ಬೆಳ್ತಂಗಡಿ ಟೀಂ ಅಭಯಹಸ್ತ ಆಯೋಜನಾ ಸಮಿತಿಯಿಂದ ಸುಲ್ಕೇರಿಮೊಗ್ರು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ಹಾಗೂ ಕಲಿಕಾ ಸಾಮಾಗ್ರಿಗಳ ವಿತರಣೆ

Suddi Udaya

ಬೆಳ್ತಂಗಡಿ: ಸೇವೆ ಸಂಘಟನೆ ಸಾಮರಸ್ಯದ ಧ್ಯೇಯವಾಕ್ಯದೊಂದಿಗೆ, ಸೇವೆಗಾಗಿ ಕ್ರೀಡೆ ಎಂಬ ಪರಿಕಲ್ಪನೆಯಡಿ ಕಳೆದ ಆರು ವರ್ಷಗಳಿಂದ ಸಮಾಜಮುಖಿ ಕಾರ್ಯ ನಡೆಸುತ್ತಿರುವ ಟೀಂ ಅಭಯಹಸ್ತ ಆಯೋಜನಾ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಸುಲ್ಕೇರಿಮೊಗ್ರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ಹಾಗೂ ಕಲಿಕಾ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ ಜೂ.7 ರಂದು ಜರುಗಿತು.


ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಸಂಘಟನೆಯ ಸ್ಥಾಪಕ ಸಂದೀಪ್ ಎಸ್ ನೀರಲ್ಕೆ ಅರ್ವರವರು “ಸಂಘಟನೆ ಅನೇಕ ವರ್ಷಗಳಿಂದ ಅಶಕ್ತರ, ಅನಾರೋಗ್ಯ ಪೀಡಿತರ, ಸ್ವ ಉದ್ಯೋಗ ಆಸಕ್ತ ಬಡವರ, ವಿದ್ಯಾರ್ಥಿಗಳ ಧ್ವನಿಯಾಗಿ ಸೇವಾ ಕಾರ್ಯ ನಡೆಸುತ್ತಿದೆ. ಗುರುಹಿರಿಯರ, ಊರವರ ಪ್ರೋತ್ಸಾಹ, ಸಹಕಾರ, ಮಾರ್ಗದರ್ಶನದಿಂದ ಸಂಘಟನೆ ಉತ್ತಮ ರೀತಿಯಲ್ಲಿ ಸಾಗಿಬರುತ್ತಿದೆ” ಎಂದರು
ಕಾರ್ಯಕ್ರಮದಲ್ಲಿ ಸಂಘಟನೆಯ ಸಲಹೆಗಾರ ರವೀಂದ್ರ ಬಿ ಅಮೀನ್, ಎಸ್ ಡಿ ಎಂ ಸಿ ಅಧ್ಯಕ್ಷೆ, ಮುಖ್ಯೋಪಾಧ್ಯಾಯರಾದ ಸುಬ್ರಹ್ಮಣ್ಯ ಭಟ್, ಶಿಕ್ಷಕರಾದ ನಾಗಭೂಷಣ್, ಶ್ರೀಮತಿ ಶಾಂತಿ, ಸಹಶಿಕ್ಷಕರು, ಸಂಘಟನೆಯ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Comment

error: Content is protected !!