾಂಪಿಂಗ್ ಉದ್ಘಾಟನೆ

Suddi Udaya

ಕನ್ಯಾಡಿ-1: ನಿವೃತ್ತ ಶಿಕ್ಷಕ ದಿ| ವೆಂಕಪ್ಪ ಗೌಡ ರವರಿಗೆ ನುಡಿನಮನ ಕಾರ್ಯಕ್ರಮ

Suddi Udaya

ಅಳದಂಗಡಿ: ಸುದ್ದಿ ಉದಯ ವಾರಪತ್ರಿಕೆ ವರದಿಗೆ ಅಳದಂಗಡಿ ಗ್ರಾ.ಪಂನಿಂದ ಸ್ಪಂದನೆ: ಶೋಚನೀಯ ಸ್ಥಿಯಲ್ಲಿದ್ದ ಸೋರುತ್ತಿದ್ದ ಮನೆಯ ಮೇಲ್ಚಾವಣಿ ತೆರವು: ಮೇಲ್ಛಾವಣಿಗೆ ಶೀಟ್ ಅಳವಡಿಕೆಯ ಕೆಲಸ ಪ್ರಾರಂಭ,ಸಾರ್ವಜನಿಕರಿಂದ ಮೆಚ್ಚುಗೆ

Suddi Udaya
error: Content is protected !!