ಪಿಕ್‌ಆಪ್ ವಾಹನ ತಡೆಗಟ್ಟಿ: ಜೀವಬೆದರಿಕೆ ಒಡ್ಡಿದ ಆರೋಪ: ಮೆಸ್ಕಾಂ ಉದ್ಯೋಗಿ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಕೇಸು

Suddi Udaya

ಬೆಳ್ತಂಗಡಿ: ಪಿಕ್‌ಆಫ್ ವಾಹನದಲ್ಲಿ ಹೋಗುತ್ತಿರುವ ಸಮಯ ಬೆಳ್ತಂಗಡಿ ಹುಣ್ಸೆಕಟ್ಟೆ ನಿವಾಸಿ ಅಭಿಷೇಕ್ ಎಂ. ಎಂಬಾತ ಬೈಕಲ್ಲಿ ಬಂದು ನನ್ನ ವಾಹಕ್ಕೆ ಅಡ್ಡವಾಗಿ ನಿಂತು, ಎಳೆದಾಡಿ, ಅವಾಚ್ಯವಾಗಿ ನಿಂದಿಸಿ, ಜಾತಿನಿಂದನೆಗೈದು ಕೊಲೆ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿ, ಲಾಯಿಲ ಗ್ರಾಮದ ಅಜೆಕಲ್ಲು ನಿವಾಸಿ ಚಂದ್ರಕಾಂತ ಅವರು ಬೆಳಂಗಡಿ ಠಾಣೆಗೆ ದೂರು ನೀಡಿದ್ದಾರೆ.
ಮೇ 30ರಂದು ಬೆಳಗ್ಗೆ 9 ಗಂಟೆಗೆ ಪಿಕ್‌ಆಪ್ ವಾಹನದಲ್ಲಿ ಕಸಬಾ ಗ್ರಾಮದ ಚರ್ಚ್ ರಸ್ತೆಯಿಂದ ಕೆಇಬಿ ರಸ್ತೆ ಕಡೆಗೆ ನಾನು ಹೋಗುತ್ತಿದ್ದಾಗ, ಪರಿಚಯಸ್ಥನಾದ ಅಭಿಷೇಕ್ ಎಂ. ಎಂಬಾತ ಇದ್ದಕ್ಕಿಂದ್ದಂತೆ ಬೈಕ್‌ನಲ್ಲಿ ಬಂದು ಪಿಕ್‌ಆಪ್‌ಗೆ ಅಡ್ಡಲಾಗಿ ಬಂದು ನಿಂತು ತಡೆದು ‘ನೀನು ಬಾರೀ ಹಾರಾಡುತ್ತೀಯ, ಹರೀಶ್ ಪೂಂಜನ ಚೇಲಾ ಶಶಿರಾಜ್ ಶೆಟ್ಟಿ ಜೊತೆ ಬಾರೀ ತಿರುಗಾಡುತ್ತಿಯ, ನಿನ್ನ ಶಶಿರಾಜ್‌ಗೆ ಏನು ಮಾಡಬೇಕೆಂದು ನನಗೆ ಗೊತ್ತು, ಅವರನ್ನು ಎಲ್ಲಿ ಮಟ್ಟ ಹಾಕಬೇಕು ಅಲ್ಲಿ ಮಟ್ಟ ಹಾಕುತ್ತೇನೆ’ ಎಂದು ಹೇಳಿ ಎಳೆದಾಡಿದಾಗ, ‘ಯಾಕೆ ಏನಾಗಿದೆ? ನನ್ನನ್ನು ಏನು ಮಾಡುತ್ತಿದ್ದಿಯಾ? ಎಂದು ನಾನು ಪ್ರಶ್ನಿಸಿದಾಗ, ಅಭಿಷೇಕ್, ಜಾತಿ ನಿಂದನೆ ಮಾಡಿ, ಮೆಸ್ಕಾಂನಲ್ಲಿ ಒಳ್ಳೆಯ ಕೆಲಸದಲ್ಲಿರುವ ನನ್ನ ಎದುರು ನಿಲ್ಲಲು ನಿನಗೆ ಯೋಗ್ಯತೆ ಇದೆಯೇ? ಎಂದು ಹೇಳಿ, ನಿನ್ನ ಮತ್ತು ಶಶಿರಾಜ್ ಶೆಟ್ಟಿಯ ಕೈಕಾಲು ಕೂಡ ಹೇಗೆ ಮುರಿದು ಮೂಲೆಗೆ ಕೂರಿಸಬೇಕು ಎಂದು ನನಗೆ ಗೊತ್ತು ಎಂದು ಕೊಲೆ ಬೆದರಿಕೆ ಒಡ್ಡಿರುವುದಾಗಿ ಚಂದ್ರಕಾಂತ್ ಅವರು ಬೆಳ್ತಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಚಂದ್ರಕಾಂತ್ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣಾ ಅಕ್ರ 44/2023 ಯು/ಎಸ್ 341, 323,506 ಐಪಿಸಿ ಮತ್ತು ಕಲಂ 3(1) (ಎಸ್) ಎಸ್.ಸಿ,ಎಸ್.ಟಿ ಅಕ್ಟ್-2015ರಂತೆ ಪ್ರಕರಣ ದಾಖಲಾಗಿದೆ.

Leave a Comment

error: Content is protected !!