23.3 C
ಪುತ್ತೂರು, ಬೆಳ್ತಂಗಡಿ
March 7, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಧರ್ಮಸ್ಥಳ : ಶ್ರೀ ಧ.  ಮಂ.  ಆಂಗ್ಲ ಮಾಧ್ಯಮ ಶಾಲೆಯಲ್ಲಿ  ನಾಯಕತ್ವ ತರಬೇತಿ ಕಾರ್ಯಾಗಾರ

ಧರ್ಮಸ್ಥಳ: ಧರ್ಮಸ್ಥಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಾಯಕತ್ವ ತರಭೇತಿ ಕಾರ್ಯಾಗಾರವನ್ನು ಜೂ 9 ರಂದು ಹಮ್ಮಿಕೊಳ್ಳಲಾಯಿತು . 

ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಪ್ರಾದೇಶಿಕ ಅಧಿಕಾರಿ  ಶ್ರೀಹರಿ ಶಗ್ರಿತ್ತಾಯ ಆಗಮಿಸಿ, ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು  ಮನೆಯಲ್ಲಿಯೇ ಮೈಗೂಡಿಸಿಕೊಳ್ಳಲು ಸಾಧ್ಯ. ಆಗ ಸಮಾಜವನ್ನು ಅರಿಯಲು ಸಾಧ್ಯವಾಗುತ್ತದೆ.ನಾಯಕನಾಗಿರಲು ಅನೇಕ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.  ನಾಯಕತ್ವ ಹೇಗಿರಬೇಕು, ಅವನ ಗುಣಗಳು ಹೇಗಿರಬೇಕು, ವಿವಿಧ ರೀತಿಯ ನಾಯಕರುಗಳು, ನಾಯಕನ ಜವಾಬ್ದಾರಿ ಏನು ,ಎಂಬುದನ್ನು  ಅವರು ಉದಾಹರಣೆ, ಕಗ್ಗದ ವಚನಗಳ ಮೂಲಕ ವಿದ್ಯಾರ್ಥಿಗಳ ಮನಮುಟ್ಟುವಂತೆ ತಿಳಿಸಿದರು. 
        ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶಾಲೆಯಲ್ಲಿ ಮಂತ್ರಿಮಂಡಲದ ಅಗತ್ಯ ಮತ್ತು ನಾಯಕನ ಮಹತ್ವ ವಿವರಿಸಿ ಎಲ್ಲರನ್ನೂ ಸ್ವಾಗತಿಸಿದರು.
ಕುಮಾರಿ ಆದ್ಯ  ಕಾರ್ಯಕ್ರಮ ನಿರೂಪಿಸಿ, ನಿಧೀಕ್ಷಾ ಅತಿಥಿಗಳನ್ನು ಪರಿಚಯಿಸಿ, ವೀಕ್ಷಾ ವಂದಿಸಿದರು. ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related posts

ಗುರುವಾಯನಕೆರೆ ನವಶಕ್ತಿ ಮನೆಗೆ ವಿಧಾನಪರಿಷತ್ ಅಭ್ಯರ್ಥಿ ಕಿಶೋರ್ ಕುಮಾರ್ ಭೇಟಿ

Suddi Udaya

ಜೆಸಿಂತಾ ಡಿ ಸೋಜ ಅವರಿಗೆ ಉದ್ಯೋಗ ರತ್ನ ಪ್ರಶಸ್ತಿ: ಜೆಸಿಐ ಕೊಕ್ಕಡ ಕಪಿಲಾ ಘಟಕಕ್ಕೆ ಪ್ರಶಸ್ತಿಗಳ ಗರಿ

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಇದರ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘ ಹಾಗೂ ಶ್ರೀ ಕ್ಷೇ.ಧ.ಗ್ರಾ. ಯೋಜನೆಯಿಂದ ಜೇನು ಕೃಷಿ ಮತ್ತು ಅಣಬೆ ಬೇಸಾಯದ ತಾಂತ್ರಿಕ ತರಬೇತಿ ಕಾರ್ಯಾಗಾರ

Suddi Udaya

ಭಾರತೀಯ ಸೇನೆಯಲ್ಲಿ ಸುಮಾರು 29 ವರ್ಷಗಳ ಕಾಲ ದೇಶದ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಸೈನಿಕ ಕುಕ್ಕೇಡಿಯ ಚಂದ್ರಹಾಸ ಪೂಜಾರಿ ನಿಧನ: ತಿಂಗಳ ಅಂತರದಲ್ಲಿ ‌ ಪತಿ -ಪತ್ನಿ ಸಾವು

Suddi Udaya

ಇಂದಬೆಟ್ಟು ಎಂಜೆಎಂ ಮಸೀದಿಯಲ್ಲಿ ಈದ್ ಆಚರಣೆ

Suddi Udaya
error: Content is protected !!