April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕ

ಉಜಿರೆ ಶ್ರೀ ಜನಾರ್ದನ ದೇವಸ್ಥಾನದಿಂದ ಕೊಲ್ಲಿ ಶ್ರೀ ದುರ್ಗಾದೇವಿ ಸನ್ನಿಧಿಯವರೆಗೆ ಶಿಲಾಮಯ ಧ್ವಜ ಸ್ತಂಭದ ವಿಜೃಂಭಣೆಯ ಮೆರವಣಿಗೆ

ಮಿತ್ತಬಾಗಿಲು: ಮುಂದಿನ ವರ್ಷ ಬ್ರಹ್ಮಕಲಶೋತ್ಸವ ನಡೆಯಲಿರುವ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಿತ್ತಬಾಗಿಲು ಇದರ ಶಿಲಾಮಯ ಧ್ವಜ ಸ್ತಂಭದ ಮೆರವಣಿಗೆಗೆ ಮೇ.28ರಂದು ಬೆಳಿಗ್ಗೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಸನ್ನಿಧಿಯಿಂದ ಕೊಲ್ಲಿ ಶ್ರೀ ದುರ್ಗಾದೇವಿ ಸನ್ನಿಧಿಯವರೆಗೆ ವಿಜೃಂಭಣೆಯಿಂದ ನಡೆಯಿತು. ‌

ಶಿಲಾಮಯ ಧ್ವಜ ಸ್ತಂಭದ ಮೆರವಣಿಗೆಗೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಶರತ್ ಕೃಷ್ಣ ಪಡ್ವೆಟ್ನಾಯ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ , ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಕೊಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವರಾವ್ ಕಕ್ಕೆನಾಜೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.‌ಲೋಕೇಶ್, ಕಾಯ೯ದಶಿ೯ ಡಿ. ದಿನೇಶ್ ಕಜಕೆ, ಉಪಾಧ್ಯಕ್ಷ ವಿನಯಚಂದ್ರ, ಪ್ರಮುಖರಾದ ಧನಂಜಯ ರಾವ್, ಅಶೋಕ್ ಕುಮಾರ್, ಕೇಶವ ಎಂ.ಕೆ, ಉಮೇಶ್ ಮಾಲೂರು, ದಾಸಪ್ಪ ಗೌಡ, ಕೃಷ್ಣಪ್ಪ ಪೂಜಾರಿ, ರವಿ ಬರಮೇಲು, ಕೃಷ್ಣಪ್ಪ ಗುಡಿಗಾರ್ ಮೊದಲಾದವರು ಉಪಸ್ಥಿತರಿದ್ದರು.

Related posts

ಪಟ್ರಮೆ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಕಳೆಂಜ ಗ್ರಾ.ಪಂ.ನಲ್ಲಿ ಎಸ್.ಸಿ, ಎಸ್.ಟಿ ಫಲಾನುಭವಿಗಳಿಗೆ ನೀರಿನ ಟ್ಯಾಂಕ್ ಹಾಗೂ ವಿಕಲಚೇತನ ಫಲಾನುಭವಿಗಳಿಗೆ ಫ್ಯಾನ್ ವಿತರಣೆ

Suddi Udaya

ಭರತನಾಟ್ಯ ವಿದ್ವತ್ ಪೂರ್ವ ದರ್ಜೆ ಪರೀಕ್ಷೆ: ಪುಂಜಾಲಕಟ್ಟೆಯ ಪಿ. ಬಿ ವೈಷ್ಣವಿ ಡಿಸ್ಟಿಂಕ್ಷನಲ್ಲಿ ತೇರ್ಗಡೆ

Suddi Udaya

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಸಾಧನಾ ಪ್ರಶಸ್ತಿ

Suddi Udaya

ಕೊಕ್ರಾಡಿ : ಕೈತ್ರೋಡಿ ನಿವಾಸಿ ವಜ್ರ ಕುಮಾರ್ ಜೈನ್ ನಿಧನ

Suddi Udaya

ಫೆ.6 : ನಡ ಗ್ರಾಮ ಪಂಚಾಯತ್ ನ ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