ಉಜಿರೆ: ಶ್ರೀ ಧ. ಮಂ. ಆಂ. ಮಾ. ಶಾಲೆಯಲ್ಲಿ ಯೋಗ ಉದ್ಘಾಟನಾ ಕಾರ್ಯಕ್ರಮ

Suddi Udaya

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಇಂದು ಯೋಗ ಉದ್ಘಾಟನಾ ಕಾರ್ಯಕ್ರಮನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪತಿ ಸಂಸ್ಥೆಯ ಉಪ ಪ್ರಾಂಶುಪಾಲರಾದ ಶಿವಪ್ರಸಾದ್ ಶೆಟ್ಟಿ ಅವರು ದೀಪ ಬೆಳಗಿಸುವುದರ ಮೂಲಕ ನಡೆಸಿಕೊಟ್ಟು ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಯಪಡಿಸಿದರು.

ಯೋಗ ಮಾಡಿ ಸುಯೋಗಿಗಳಾಗಬಹುದು. ಯೋಗವು ಮಾನವನ ದೇಹದ ದೈಹಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಸ್ಥಿತಿಯನ್ನು ಉನ್ನತ ಹಂತಕೆ ಕೊಂಡೊಯ್ಯುತ್ತದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ವಿದ್ಯಾಲಕ್ಷ್ಮಿ, ಯೋಗ ತರಬೇತುಗಾರರಾದ ಮಾನ್ಯ ಆತ್ಮಿಕ ಮತ್ತು ಸಚಿ ಹಾಗೂ ಶಾಲಾ ಯೋಗ ತರಬೇತಿ ವಿದ್ಯಾರ್ಥಿಗಳೆಲ್ಲಾ ಭಾಗವಹಿಸಿದ್ದರು.

10ನೇ ತರಗತಿಯ ವಿದ್ಯಾರ್ಥಿನಿಯಾದ ಶರದಿ ಸ್ವಾಗತಿಸಿ, ಪೂಜಾ ವಂದನಾರ್ಪಣೆಯನ್ನು ಮಾಡಿದರು.

ಈ ಕಾರ್ಯಕ್ರಮದ ಸಂಯೋಜನೆಯನ್ನು ಶಾಲಾ ದೈಹಿಕಶಿಕ್ಷಕರಾದ ಸುಭಾಷ್ ಮಾಡಿದರು.

Leave a Comment

error: Content is protected !!