ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಂಘದಿಂದ ವೀರೇಂದ್ರ ಹೆಗ್ಗಡೆಯವರಿಗೆ “ಶ್ರಾವಕೋತ್ತಮ ಚಿಂತಾಮಣಿ” ಉಪಾಧಿ ಪ್ರದಾನ

ಉಜಿರೆ: ಮೈಸೂರಿನಲ್ಲಿರುವ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಂಘದ ನೇತೃತ್ವದಲ್ಲಿ 25 ಮಂದಿ ಅರ್ಚಕರು, ಶಾಸ್ತ್ರೀ ಮತ್ತು ಉಪಾಧ್ಯಾಯರುಗಳು ಸೆ.18 ರಂದು ಧರ್ಮಸ್ಥಳಕ್ಕೆ ಬಂದು ಸಾಮೂಹಿಕವಾಗಿ ಮಂಗಲಾಷ್ಟಕ, ಪಂಚನಮಸ್ಕಾರ ಮಂತ್ರ ಪಠಣ, ಭಕ್ತಾಮರ ಸ್ತೋತ್ರ ಪಠಣದೊಂದಿಗೆ ಧರ್ಮಸ್ಥಳ ಹಾಗೂ ಹೆಗ್ಗಡೆಯವರಿಗೆ ಬಂದ ಉಪಸರ್ಗಗಳೆಲ್ಲ ನಿವಾರಣೆಯಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.


ದೇವಸ್ಥಾನ, ಭಗವಾನ್ ಚಂದ್ರನಾಥ ಸ್ವಾಮಿ ಬಸದಿ ಹಾಗೂ ಬಾಹುಬಲಿ ಬೆಟ್ಟದಲ್ಲಿ ದೇವರ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಿದರು.
ಬೀಡಿನಲ್ಲಿ (ಹೆಗ್ಗಡೆಯವರ ನಿವಾಸ) ನಡೆದ ಸರಳ ಸಮಾರಂಭದಲ್ಲಿ ಅರ್ಚಕರು ಅವರವರ ಊರಿನ ಬಸದಿಯಲ್ಲಿ ಪೂಜೆ ಮಾಡಿ ತಂದ ಪ್ರಸಾದವನ್ನು ಹೆಗ್ಗಡೆಯವರಿಗೆ ನೀಡಿದರು.

ಮೈಸೂರಿನ ಮೋಹನಕುಮಾರ ಶಾಸ್ತ್ರೀ, ಶಾಂತಿನಾಥ ಉಪಾಧ್ಯಾಯ ಮತ್ತು ಹೇಮಾ ಉಪಾಧ್ಯಾಯ ಮಂಗಲಾಷ್ಟಕ ಹಾಗೂ ಜಿನಗೀತೆಗಳನ್ನು ಹಾಡಿ ಕೊನೆಗೆ ಶಾಂತಿಮಂತ್ರ ಪಠಣ ಮಾಡಿದರು.
ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಂಘದ ವತಿಯಿಂದ ಹೆಗ್ಗಡೆಯವರಿಗೆ “ಶ್ರಾವಕೋತ್ತಮ ಚಿಂತಾಮಣಿ” ಉಪಾಧಿ ನೀಡಿ ಗೌರವಿಸಲಾಯಿತು.

