ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜ.14-18: ಅನಾರು ಶ್ರೀ ದುರ್ಗಾಪರಮೇಶ್ವರೀ ದೇವಿಯ ವರ್ಷಾವಧಿ ಜಾತ್ರಾ ಮಹೋತ್ಸವ

ಪಟ್ರಮೆ: ಅನಾರು ಶ್ರೀ ದುರ್ಗಾಪರಮೇಶ್ವರೀ ದೇವಿಯ ವರ್ಷಾವಧಿ ಜಾತ್ರಾ ಮಹೋತ್ಸವವು ಜ.14ರಿಂದ ಜ.18ರ ವರೆಗೆ ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿಗಳು ನೀಲೇಶ್ವರ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಕಾರ್ಯಕ್ರಮ: ಜ.14ರಂದು ಬೆಳಿಗ್ಗೆ ತೋರಣ ಮುಹೂರ್ತ, ಸಂಜೆ ಧ್ವಜಾರೋಹಣ ಸುತ್ತು ಬಲಿ, ಮಹಾಪೂಜೆ, ಜ.15 ರಂದು ಮಹಾಪೂಜೆ, ಸುತ್ತು ಬಲಿ, ಪೆರ್ಲೆಕಟ್ಟಿ ಪೂಜೆ, ನೃತ್ಯೋತ್ಸವ, ಮಂಗಳಾರತಿ, ಜ.16ರಂದು ಮಹಾಪೂಜೆ, ಸುತ್ತು ಬಲಿ, ಉಳಿಯಬೀಡಿನ ಕಟ್ಟೆ ಪೂಜೆ, ನೃತ್ಯೋತ್ಸವ, ಮಂಗಳಾರತಿ, ಜ.17ರಂದು ಬೆಳಿಗ್ಗೆ ಉಳಿಯಬೀಡಿನಿಂದ ಉಳ್ಳಾಲ್ತಿ ನಾಡದೈವಗಳ ಭಂಡಾರ ಬರುವುದು. ಬೆಳಿಗ್ಗೆ ಮಹಾಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಸುತ್ತುಬಲಿ, ಕೆಮನೋಡಿ ಕೆಟ್ಟಿ ಪೂಜೆ, ನೃತ್ಯೋತ್ಸವ, ಕವಾಟ ಬಂಧನ, ದೇವರ ಶಯನ, ಜ.18ರಂದು ಬೆಳಿಗ್ಗೆ ಗಣಹೋಮ, ಶುಭ ಮುಹೂರ್ತದಲ್ಲಿ ಕವಟೋದ್ಘಾಟನೆ, ತೈಲಾಭಿಷೇಕ, ಪಂಚಾಮೃತ ಅಭಿಷೇಕ, ನವಕ ಕಲಶಾಭಿಷೇಕ, ದೇವರ ಅವಕೃತ, ಬಟ್ಟಲು ಕಾಣಿಕೆ, ಧ್ವಜಾವರೋಹಣ, ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಉಳ್ಳಾಳ್ತಿ ನಾಡದೈವಗಳ ನೇಮೋತ್ಸವ, ನಡೆಯಲಿದೆ.

ಜ.14 ರಂದು ಅನುವಂಶಿಕ ಆಡಳಿತ ಮೊಕ್ತೇಸರ ನಿತೇಶ್ ಬಲ್ಲಾಳ್, ಉಳಿಯಬೀಡು ರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶ್ರೀ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ ಮೋಹನ್ ಕುಮಾರ್ ಭಾಗವಹಿಸಲಿದ್ದಾರೆ. ರಾತ್ರಿ ಪಟ್ರಮೆ ಅನಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಮತ್ತು ಸುರ್ಯತ್ತಾವು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಜ.15ರಂದು ಊರ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಜ.16ರಂದು ರಾತ್ರಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ “ಗದಾಯುದ್ಧ” ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

Related posts

ಬಾರ್ಯ: ಮೂರುಗೋಲಿ ಪಾಂಡುರಂಗ ಭಜನಾ ಮಂದಿರ ನೂತನ ಕಟ್ಟಡದ ಶಿಲಾನ್ಯಾಸ

Suddi Udaya

ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಶಾಂತ್ ಪ್ರತಿನಿಧಿಸಿದ ತಂಡ ರಾಷ್ಟ್ರಮಟ್ಟದಲ್ಲಿ ಪ್ರಥಮ

Suddi Udaya

ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ:ಪತ್ರಕರ್ತರ ಸಂಘದ ನೂತನ ಕಟ್ಟಡ ಹಾಗೂ ನಿವೇಶನಕ್ಕೆ ರೂ.20 ಲಕ್ಷ ಅನುದಾನ: ಹರೀಶ್ ಪೂಂಜ

Suddi Udaya

2024-25ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ

Suddi Udaya

ಧರ್ಮಸ್ಥಳ ಬಂಗ್ಲೆಗುಡ್ಡೆಯಲ್ಲಿ ದೊರೆತ ಅಸ್ಥಿಪಂಜರ ಪ್ರಕರಣ; ಮೂರು ಅಸ್ಥಿಪಂಜರದ ಡಿಎನ್ಎ ಮೂಲಕ ಗುರುತು ದೃಢ

Suddi Udaya

ಅಭ್ಯಾಸ್ ಮತ್ತು ಪೈ ಅಕಾಡೆಮಿಯಿಂದ ಎಸ್.ಎಸ್.ಎಲ್.ಸಿ ವಿದ್ಯಾಥಿಗಳಿಗೆ ಪರೀಕ್ಷಾ ಪೂರ್ವಸಿದ್ಧತಾ ತರಬೇತಿ ಕಾರ್ಯಾಗಾರ

Suddi Udaya
error: Content is protected !!