ಬೆಳ್ತಂಗಡಿ ನ್ಯಾಯಲಯ ಸಿ ಸಿ ನಂಬ್ರ 633/21, ಬೆಳ್ತಂಗಡಿ ಪೊಲೀಸ್ ಠಾಣಾ ಅಕ್ರ 40/2021 ಕಲಂ. 269, 34, 5(1) ಐ ಪಿ. ಸಿ ಮತ್ತು E, D, O. ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿದ ವಾರಂಟು ಆಸಾಮಿ ಅಬ್ದುಲ್ ನಜೀರ್ ಎಂಬಾತನ ಮೇಲೆ L. O. C ತೆರೆದಿದ್ದು, ಆತನು ಮೇ 30 ರಂದು ವಿದೇಶದಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿದವನನ್ನು ಅಲ್ಲಿಯ ಇಮಿಗ್ರೆಶನ್ ಅಧಿಕಾರಿಗಳು ವಶಕ್ಕೆ ಪಡೆದು ಮಾಹಿತಿ ನೀಡಿದಂತೆ ಮೇಲಾಧಿಕಾರಿಗಳ ಆದೇಶದಂತೆ ಬೆಳ್ತಂಗಡಿ ಪೊಲೀಸ್ ಠಾಣಾ PSI ಅರ್ಜುನ್ ಹಾಗೂ ಸಿಬ್ಬಂದಿಗಳಾದ ಹೆಚ್. ಸಿ 418 ವ್ರಷಭ, ಪಿ ಸಿ ಚರಣ್ ರಾಜ್, ಗಿರೀಶ್ ರವರುಗಳು ಆರೋಪಿಯನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆ ಯಿಂದ ವಶಕ್ಕೆ ಪಡೆದುಕೊಂಡು ಬಂದು ಮೇ 31 ರಂದು ಮಾನ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ರೂ.12,100/- ದಂಡ ವಿಧಿಸಿದೆ.

previous post
next post