ಬಳಿಕ ಹೇಮಾವತಿ ವೀ. ಹೆಗ್ಗಡೆಯವರನ್ನೂ ಗೌರವಿಸಿ ಅಭಿನಂದಿಸಿದರು. ಡಿ. ಹರ್ಷೇಂದ್ರ ಕುಮಾರ್ ಜೈನ ಅರ್ಚಕರ ಸಂಘದ ಸರ್ವಸದಸ್ಯರನ್ನೂ ಸ್ವಾಗತಿಸಿ, ಧರ್ಮಸ್ಥಳದ ಸೇವಾ ಕಾರ್ಯಗಳ ಬಗ್ಯೆ ಮಾಹಿತಿ ನೀಡಿದರು. ಅರ್ಚಕರ ಸಂಘದ ವತಿಯಿಂದ ಡಿ. ಹರ್ಷೇಂದ್ರ ಕುಮಾರ್ ಅವರನ್ನೂ ಗೌರವಿಸಿದರು.
ಧರ್ಮಸ್ಥಳದ ಭಕ್ತರು ಹಾಗೂ ಅಭಿಮಾನಿಗಳ ಪ್ರೀತಿ-ವಿಶ್ವಾಸ, ಶ್ರದ್ಧಾ-ಭಕ್ತಿಯ ಗೌರವಕ್ಕೆ ಸಂತೋಷ ಮತ್ತು ಮೆಚ್ಚುಗೆ ವ್ಯಕ್ತಪಡಿಸಿ ಹೆಗ್ಗಡೆಯವರು ಮಂಜುನಾಥ ಸ್ವಾಮಿ, ಭಗವಾನ್ ಚಂದ್ರನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ಹಾಗೂ ಧರ್ಮದೇವತೆಗಳ ಅಭಯ ಮತ್ತು ಅನುಗ್ರಹದೊಂದಿಗೆ ನಮ್ಮ ಕರ್ತವ್ಯದೊಂದಿಗೆ ನ್ಯಾಯ, ನೀತಿ, ಧರ್ಮದ ಮಾರ್ಗದಲ್ಲಿ ಸತ್ಕಾರ್ಯಗಳನ್ನು ಪರಿಶುದ್ಧ ಮನಸ್ಸಿನಿಂದ ಮಾಡುತ್ತಿದ್ದೇವೆ. ನಾನು ಮಾಡುವ ಎಲ್ಲಾ ಸೇವಾಕಾರ್ಯಗಳಿಗೂ ಕುಟುಂಬದ ಎಲ್ಲಾ ಸದಸ್ಯರ ಸಕ್ರಿಯ ಸಹಕಾರವಿದೆ ಎಂದು ಅವರು ಹೇಳಿದರು.

Related posts

ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮಿಜೀಯರಿಂದ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ

Suddi Udaya

ನಾಲ್ಕೂರು: ಅಸೌಖ್ಯದಿಂದ ತುಂಗಮ್ಮ ಮಂಗ್ಲುತ್ತ್ಯಾರು ನಿಧನ

Suddi Udaya

ಸುರ್ಯ ದೇವಸ್ಥಾನದ ಆನುವಂಶಿಕ ಆಡಳಿತಮೊಕ್ತೇಸರಾಗಿ ಡಾ. ಸತೀಶ್ಚಂದ್ರ ಸುರ್ಯಗುತ್ತು ನೇಮಕ

Suddi Udaya

ಬಟ್ಲಡ್ಕ ಜುಮಾ ಮಸೀದಿ ಉರೂಸ್ ಕಾರ್ಯಕ್ರಮದ 2ನೇ ದಿನ

Suddi Udaya

ಧರ್ಮಸಂರಕ್ಷಣ ರಥ ಯಾತ್ರೆಗೆ ಸಾಕ್ಷಿಯಾದ ಸಾವಿರ ಸಾವಿರ ಸಂಖ್ಯೆಯ ಭಕ್ತಾದಿಗಳು: ಉಜಿರೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದೇವರ ನಾಮಸ್ಮರಣೆಯೊಂದಿಗೆ ಪಾದಯಾತ್ರೆಗೆ ಅದ್ದೂರಿ ಚಾಲನೆ

Suddi Udaya

ಉಜಿರೆ: ಹಳೇಪೇಟೆ ಮುಹಿಯುದ್ದೀನ್ ಜುಮಾ ಮಸ್ಜಿದ್‌ನಲ್ಲಿ ವಿಜೃಂಭಣೆಯ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!