26 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕಬೆಳ್ತಂಗಡಿ

ಸವಣಾಲು ಬೈರವಕಲ್ಲು ಶ್ರೀ ಬೈರವ ಮೂಜಿಲ್ನಾಯ ಪುರುಷರಾಯ ದೈವಸ್ಥಾನದ ಪುನರ್ ಪ್ರತಿಷ್ಠಾ ಕಲಶೋತ್ಸವ: ಧಾರ್ಮಿಕ ಸಭೆ

ಸವಣಾಲು: ಇಲ್ಲಿಯ ಬೈರವಕಲ್ಲು ಶ್ರೀ ಬೈರವ ಮೂಜಿಲ್ನಾಯ ಪುರುಷರಾಯ ದೈವಸ್ಥಾನದ ಪುನರ್ ಪ್ರತಿಷ್ಠಾ ಕಲಶೋತ್ಸವವು ಕೇಮೊಟ್ಟುಗುತ್ತು ಪ್ರಭಾಕರ ಮಂಜಿತ್ತಾಯರು ಮತ್ತು ಗುತ್ತಿನ ಬೈಲು ಶ್ರೀ ವಿಷ್ಣುಮೂರ್ತಿ ಮಂಜಿತ್ತಾಯರ ನೇತೃತ್ವದಲ್ಲಿ ಮೇ 24 ರಂದು ನಡೆಯಿತು.


ಇಂದು ಬೆಳಿಗ್ಗೆ ಪುಣ್ಯಾಹವಾಚನೆ ಗಣಪತಿ ಹೋಮ, ಸಪರಿವಾರ ಬೈರವ ಮೂಜಿಲ್ನಾಯ ಪುರುಷರಾಯ ದೈವಗಳ ಪ್ರತಿಷ್ಠಾಪನೆ ಸಾನಿಧ್ಯ ಕಲಶಾಭಿಷೇಕ, ಪರ್ವ ಪ್ರಸನ್ನ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಪರಮೇಶ್ವರ ಎಂ.ಕೆ ಜಾಲಾಡೆ ಅಧ್ಯಕ್ಷತೆಯನ್ನು ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸುರೇಂದ್ರ, ಮಲೆಕುಡಿಯರ ಸಂಘದ ಜಿಲ್ಲಾಧ್ಯಕ್ಷ ಹರೀಶ್ ಎಂ.ಕೆ ಎಳನೀರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವ್ಯವಸ್ಥಾಪನ ಸಮಿತಿಯ ಗೌರವಾಧ್ಯಕ್ಷ ರಾಮಣ್ಣ ಜಾಲಾಡೆಮನೆ, ಅಮಿತಿ ಅಧ್ಯಕ್ಷ ಕೃಷ್ಣಪ್ಪ ಗೌಡ ದೇವಸ, ಪ್ರಧಾನ ಕಾರ್ಯದರ್ಶಿಗಳಾದ ವಸಂತ ಎಂ.ಕೆ ಪೇಲ, ಕೃಷ್ಣಪ್ಪ ಎಂ.ಕೆ ಬಾಡಡ್ಕ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಿನ್ನಯ್ಯ ಎಂ.ಕೆ, ಮೇಲಂತಬೆಟ್ಟು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಹರಿಣಾಕ್ಷಿ, ಮೇಲಂತಬೆಟ್ಟು ಗ್ರಾ.ಪಂ. ಸದಸ್ಯರಾದ ಲೋಕನಾಥ ಶೆಟ್ಟಿ, ಪ್ರಭಾಕರ ಆಚಾರ್ಯ, ಚಂದ್ರಶೇಖರ, ಶ್ರೀಮತಿ ಸುಮಲತಾ, ಶ್ರೀಮತಿ ಜಯಲಕ್ಷ್ಮೀ, ಶ್ರೀಮತಿ ಶಶಿಕಲಾ, ವ್ಯವಸ್ಥಾಪನಾ ಸಮಿತಿಯ ಉಪಾಧ್ಯಕ್ಷರುಗಳು, ಪದಾಧಿಕಾರಿಗಳು, ಸಂಚಾಲಕರು, ಸಹಸಂಚಾಲಕರು, ಸರ್ವಸದಸ್ಯರು ಹಾಗೂ ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.
ರಾತ್ರಿ ಬೈರವ ಮೂಜಿಲ್ನಾಯ ಪುರುಷರಾಯ ದೈವಗಳ ಗಗ್ಗರ ಸೇವೆ ನಡೆಯಲಿದೆ.

Related posts

ಬಂದಾರು ಶ್ರೀ ರಾಮ ನಗರ ಜೈ ಶ್ರೀ ರಾಮ್ ಗೆಳೆಯರ ಬಳಗದಿಂದ ಸಾಮೂಹಿಕ ದೀಪಾವಳಿ ಆಚರಣೆ

Suddi Udaya

ವಾಣಿ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ

Suddi Udaya

ಮಹಾ ಕುಂಭ ಮೇಳ: 5 ತಿಂಗಳ ಮಗು, ತಂದೆ- ತಾಯಿ ಸಮೇತ ಪುಣ್ಯ ಸ್ನಾನ ಮಾಡಿ ಆದಶ೯ರಾದ ಬೆಳ್ತಂಗಡಿಯ ಮಹೇಶ್ ಆಚಾರ್ಯ

Suddi Udaya

ಶ್ರೀ ರಾಮ ಕ್ಷೇತ್ರಕ್ಕೆ ಮಾಜಿ ಸಚಿವರುಗಳಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ ಭೇಟಿ

Suddi Udaya

ಪ್ರಕೃತಿ ವಿಸ್ಮಯ: ಪಪ್ಪಾಯಿ ಹಣ್ಣಿನೊಳಗೆ ಮರಿ ಪಪ್ಪಾಯಿ

Suddi Udaya

ಲಾಯಿಲ: ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನ ಬೆಳ್ತಂಗಡಿ ವತಿಯಿಂದ 352 ನೇ ಆರಾಧನಾ ಮಹೋತ್ಸವ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