ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಮತ್ತು ಮಾನಹಾನಿಕಾರಕ ಸುದ್ದಿಗಳನ್ನು ಹರಡಿ ತೇಜೋವಧೆ ಮಾಡುತ್ತಿರುವ ಶೇಖರ್ ಲಾಯಿಲ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ಬ್ಲಾಕ್ ಸಮಿತಿ (ನಗರ) ಅಧ್ಯಕ್ಷ ಕೆ. ಶೈಲೇಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಸಮಿತಿ (ಗ್ರಾಮೀಣ) ಅಧ್ಯಕ್ಷ ರಂಜನ್ ಜಿ.ಗೌಡ ಮತ್ತು ಯೂತ್ ಕಾಂಗ್ರೆಸ್ ಜಿಲ್ಲಾ ಸಮಿತಿ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್‌ರವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಶೈಲೇಶ್ ಕುಮಾರ್ ದೂರು:
ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಅವರು ಪೊಲೀಸ್ ಠಾಣೆಗೆ ದೂರು ನೀಡಿ, ಆರೋಪಿಯು ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯ ಹರಡಿದ ಬಗ್ಗೆ ನಾನು ಮೇ 28 ರಂದು ಬೆಳಿಗ್ಗೆ 11.30 ಗಂಟೆಗೆ ನನ್ನ ಮನೆಯಲ್ಲಿದ್ದಾಗ ನನ್ನ ಪಕ್ಷದ ಕಾರ್ಯಕರ್ತರು ಕರೆಮಾಡಿ ನನಗೆ ಸದ್ರಿ ಸುದ್ದಿಯ ಬಗ್ಗೆ ತಿಳಿಸಿದಾಗ ಹಾಗೂ ಸದ್ರಿ ಸುದ್ದಿಯನ್ನು “ಡಿ.ಸಿ.ಸಿ. ಕೊಕ್ಕಡ” ನಲ್ಲಿ ನೋಡಿದಾಗ ಆಘಾತವಾಯಿತು. ಮತ್ತು ನಾನು ತುಂಬಾ ಧೈರ್ಯ ಕುಂದಿದೆ ಆ ನಂತರ ನನಗೆ ಸುಮಾರು 25-30 ಜನ ಕಾರ್ಯಕರ್ತರು ಕರೆ ಮಾಡಿದಾಗ ನಾನು ಬಹಳಷ್ಟು ಮಾನ ಹಿಂಸೆಗೊಳಗಾಗಿ, ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿರುತ್ತೇನೆ. ಆರೋಪಿಯ ಮೇಲ್ಕಾಣಿಸಿದ ಕೃತ್ಯದಿಂದಾಗಿ ನನಗೆ ನನ್ನ ವ್ಯವಹಾರದಲ್ಲಿ ಕೂಡ ನಷ್ಟ ಉಂಟಾಗಿದ್ದ ಮತ್ತು ನನ್ನ ಮಾನಸಿಕ ಸ್ಥಿತಿಯು ಹದಗೆಟ್ಟಿದ್ದು, ಆತನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರ ಸುಳ್ಳು ಸುದ್ದಿ ಪ್ರಕಟಿಸಿದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಶೈಲೇಶ್ ಕುಮಾರ್ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ರಂಜನ್ ಗೌಡರಿಂದ ದೂರು:
ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ರಂಜನ್ ಗೌಡ ಅವರು ಪೊಲೀಸರಿಗೆ ದೂರು ನೀಡಿ, ನಾನು ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷನಾಗಿ ಕಳೆದ ಎರಡೂವರೆ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಆರೋಪಿಯು ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹರಡಿದ ಬಗ್ಗೆ ಮೇ 29 ರಂದು ಬೆಳಿಗ್ಗೆ 10 ಗಂಟೆಗೆ ನನ್ನ ಮನೆಯಲ್ಲಿದ್ದಾಗ ನನ್ನ ಪಕ್ಷದ ಕಾರ್ಯಕರ್ತರು ಕರೆಮಾಡಿ ನನಗೆ ಸದ್ರಿ ಸುದ್ದಿಯ ಬಗ್ಗೆ ತಿಳಿಸಿದಾಗ ಹಾಗೂ ಸದ್ರಿ ಸುದ್ದಿಯನ್ನು“ಡಿ.