ಅಳದಂಗಡಿ: ಇಂದು ಸಮಾಜದಲ್ಲಿ ಸಂಘಟನೆಗಳು ಮಾನವೀಯ ಸೇವೆಯ ಚಟುವಟಿಕೆಗಳನ್ನು ನಡೆಸುವುದರ ಮೂಲಕ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿವೆ.
ಆರೋಗ್ಯ ಶಿಬಿರ, ಬಡ ಕುಟುಂಬದ ಮಕ್ಕಳಿಗೆ ಪುಸ್ತಕ ವಿತರಣೆ ಸೇರಿದಂತೆ ಆನೇಕ ಯೋಜನೆಗಳನ್ನು ನಡೆಸುತ್ತಿವೆ. ಆದರೆ ಇಲ್ಲೊಂದು ಸಂಘಟನೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಸಮಾಜದ ಪ್ರಶಂಸೆಗೆ ಪಾತ್ರವಾಗಿ, ಎಲ್ಲರಿಗೂ ಮಾದರಿಯಾಗಿದೆ.
ಅಳದಂಗಡಿ ಮಾರ್ನಿಂಗ್ ಫ್ರೆಂಡ್ಸ್ ಕೆದ್ದು, ತಮ್ಮ ಸೇವಾ ಮನೋಭಾವನೆಯೊಂದಿಗೆ ಸಹಾಯನಿಧಿಗಾಗಿ ಕ್ರಿಕೆಟ್ ಪಂದ್ಯಾಟವನ್ನು ಸಂಘಟಿಸಿತ್ತು. ಇದರ ಮೂಲಕ ಸಂಗ್ರಹವಾದ ಮೊತ್ತ ರೂ. 2.25 ಲಕ್ಷವನ್ನು ಕೀರ್ತನ ಎಂಬ ಯುವಕನ ವೈದ್ಯಕೀಯ ಚಿಕಿತ್ಸೆಗೆ ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇವರ ಈ ಸೇವಾ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಳದಂಗಡಿ ಅರಮನೆಯ ತಿಮ್ಮಣ್ಣ ಅರಸರಾದ ಡಾ. ಪದ್ಮಪ್ರಸಾದ್ ಅಜಿಲರ ಉಪಸ್ಥಿತಿಯಲ್ಲಿ ಮಾರ್ನಿಂಗ್ ಫ್ರೆಂಡ್ಸ್ ಮತ್ತು ಹಿಂದು ಯುವಶಕ್ತಿ ಅಲಡ್ಕ ಕ್ಷೇತ್ರ ಸದಸ್ಯರ ಸಮ್ಮುಖದಲ್ಲಿ ಈ ನೆರವನ್ನು ಹಸ್ತಾಂತರಿಸಲಾಯಿತು.