September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿಧಾರ್ಮಿಕ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪತ್ತನಾಜೆ: ವಿಶೇಷ ಸೇವೆ, ಉತ್ಸವಗಳಿಗೆ ತೆರೆ 

 ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ವೃಷಭ ಮಾಸದ 1೦ನೇ ದಿನ “ಪತ್ತನಾಜೆ “(ಹತ್ತನಾವಧಿ) ಪ್ರಯುಕ್ತ ಮೇ 25 ರಂದು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ  ನೇತೃತ್ವದಲ್ಲಿ  ಶ್ರೀ ಸ್ವಾಮಿಗೆ ರಂಗ ಪೂಜೆ, ಬಲಿ ಉತ್ಸವ, ವಸಂತ ಪೂಜೆ, ಅಷ್ಟಾವಧಾನ ಸೇವೆ ನಡೆದು ,ಧ್ವಜಮರ ಅವರೋಹಣದೊಂದಿಗೆ ಶ್ರೀ ದೇವರ ಉತ್ಸವ ಮೂರ್ತಿ ಗರ್ಭ ಗುಡಿ ಪ್ರವೇಶಿಸಿದರು.

ಮುಂದಿನ ಕಾರ್ತೀಕ ಮಾಸದ ದೀಪಾವಳಿಯ ವರೆಗೆ ಕ್ಷೇತ್ರದಲ್ಲಿ ಯಾವುದೇ ವಿಶೇಷ ಸೇವೆಗಳು, ಉತ್ಸವಗಳು ನಡೆಯುವುದಿಲ್ಲ. ಲಕ್ಷ ದೀಪೋತ್ಸವದೊಂದಿಗೆ ಮತ್ತೆ ವಿಶೇಷ ಉತ್ಸವ, ಸೇವೆಗಳು ಆರಂಭಗೊಳ್ಳುತ್ತವೆ, ಪತ್ತನಾಜೆ  ಉತ್ಸವದಲ್ಲಿ  ಹೆಗ್ಗಡೆ ಕುಟುಂಬ ವರ್ಗ,   ಕ್ಷೇತ್ರದ ಅರ್ಚಕ ವೃಂದ,ಸಿಬ್ಬಂದಿವರ್ಗ ಭಾಗವಹಿಸಿದ್ದರು.

 ಧರ್ಮಸ್ಥಳ ಮೇಳದ ತಿರುಗಾಟ ಸಮಾಪ್ತಿ :  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯ ಪ್ರಸಕ್ತ ಸಾಲಿನ ತಿರುಗಾಟ ಪತ್ತನಾಜೆಯಂದು ಸಮಾಪನಗೊಂಡಿತು. ಮೇಳದ ಶ್ರೀ ಮಹಾಗಣಪತಿಯನ್ನು ಮೇ 25 ರಂದು ಸಂಜೆ ಬಿಡಾರದ ಮಣೆಗಾರರ ಮನೆಯಿಂದ ವೈಭವಪೂರ್ಣ ಮೆರವಣಿಗೆಯಲ್ಲಿ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. ಅಲಂಕೃತ ಶ್ರೀ ಮಹಾಗಣಪತಿಯನ್ನು  ಸಕಲ ಗೌರವಗಳೊಂದಿಗೆ  ನರ್ತನಸೇವೆಯಲ್ಲಿ ಕರೆತರಲಾಯಿತು. ಕ್ಷೇತ್ರದ ಆನೆಗಳು, ಬಸವ, ಹೂವಿನಕೋಲು, ವಾದ್ಯ ಮೇಳ,ಚೆಂಡೆ ಮೇಳ, ಶಂಖ ಜಾಗಟೆ  ವಾದನ ಗಳೊಂದಿಗೆ ರಥಬೀದಿಯಲ್ಲಿ ಸಾಗಿಬಂದು ಶ್ರೀ ಮಂಜುನಾಥಸ್ವಾಮಿ ಹಾಗೂ ಶ್ರೀ ಅಮ್ಮನವರ ಸನ್ನಿಧಿ ಮುಂಭಾಗದಲ್ಲಿ ದರ್ಶನ ಸೇವೆ ನಡೆಸಿ ಬಳಿಕ ಛತ್ರ ಮಹಾಗಣಪತಿ ಗುಡಿಗೆ  ಪ್ರವೇಶಿಸಲಾಯಿತು.                               ಧರ್ಮಾಧಿಕಾರಿ ಡಾ!ಡಿ.ವೀರೇಂದ್ರ ಹೆಗ್ಗಡೆ,ಮೇಳದ ಯಜಮಾನ ಹರ್ಷೇಂದ್ರ ಕುಮಾರ್, ಹೆಗ್ಗಡೆ ಕುಟುಂಬಸ್ಥರು, ಕ್ಷೇತ್ರ ಹಾಗೂ ಮೇಳದ ಸಿಬ್ಬಂದಿ ವರ್ಗ ಹಾಗೂ ಭಕ್ತಾದಿಗಳು ಸಂಭ್ರಮದಲ್ಲಿ ಭಾಗವ ಹಿಸಿದ್ದರು.

Related posts

ಬೆಳ್ತಂಗಡಿ ಶ್ರೀ ಧ. ಮಂ.ಆಂ.ಮಾ. ಶಾಲೆಯಲ್ಲಿ ಆಟಿದ ಕೂಟ

Suddi Udaya

ಭಾರತೀಯ ಜನತಾ ಪಕ್ಷದ ಬೆಳ್ತಂಗಡಿ ಮಂಡಲ ಅಧ್ಯಕ್ಷರಾಗಿ ಧರ್ಮಸ್ಥಳ ಗ್ರಾ.ಪಂ. ಉಪಾಧ್ಯಕ್ಷ, ಸಂಘಟಕ ಶ್ರೀನಿವಾಸ್ ರಾವ್ ಧರ್ಮಸ್ಥಳ ನೇಮಕ

Suddi Udaya

ಕಳಿಯ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ

Suddi Udaya

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

Suddi Udaya

ಅರಸಿನಮಕ್ಕಿ: ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಕಾಳಿ ರವರಿಗೆ ವಾತ್ಸಲ್ಯ ಮನೆ ಹಸ್ತಾಂತರ

Suddi Udaya

ಪಟ್ರಮೆ: ಕೆರೆಮನೆ ನಿವಾಸಿ ಸದಾಶಿವ ನಿಧನ

Suddi Udaya
error: Content is protected !!