28.6 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹಿಂಭಾಗದಲ್ಲಿ ಕ್ಷೇತ್ರದ ವತಿಯಿಂದ ರಸ್ತೆಗೆ ಅಳವಡಿಸಿದ ಗೇಟು ತೆರವು

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹಿಂಭಾಗದಲ್ಲಿ ಕ್ಷೇತ್ರದ ರಕ್ಷಣೆಗಾಗಿ ವ್ಯವಸ್ಥಾಪನಾ ಸಮಿತಿಯವರು ಕಳೆದ ಒಂದು ವರ್ಷದ ಹಿಂದೆ ಹಾಕಿದ್ದ ಗೇಟನ್ನು ಸಾರ್ವಜನಿಕ ದೂರಿನ ಹಿನ್ನಲೆಯಲ್ಲಿ ದ.ಕ ಜಿಲ್ಲಾಧಿಕಾರಿಗಳ ಸೂಚನೆಯಂತೆ ತಹಶೀಲ್ದಾರರ ಉಪಸ್ಥಿತಿಯಲ್ಲಿ ಜೂ.13ರಂದು ತೆರವುಗೊಳಿಸಲಾಯಿತು.


ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆ 2015 ರಲ್ಲಿ ದೇವಸ್ಥಾನಗಳಿಗೆ ಭದ್ರತೆ ಒದಗಿಸುವಂತೆ ಸುತ್ತೋಲೆ ಹೊರಡಿಸಿತ್ತು.ಈ ಆದೇಶದ ಹಿನ್ನಲೆಯಲ್ಲಿ ಸರಕಾರದಿಂದ ಎಲ್ಲಾ ರೀತಿಯ ಮಾಹಿತಿಯನ್ನು ಪಡೆದು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಬಯಲು ಆಲಯವಾಗಿರುವುದರಿಂದ ದೇವಸ್ಥಾನದಲ್ಲಿ ಹೊರಗೆ ಇರುವ ಗಂಟೆ ಸೇರಿದಂತೆ ಲಕ್ಷಾಂತರ ಬೆಲೆಬಾಳುವ ಸೊತ್ತುಗಳ ರಕ್ಷಣೆ, ಹುಂಡಿಯ ರಕ್ಷಣೆ ಸೇರಿದಂತೆ ದೇವಸ್ಥಾನದ ಸಮಗ್ರ ಹಿತದೃಷ್ಟಿಯಿಂದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು ಚಿಂತನೆ ನಡೆಸಿ ದೇವಸ್ಥಾನದ ಹಿಂಭಾಗದಲ್ಲಿ ಕೊಕ್ಕಡ ಗ್ರಾಮದ ಸ.ನಂ 167/1ರಲ್ಲಿ ಅನ್ನಛತ್ರದ ಬಳಿ ರಸ್ತೆಗೆ ಕಳೆದ ವರ್ಷ ಎ.24ರಂದು ಗೇಟು ಹಾಕಿ ಭದ್ರತೆ ಮಾಡಿದ್ದರು. ದೇವಸ್ಥಾನದ ಎದುರು ಭಾಗದಿಂದ ರಸ್ತೆ ಇರುವುದರಿಂದ ಸಮಿತಿ ಈ ತೀರ್ಮಾನವನ್ನು ತೆಗೆದುಕೊಂಡಿತ್ತು.


ಆದರೆ ರಸ್ತೆಗೆ ದೇವಸ್ಥಾನದ ವತಿಯಿಂದ ಗೇಟು ಅಳವಡಿಸಿರುವುದನ್ನು ಶ್ರೀ ಕೃಷ್ಣ ಭಟ್ ಸೇರಿದಂತೆ ಇತರರು ಆಕ್ಷೇಪ ವ್ಯಕ್ತಪಡಿಸಿ, ದ.ಕ ಜಿಲ್ಲಾಧಿಕಾರಿಗಳು ಮತ್ತು ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿ ಮಾಡಿ, ಗೇಟು ಹಾಕಿರುವುದರಿಂದ ಸಾರ್ವಜನಿಕರಿಗೆ ಆಗಿರುವ ಸಮಸ್ಯೆ ಬಗ್ಗೆ ತಿಳಿಸಿದ್ದರು.
ಅರ್ಜಿಯ ಪರಿಶೀಲನೆ ನಡೆಸಿದ ದ.ಕ ಜಿಲ್ಲಾಧಿಕಾರಿಗಳು ಸರಕಾರಿ ಸ್ಥಳದ ಮೂಲಕ ಸುಮಾರು 50 ವರ್ಷಗಳಿಂದ ಇದ್ದ ರಸ್ತೆಗೆ ಹಾಕಿದ ಗೇಟನ್ನು ಪರಿಶೀಲಿಸಿ, ತೆರವುಗೊಳಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡುವಂತೆ ತಹಶೀಲ್ದಾರ್‌ರಿಗೆ ಸೂಚನೆ ನೀಡಿದ್ದರು.
ಜಿಲ್ಲಾಧಿಕಾರಿಗಳ ಸೂಚನೆಯಂತೆ ತಹಶೀಲ್ದಾರ್ ಸುರೇಶ್ ಕುಮಾರ್, ಕಂದಾಯ ನಿರೀಕ್ಷಕ ಪವಾಡಪ್ಪ ದೊಡ್ಡಮನಿ ಹಾಗೂ ಗ್ರಾಮ ಕರಣಿಕರು ಉಪಸ್ಥಿತಿಯಲ್ಲಿ ರಸ್ತೆಗೆ ಹಾಕಲಾಗಿದ್ದ ಗೇಟನ್ನು ತೆರವುಗೊಳಿಸಿ, ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

Related posts

ಬೆಳ್ತಂಗಡಿ ಶ್ರೀ ಕ್ಷೇ.ಧ.ಗ್ರಾ.ಯೋಜನೆಯಿಂದ ಮುಂಡತ್ತೊಡಿ ಹಿ.ಪ್ರಾ. ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ವಾಣಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಮೋಹನ್ ಗೌಡ, ಉಪಾಧ್ಯಕ್ಷರಾಗಿ ಶ್ರೀಮತಿ ಲತಾ ಶೆಟ್ಟಿ ಆಯ್ಕೆ

Suddi Udaya

ಎಕ್ಸೆಲ್ ನಲ್ಲಿ ಪ್ರತಿಭಾವಂತರಿಗೆ ಸಂಪೂರ್ಣ ಉಚಿತ ನೀಟ್ ಕೋಚಿಂಗ್

Suddi Udaya

ಅರಸಿನಮಕ್ಕಿ ಗ್ರಾ. ಪಂ. ನೇತೃತ್ವದಲ್ಲಿ ಶ್ರಮದಾನದ ಮೂಲಕ ರಸ್ತೆಯ ಬದಿ ಸ್ವಚ್ಛತೆ

Suddi Udaya

ಉಜಿರೆ : ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ಸಂಸ್ಕೃತ ಸಂಘ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇವುಗಳ ವಾರ್ಷಿಕ ಕಾರ್ಯಚುಟುವಟಿಕೆಗಳ ಸಮಾರೋಪ

Suddi Udaya

ಬೆಳ್ತಂಗಡಿ: ಶ್ರೀ ದುರ್ಗಾ ಬೆಂಗಳೂರು ಅಯ್ಯಂಗಾರ್ ಬೇಕರಿ ಶುಭಾರಂಭ

Suddi Udaya
error: Content is protected !!