26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರಾಜ್ಯಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾಟ :ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ತಂಡ ಚಾಂಪಿಯನ್

ಉಜಿರೆ: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಕಾಲೇಜು ಹಾಗೂ ಟೈಮ್ಸ್ ಪದವಿ ಪೂರ್ವ ಕಾಲೇಜು ಹಾಸನ ಇವರ ಜಂಟಿ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಬಾಲಕರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ಉಜಿರೆ ತಂಡ ಚಾಂಪಿಯನ್ ಪಟ್ಟವನ್ನು ಪಡೆದು ಹರಿಯಾಣದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

ಸುಭಾಷ್, ಪ್ರತೀಕ್ ಶೆಟ್ಟಿ ,ವಿಕಾಸ್, ಕುಮಾರ್ ಗೌಡ, ಸೂಫಿಯನ್, ಆಫ್ರಿದಿ ಎಸ್ ಡಿ ಎಂ ಉಜಿರೆ, ಚಿನ್ಮಯಿ, ಆಕಾಶ್, ರಾಕೇಶ್.ಆಳ್ವಾಸ್ ಕಾಲೇಜು ಮೂಡಬಿದ್ರಿ. ಕೌಷಿಕ್ ಪೆರ್ನೆ ಪದವಿ ಪೂರ್ವ ಕಾಲೇಜು
ಪುನೀತ್ ನಾರಾಯಣ ಗುರು ಪದವಿ ಪೂರ್ವ ಕಾಲೇಜು ಮಂಗಳೂರು, ಆಕಾಶ್ ಎಸ್ ಡಿ ಪಿ ಟಿ ಕಟೀಲು,
ಉತ್ತಮ ಹೊಡೆತಗಾರ :ಪ್ರತೀಕ್ ಶೆಟ್ಟಿ ಎಸ್ ಡಿ ಎಂ, ಉತ್ತಮ ಸವ್ಯಸಾಚಿ ವಿಕಾಸ್.ಎಸ್ ಡಿ ಎಂ
ಉತ್ತಮ ಬ್ಲಾಕರ್ ಕುಮಾರ್ ಗೌಡ ಪಡೆದುಕೊಂಡಿದ್ದಾರೆ.

ತಂಡದ ವ್ಯವಸ್ಥಾಪಕರಾಗಿ ಸಂದೇಶ್ ಪೂಂಜ ದೈಹಿಕ ಶಿಕ್ಷಣ ಉಪನ್ಯಾಸಕರು, ತಂಡದ ತರಬೇತುದಾರ ಸುಧೀನ. ಹಾಗೂ ರಮೇಶ್ ಹೆಚ್, ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಉಪನ್ಯಾಸಕರು ಇವರಿಗೆ ಶುಭ ಹಾರೈಸಿರುತ್ತಾರೆ.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ವಿಶ್ವ ಸಂಗೀತ ದಿನ ಆಚರಣೆ

Suddi Udaya

ಜೆಸಿಐ ಬೆಳ್ತಂಗಡಿಯ ಮಹಾಸಂಗಮ ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ. ಬಿ.ಎಸ್. ಇ) ಶಾಲೆಯಲ್ಲಿ “ಪ್ರತಿಭಾ ಸಂಗಮ” ಕಾರ್ಯಕ್ರಮ

Suddi Udaya

ಎಸ್ ಡಿ ಎಮ್ ‌ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕ ವರ್ಧಂತ್ಯುತ್ಸವದ ಪ್ರಯುಕ್ತ ‘ಪೂಜ್ಯ ಪಥ’ ಪೂಜ್ಯರು ‌ನಡೆದು ಬಂದ ಹಾದಿಯ ಕುರಿತಾದ ವಿಶೇಷ ಪುಸ್ತಕ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ

Suddi Udaya

ಅಕ್ರಮ ಮರಳು ಸಾಗಿಸುತ್ತಿದ್ದ ಎರಡು ಲಾರಿ ಪೊಲೀಸರ ವಶ: ತಹಶೀಲ್ದಾರ್ ತಂಡ ಕಾರ್ಯಾಚರಣೆ

Suddi Udaya

ಎಕ್ಸೆಲ್ ವಿದ್ಯಾರ್ಥಿಗಳು ಭಾರತದ ಅತ್ಯುನ್ನತ ವೈದ್ಯಕೀಯ ವಿದ್ಯಾ ಸಂಸ್ಥೆ ಏಮ್ಸ್ ಗೆ ಆಯ್ಕೆ

Suddi Udaya
error: Content is protected !!