April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಹೋರಾಟದ ಮೂಲಕ ಧರ್ಮ ಜಾಗೃತಿಯನ್ನು ಮಾಡಿದ್ದೇನೆ: ಮಹೇಶ್ ಶೆಟ್ಟಿ ತಿಮರೋಡಿ

ಬೆಳ್ತಂಗಡಿ:1992 ರಿಂದ ಸುಮಾರು 31 ವರ್ಷಗಳಿಂದ ಹಿಂದುತ್ವದ ಪರವಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದು.ನಾನು ಹಿಂದೂ ಜಾಗರಣ ವೇದಿಕೆಯಲ್ಲಿ ತಾಲೂಕಿನ ಮೂಲೆ ಮುಲೆಗೂ ಸಂಚರಿಸಿ ಸಂಘಟನೆಯನ್ನು ಕಟ್ಟಿ ಬೆಳೆಸಿದ್ದು ಸಂಘಟನೆಯ ಹಲವು ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ನ್ಯಾಯ ಒದಗಿಸಿದ್ದೇನೆ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.


ಅವರು ಮೇ 26ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸಂಘದ ಜವಾಬ್ದಾರಿಯಿಂದ ವಿಮುಕ್ತವಾದ ನಂತರದ ದಿನಗಳಲ್ಲಿಯೂ ಕೂಡ ಸಂಘ ನೀಡಿದ ಶಿಕ್ಷಣದಿಂದ ನನ್ನದೇ ರೀತಿಯಲ್ಲಿ ಹಿಂದುತ್ವ ಹೋರಾಟ ಮಾಡಿಕೊಂಡು ಬಂದಿದ್ದು, ಧರ್ಮದ ವಿಷಯದಲ್ಲಿ ಯಾವುದೇ ರೀತಿಯಲ್ಲಿ ರಾಜಿಯಾಗದೆ ಧರ್ಮ ನಿಷ್ಠೆಯನ್ನು ಹೊಂದಿ, ಹಿಂದೂ ಧರ್ಮಕ್ಕೆ ಅಪಮಾನ ಮತ್ತು ಅನ್ಯಾಯವಾದಾಗ ಸಾವಿರಾರು ಕಾರ್ಯಕರ್ತರನ್ನು ಸೇರಿಸಿಕೊಂಡು ಹೋರಾಟ ಮಾಡಿ ಧರ್ಮ ಜಾಗೃತಿಯನ್ನು ಮಾಡಿದ್ದೇನೆ ಎಂದು ತಿಳಿಸಿದರು.
ಹಿಂದೂ ಹೆಣ್ಣು ಮಕ್ಕಳಿಗೆ ಅನ್ಯ ಧರ್ಮೀಯರಿಂದ ಅನ್ಯಾಯವಾದಾಗ ಉಗ್ರವಾಗಿ ಪ್ರತಿಭಟಿಸಿ ಹಲವಾರು ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಿದ್ದೇನೆ. ಇಷ್ಟೆಲ್ಲಾ ಹಿಂದುತ್ವ ಪರವಾದ ಹೋರಾಟದಲ್ಲಿ ನನಗೆ ದಕ್ಕಿದ್ದು ಸುಮಾರು 35 ಕ್ಕೂ ಹೆಚ್ಚು ಕೇಸುಗಳು ಮಾತ್ರ. ನನ್ನ ಜೀವನದ ಬಹುಪಾಲು ಪೊಲೀಸ್ ಸ್ಟೇಷನ್ ಮತ್ತು ಕೋರ್ಟ್ ಗೆ ಅಲೆದಾಡಿದ್ದು ನನ್ನ ವೈಯಕ್ತಿಕ ಕಾರಣಕ್ಕಾಗಿ ಅಲ್ಲ. ಕೇವಲ ಹಿಂದೂ ಧರ್ಮದ ರಕ್ಷಣೆಯ ಸಲುವಾಗಿ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮನೋಜ್ ಕುಂಜರ್ಪ, ಪುರಂದರ ಸುರ್ಯ, ಸಂತೋಷ್ ಕಡಂಬು, ಅಶ್ವಥ್ ಕುಕ್ಕೇಡಿ, ವೆಂಕಪ್ಪ ಕೋಟ್ಯಾನ್ ಇಂದಬೆಟ್ಟು, ಪ್ರಜ್ವಲ್ ಕಲ್ಮಂಜ ಉಪಸ್ಥಿತರಿದ್ದರು

Related posts

ತನ್ನ ಹೋಟೆಲ್ ಗೆ ಕಂಬಳ ಓಟದ ಪ್ರಸಿದ್ಧ ” ಕೋಣ ತಾಟೆ” ಹೆಸರಿಟ್ಟ ಮಾಲೀಕ

Suddi Udaya

ಗುರುವಾಯನಕೆರೆ ಬಳಿ ಡಿವೈಡರ್‌ಗೆ ಬೈಕ್ ಡಿಕ್ಕಿ: ಯುವಕ ಸ್ಥಳದಲ್ಲಿ ಸಾವು

Suddi Udaya

ಗುರುವಾಯನಕೆರೆ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ.54.80 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ ಶೇ.10 ಡಿವಿಡೆಂಡ್

Suddi Udaya

ಅಳದಂಗಡಿ ಮತದಾನ ಕೇಂದ್ರಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಬೆಂಗಳೂರಿನ ಲೆಕ್ಕ ಪರಿಶೋಧಕರಾದ ಪ್ರೇಮನಾಥ ಹೆಗಡೆ, ಸಿದ್ದಾರ್ಥ ರವರಿಂದ ಕಾಯರ್ತ್ತಡ್ಕ ಹಿ.ಪ್ರಾ. ಶಾಲೆಗೆ ಅನ್ನ ಬಡಿಸುವ ಗಾಡಿ ಕೊಡುಗೆ

Suddi Udaya

ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶಿರ್ಲಾಲು ಸಾಧನೆಗೆ ಸಾಧನಾ ಪ್ರಶಸ್ತಿಯ ಗೌರವ

Suddi Udaya
error: Content is protected !!