ಬೆಳ್ತಂಗಡಿ :ಭತ್ತ ಬೆಳೆಯುವ ಕೃಷಿಕರಿಗೆ ರಿಯಾಯಿತಿ ದರದಲ್ಲಿ ಭತ್ತದ ಬಿತ್ತನೆ ಬೀಜ ದಾಸ್ತಾನು ಲಭ್ಯ

Suddi Udaya

ಬೆಳ್ತಂಗಡಿ : ಪ್ರಸಕ್ತ 2023-24ನೇ ಸಾಲಿನ ಮುಂಗಾರು ಹಂಗಾಮಿಗೆ ಬೆಳ್ತಂಗಡಿ ತಾಲೂಕಿನ ಭತ್ತ ಬೆಳೆಯುವ ಕೃಷಿಕರಿಗೆ ರಿಯಾಯಿತಿ ದರದಲ್ಲಿ ಭತ್ತದ ಬಿತ್ತನೆ ಬೀಜ ದಾಸ್ತಾನು ಲಭ್ಯವಿದ್ದು, ಅಪೇಕ್ಷಿತ ಸಾಮಾನ್ಯ ವರ್ಗದ ರೈತರು ತಮ್ಮ ಭತ್ತದ ಕೃಷಿ ಜಮೀನಿನ ಆರ್.ಟಿ.ಸಿ/ಪಹಣಿ, ಆಧಾರ್‌ ಜೆರಾಕ್ಸ್‌ ಪ್ರತಿಯನ್ನು ಹಾಗೂ ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ ವರ್ಗದ ರೈತರು ತಮ್ಮ ಭತ್ತದ ಕೃಷಿ ಪಹಣಿ, ಆಧಾರ್ ಜೆರಾಕ್ಸ್ ಮತ್ತು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಿ ಈ ಕೆಳಕಾಣಿಸಿದ ಜಮೀನಿನ ಆರ್.ಟಿ.ಸಿ. ರಿಯಾಯಿತಿ ದರದಲ್ಲಿ ಭತ್ತದ ಬಿತ್ತನೆ ಬೀಜವನ್ನು ಪಡೆದುಕೊಳ್ಳಬಹುದಾಗಿದೆ .

ಭತ್ತ ತಳಿ ಎಮ್ಒ4 ಬೆಳ್ತಂಗಡಿ ದಾಸ್ತಾನು ಪ್ರಮಾಣ(ಕ್ವಿಂಗಳಲ್ಲಿ) 30.00 ರೂ 1143.75, ಕೊಕ್ಕಡ ದಾಸ್ತಾನು ಪ್ರಮಾಣ(ಕ್ವಿಂಗಳಲ್ಲಿ) 10.00, ವೇಣೂರು ದಾಸ್ತಾನು ಪ್ರಮಾಣ 10.00 ದೊರೆಯಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು, ಬೆಳ್ತಂಗಡಿ ಇವರು ಬೆಳ್ತಂಗಡಿ ತಾಲೂಕಿನ ಭತ್ತ ಬೆಳೆಯುವ ಎಲ್ಲಾ ವರ್ಗದ ರೈತರಿಗೆ ಮಾಹಿತಿ ನೀಡಿರುತ್ತಾರೆ.

Leave a Comment

error: Content is protected !!