ಸಿ.ಸಿ. ಕೊಕ್ಕಡ” ನಲ್ಲಿ ನೋಡಿದಾಗ ಆಘಾತವಾಯಿತು. ಮತ್ತು ನಾನು ತುಂಬಾ ಧೈರ್ಯ ಕುಂದಿದೆನು. ಆ ನಂತರ ನನಗೆ ಸುಮಾರು 25-30 ಜನ ಕಾರ್ಯಕರ್ತರು ಕರೆ ಮಾಡಿದಾಗ ನಾನು ಬಹಳಷ್ಟು ಮಾನಸಿಕ ಹಿಂಸೆಗೊಳಗಾಗಿ, ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿರುತ್ತೇನೆ. ಆರೋಪಿಯ ಮೇಲ್ಕಾಣಿಸಿದ ಕೃತ್ಯದಿಂದಾಗಿ ನನಗೆ ನನ್ನ ವ್ಯವಹಾರದಲ್ಲಿ ಕೂಡ ನಷ್ಟ ಉಂಟಾಗಿದ್ದ ಮತ್ತು ನನ್ನ ಮಾನಸಿಕ ಸ್ಥಿತಿಯು ಹದಗೆಟ್ಟಿದ್ದು, ಆತನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರ ಸುಳ್ಳು ಸುದ್ದಿ ಪ್ರಕಟಿಸಿದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಶೈಲೇಶ್ ಕುಮಾರ್ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಯೂತ್ ಕಾಂಗ್ರೆಸ್ ಜಿಲ್ಲಾ ಸಮಿತಿ ಕಾರ್ಯದರ್ಶಿ
ಅಭಿನಂದನ್ ಹರೀಶ್ ಕುಮಾರ್‌ರಿಂದ ದೂರು:
ಯೂತ್ ಕಾಂಗ್ರೆಸ್ ಜಿಲ್ಲಾ ಸಮಿತಿ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿ, ನಾನು ಕಳೆದ ಎರಡೂವರೆ ವರ್ಷಗಳಿಂದ ಕಾಂಗ್ರೆಸ್ ಜಿಲ್ಲಾ ಸಮಿತಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಆರೋಪಿಯು ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹರಡಿದ ಬಗ್ಗೆ ನಾನು ಮೇ 28 ರಂದು ಮಧ್ಯಾಹ್ನ 1.30 ಗಂಟೆಗೆ ನನ್ನ ಮನೆಯಲ್ಲಿದ್ದಾಗ ನನ್ನ ಪಕ್ಷದ ಕಾರ್ಯಕರ್ತರು ಕರೆಮಾಡಿ ನನಗೆ ಸದ್ರಿ ಸುದ್ದಿಯ ಬಗ್ಗೆ ತಿಳಿಸಿದಾಗ ಹಾಗೂ ಸದ್ರಿ ಸುದ್ದಿಯನ್ನು “ಡಿ.ಸಿ.ಸಿ. ಕೊಕ್ಕಡ” ನಲ್ಲಿ ನೋಡಿದಾಗ ಆಘಾತವಾಯಿತು. ಮತ್ತು ನಾನು ತುಂಬಾ ಧೈರ್ಯ ಕುಂದಿದೆನು. ಆ ನಂತರ ನನಗೆ ಸುಮಾರು 25-30 ಜನ ಕಾರ್ಯಕರ್ತರು ಕರೆ ಮಾಡಿದಾಗ ನಾನು ಬಹಳಷ್ಟು ಮಾನಸಿಕಗೊಳಗಾಗಿ, ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿರುತ್ತೇನೆ. ಆರೋಪಿಯ ಮೇಲ್ಕಾಣಿಸಿದ ಕೃತ್ಯದಿಂದಾಗಿ ನನಗೆ ನನ್ನ ವ್ಯವಹಾರದಲ್ಲಿ ಕೂಡ ನಷ್ಟ ಉಂಟಾಗಿದ್ದ ಮತ್ತು ನನ್ನ ಮಾನಸಿಕ ಸ್ಥಿತಿಯು ಹದಗೆಟ್ಟಿದ್ದು, ಆತನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರ ಸುಳ್ಳು ಸುದ್ದಿ ಪ್ರಕಟಿಸಿದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಶೈಲೇಶ್ ಕುಮಾರ್ ದೂರಿನಲ್ಲಿ ಒತ್ತಾಯಿಸಿದ್ದಾರೆ.