September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ  ಎಸ್. ಡಿ. ಎಮ್ ಪದವಿ ಪೂರ್ವ ವಸತಿ ಕಾಲೇಜಿನಲ್ಲಿ ಮೌಲ್ಯ ಆಧಾರಿತ ತರಗತಿಗಳ ಉದ್ಘಾಟನೆ

ಶ್ರೀ ಕೃಷ್ಣ ಭಗವದ್ಗೀತೆ ಬೋಧನೆ ಮೂಲಕ ಗುರುವಾದ, ವಸುದೇವ ದೇವಕಿಗೆ ನೀಡಿದ ಪರಮಾನಂದದಿಂದ  ಜಗದ್ಗುರು ಎನಿಸಿಕೊಂಡ ಪರಮಾತ್ಮನಾದ.ಯಾವ ವಿದ್ಯಾರ್ಥಿಗಳು ತಂದೆ, ತಾಯಿ,ಗುರುಗಳಿಗೆ ಭಕ್ತಿ,ಪ್ರೀತಿ, ವಿಧೇಯತೆ ತೋರುವರೋ ಅಂತವರು ಉತ್ತರೋತ್ತರ ಅಭಿವೃದ್ದಿ ಹೊಂದುವರು. ಮೌಲ್ಯತುಂಬಿದ ಬದುಕು ಎಲ್ಲಕ್ಕಿಂತ ಶ್ರೇಷ್ಠ.  ದುರ್ಗುಣಗಳಿಂದ ದೂರ ಇದ್ದು ತಪ್ಪುಗಳನ್ನು ಒಪ್ಪಿಕೊಂಡು ಮುಂದೆ ತಪ್ಪಾಗದಂತೆ ಸಾಗುವ ಮನಸ್ಥಿತಿ ಬೆಳಿಸಿಕೊಳ್ಳಬೇಕು.ವಾದ -ವಿವಾದದಲ್ಲಿ ದಿನ ಕಳೆಯದೆ ಕೆಲಸದ ಮೂಲಕ ಸಾಧನೆ ತೋರುವವರಾಗಬೇಕು ,ಮಾತಿಗಿಂತ ಮೌನವೇ ಬೆಲೆಯುಳ್ಳದ್ದು ಎಂಬಂತೆ ಎಲ್ಲಿ ಅವಶ್ಯವೋ ಅಲ್ಲಿ ಮಾತ್ರವೇ  ಮಾತಿರಲಿ.ಅಂಕ ಗಳಿಕೆಯೊಂದಿಗೆ ಮೌಲ್ಯಧಾರಿತ ಬದುಕಿನ ಗಳಿಕೆಯು ಬಹುಮುಖ್ಯ ಎಂದು ಎಸ್. ಡಿ.ಎಮ್ ಪದವಿ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿರುವ ಡಾ. ಶ್ರೀಧರ್ ಎನ್ ಭಟ್ ಹೇಳಿದರು.

 ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿಪೂರ್ವ ಕಾಲೇಜಿನಲ್ಲಿ ‘ಮೌಲ್ಯಧಾರಿತ ತರಗತಿಗಳ ಉದ್ಘಾಟನೆ’ ನೆರವೇರಿಸಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.

 ಕಾಲೇಜಿನ ಪ್ರಾಚಾರ್ಯರಾದ ಸುನೀಲ್ ಪಂಡಿತ್ ಇವರು ಎಸ್. ಡಿ. ಎಮ್. ಸಂಸ್ಥೆ ಮೌಲ್ಯಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ವರ್ಷಪೂರ್ತಿ ಮೌಲ್ಯಯುತ ಕಾರ್ಯಕ್ರಮಗಳನ್ನು ನಡೆಸಲಿದೆ ಇದರ ಪ್ರಯೋಜನ ಪಡೆದುಕೊಳ್ಳಿ ಹಾಗೂ ಬದುಕಲ್ಲಿ ಅಳವಡಿಸಿಕೊಳ್ಳಿ ಎಂದರು.

 ಕಾಲೇಜಿನ ನಿಲಯ ಪಾಲಕರು ಹಾಗೂ ದೈಹಿಕ ಶಿಕ್ಷಕರಾಗಿರುವ ಲಕ್ಷ್ಮಣ್ ಗೌಡ ಜಿ. ಉಪಸ್ಥಿತರಿದ್ದರು.

ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕರಾದ ಕೃಷ್ಣಪ್ರಸಾದ್ ನಿರೂಪಿಸಿ, ವಂದಿಸಿದರು.

Related posts

ಗುಟ್ಕಾ-ಪಾನ್‌ ಮಸಾಲಾ ನಿಷೇಧ ಆದೇಶ ಹಿಂಪಡೆದ ಸರ್ಕಾರ

Suddi Udaya

ಪೆರಿಯಡ್ಕ ಸ.ಕಿ. ಪ್ರಾ. ಶಾಲಾ ರಜತ ಮಹೋತ್ಸವ ಸಮಿತಿಯಿಂದ ಉಜಿರೆ ಲಕ್ಷ್ಮಿ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್ ರಿಗೆ ಸನ್ಮಾನ

Suddi Udaya

ಧರ್ಮಸ್ಥಳ; ಹದಗೆಟ್ಟ ‌ನೇರ್ತನೆ ರಸ್ತೆ; ಗ್ರಾಮಸ್ಥರಿಂದ ಶ್ರಮದಾನದ ಮೂಲಕ ದುರಸ್ತಿ

Suddi Udaya

ರೀಜೆಂಟ್ ಮಳಿಗೆ ಅಳದಂಗಡಿಯಿಂದ- ಗರ್ಡಾಡಿ ಹೊನ್ನಕಟ್ಟೆಗೆ ಸ್ಥಳಾಂತರಗೊಂಡು ಶುಭಾರಂಭ

Suddi Udaya

ಮೆಲ್ಕಾರು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಇದರ ಕೇಂದ್ರೀಯ ಸಮಿತಿಯ ಸಭೆ

Suddi Udaya

ಮಾಲಾಡಿ ಗ್ರಾಮ ಸಭೆ: ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ಗ್ರಾಮಸ್ಥರ ಒತ್ತಾಯ

Suddi Udaya
error: Content is protected !!