25.7 C
ಪುತ್ತೂರು, ಬೆಳ್ತಂಗಡಿ
May 17, 2025
ಚಿತ್ರ ವರದಿವರದಿಶಿಕ್ಷಣ ಸಂಸ್ಥೆ

ಶ್ರೀ ಧ. ಮಂ.  ಆಂಗ್ಲ ಮಾಧ್ಯಮ  ಶಾಲೆಯಲ್ಲಿ  ಆಂಗ್ಲಭಾಷಾ ಶಿಕ್ಷಕರ  ಕಾರ್ಯಾಗಾರ

ಧರ್ಮಸ್ಥಳ :ಧರ್ಮಸ್ಥಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ  ಶಾಲೆ ಯಲ್ಲಿ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಆಶಯದಂತೆ ಆಂಗ್ಲಭಾಷಾ ಶಿಕ್ಷಕರ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಈ  ಆಂಗ್ಲಭಾಷಾ ಕಾರ್ಯಾಗಾರದಲ್ಲಿ ವ್ಯಾಕರಣವನ್ನು ಸುಲಭವಾಗಿ ವಿದ್ಯಾರ್ಥಿಗಳಿಗೆ ತಲುಪಿಸುವ ರೀತಿ, ಅದಕ್ಕಾಗಿ ಇರುವ ಸುಲಭ ಉಪಾಯಗಳು ,ಚಟುವಟಿಕೆಗಳು ವ್ಯಾಕರಣದಲ್ಲಿ ಸಾಮಾನ್ಯವಾಗಿ ಮಾಡುವ ಸಣ್ಣ ಪುಟ್ಟ ತಪ್ಪುಗಳು, ಆಂಗ್ಲಭಾಷಾ ಅಕ್ಷರಗಳ ಉಚ್ಚಾರಣೆ, ವ್ಯತ್ಯಾಸ, ಇತ್ಯಾದಿಗಳನ್ನು ಸಂಪನ್ಮೂಲ ವ್ಯಕ್ತಿ ಶಂಕರನಾರಾಯಣ ಕಡಂದಲೆ ನಿವೃತ್ತ ಮುಖ್ಯ ಶಿಕ್ಷಕರು, ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆ, ಕಡಂದಲೆ ಇವರು ಅತ್ಯಂತ ಮಾರ್ಮಿಕವಾಗಿ ನಿರ್ವಹಿಸಿದರು . 

ಕಾರ್ಯಾಗಾರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗೆ ಒಳಪಟ್ಟ ಆಂಗ್ಲಭಾಷಾ ಶಿಕ್ಷಕರು ಭಾಗವಹಿಸಿದ್ದರು. ಧರ್ಮಸ್ಥಳ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವ ರ ಆಂಗ್ಲ ಮಾಧ್ಯಮ ಶಾಲೆಯ  ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ. ವಿ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಶಾಲೆಯ ಪ್ರಾರಂಭಕ್ಕೂ ಮುನ್ನ ನಡೆಸಿದಂತಹ ಈ ಕಾರ್ಯಗಾರ ಶಿಕ್ಷಕರುಗಳಲ್ಲಿ ಆಂಗ್ಲ ಭಾಷೆಯ ಕುರಿತಾದ  ಹೊಸ ವಿಚಾರಗಳನ್ನು ಅರಿಯಲು ಸಹಕಾರಿಯಾಯಿತು. 

Related posts

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬೆಳಾಲು ಕಾರ್ಯಕ್ಷೇತ್ರದ ಸದಸ್ಯ ಬಾಬು ಗೌಡ ರವರಿಗೆ ಊರುಗೋಲು ವಿತರಣೆ

Suddi Udaya

ಆ.24: ಬೆಳ್ತಂಗಡಿ ಮುಳಿಯ ಜುವೆಲ್ಸ್ ನಲ್ಲಿ ಶ್ರೀ ಕೃಷ್ಣಾ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆ

Suddi Udaya

ವೇಣೂರು ತುಳುನಾಡ ಜವನೆರ್ ಹೆಚ್.ಪಿ.ಎಲ್ ಸೀಸನ್ -7 ರ ಪದಾಧಿಕಾರಿಗಳ ಆಯ್ಕೆ

Suddi Udaya

ಕಳೆಂಜ: ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ್ ಆಗಿ ಧನಂಜಯ ಗೌಡ ಆಯ್ಕೆ

Suddi Udaya

ಬಂದಾರು ಸ.ಹಿ.ಉ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಮೂರು ದಿನದ ಅಂತರದಲ್ಲಿ ಸಹೋದರರಿಬ್ಬರ ಸಾವು

Suddi Udaya
error: Content is protected !!