ಬೆಳ್ತಂಗಡಿ: ಬೆಳ್ತಂಗಡಿಯ ಖ್ಯಾತ ವಕೀಲರಾದ ಬಿ.ಕೆ ಧನಂಜಯ ರಾವ್ ಇವರ ರಾವ್ ಅಸೋಸಿಯೆಟ್ಸ್ ನೂತನ ವಕೀಲರ ಕಚೇರಿಯ ಉದ್ಘಾಟನಾ ಸಮಾರಂಭ ಮೇ 24 ರಂದು ಬೆಳ್ತಂಗಡಿಯ ಮಹಿಳಾ ವೃಂದದ ಕಟ್ಟಡದಲ್ಲಿ ನೆರವೇರಿತು.
ನೂತನ ಕಚೇರಿಯನ್ನು ಪಂಚ ದೀಪವನ್ನು ಬೆಳಗಿಸುವ ಮೂಲಕ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ, ವಿಧಾನ ಪರಿಷತ್ ಶಾಸಕ ಕೆ ಪ್ರತಾಪ್ ಸಿಂಹ ನಾಯ್ಕ , ಮಾಜಿ ಶಾಸಕ ಕೆ ವಸಂತ ಬಂಗೇರ, ಹಿರಿಯ ವಕೀಲರಾದ ಭಗೀರಥ ಜಿ, ಸುಬ್ರಹ್ಮಣ್ಯ ಸ್ಥಾನಿಕ ಸಭಾದ ಅಧ್ಯಕ್ಷ ರಾಧಕೃಷ್ಣ ರಾವ್ ನೆರವೇರಿಸಿ, ನೂತನ ಸಂಸ್ಥೆಗೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಪ್ರಸಾದ್ ಕೆ ಎಸ್, ಕಾರ್‍ಯದರ್ಶಿ ಶೈಲೇಶ್ ಠೋಸರ್, ಕುಟುಂಬದ ಹಿರಿಯರಾದ ಬಿ.ಕೆ ಸುಬ್ಬರಾವ್, ನ್ಯಾಯವಾದಿಗಳಾದ ಮನೋಹರ ಕುಮಾರ್ ಇಳಂತಿಲ, ಸಂತೋಷ್ ಕುಮಾರ್, ವಿನಯ ಕುಮಾರ್, ನವೀನ್ ಬಿ.ಕೆ, ಶಿವಕುಮಾರ್, ಮೊದಲಾವದರು ಉಪಸ್ಥಿತರಿದ್ದರು.
ಈ ಸಂದರ್ಭ ಯಕ್ಷಗಾನ ಕಲಾವಿದ ಅಪಘಾತದಲ್ಲಿ ಮಲಗಿದ ಸ್ಥಿತಿಯಲ್ಲಿರುವ ವಿಷ್ಣು ಶರ್ಮ ಹಾಗೂ ಉಜಿರೆಯಲ್ಲಿ ರೋಟರಿ ಕ್ಲಬ್ ವತಿಯಿಂದ ಮಹಿಳೆಗೆ ನಿಮಾರ್ಣವಾಗುತ್ತಿರುವ ಮನೆಗೆ ಧನಂಜಯ ರಾವ್ ಅವರು ಧನ ಸಹಾಯವನ್ನು ಹಸ್ತಾಂತರಿಸಿದರು.
ಬೆಳ್ತಂಗಡಿ ರಾವ್ ಅಸೋಸಿಯೇಟ್ಸ್ ನ ವಕೀರುಗಳಾದ ಬಿ.ಕೆ ಮಿಹಿರ್ ರಾವ್, ದಿನೇಶ್ ಶೆಟ್ಟಿ, ಆನಂದ ಕುಮಾರ್ ಎಂ.ಸಿ , ಶ್ರೀಮತಿ ದಕ್ಷಾ ಜೈನ್, ಕು| ರೇಶ್ಮಾ, ಶ್ರೀಮತಿ ಸೌಮ್ಯಲತಾ ಕೆ, ಕು| ಶ್ವೇತಾ ಹಾಗೂ ಸಿಬ್ಬಂದಿಗಳು ಸಹಕರಿಸಿದರು.
ರಾವ್ ಅಸೋಸಿಯೇಟ್ಸ್ ನ ಮಾಲಕ ಹಾಗೂ ಪ್ರಖ್ಯಾತ ನ್ಯಾಯವಾದಿ ಧನಂಜಯ್ ರಾವ್ ಮತ್ತು ಅವರ ಪತ್ನಿ ಶ್ರೀಮತಿ ಸೌಮ್ಯಲತಾ ಅತಿಥಿ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.