September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ: ಎಸ್ ಡಿಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಸಭೆ

ಉಜಿರೆ : “ಮಕ್ಕಳ ಸಮಸ್ಯೆಗಳ ಅರಿವಿರುವುದು ಪೋಷಕರಿಗೆ ಮುಖ್ಯ ಹಾಗೆಯೇ ವಯಸ್ಸಿಗೆ ತಕ್ಕಂತೆ ಪೋಷಕರಾದವರು ಮಕ್ಕಳನ್ನು ಅರ್ಥೈಸಿಕೊಂಡು ಸಿದ್ಧಾಂತಗಳೊಂದಿಗೆ ಮಗುವನ್ನು ಬೆಳೆಸುವುದು ಅಗತ್ಯ” ಎಂದು ಎಸ್. ಡಿ. ಎಮ್ ಸ್ನಾತಕೋತ್ತರ ಪದವಿ ಎಮ್.ಎಸ್.ಡಬ್ಲ್ಯೂ ವಿಭಾಗದ ಉಪನ್ಯಾಸಕಿ ಡಾ. ಧನೇಶ್ವರಿ ಇವರು ಹೇಳಿದರು.

ಇವರು ಎಸ್. ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ. ಬಿ. ಎಸ್. ಇ), ಉಜಿರೆಯಲ್ಲಿ ಜೂ.14 ರಂದು ನಡೆದ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ “ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ” ಎಂಬ ವಿಷಯದ ಕುರಿತು ಮಾತನಾಡಿದರು.

ಶಾಲಾ ಶಿಕ್ಷಕಿ ಶಾಂಟಿ ಜಾರ್ಜ್ ಇವರು ಶಾಲಾ ವಾರ್ಷಿಕ ವರದಿ ವಾಚನ ಮಾಡಿದರು. ವಿಷಯವಾರು ಶಿಕ್ಷಕರು ತಮ್ಮ ಪರಿಚಯದೊಂದಿಗೆ ತಾವು ಬೋಧಿಸುವ ವಿಷಯದ ಕುರಿತು ಪೋಷಕರಿಗೆ ತಿಳಿಸಿದರು.

ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಮನ್ಮೋಹನ್ ನಾಯಕ್ ಇವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರು ಸ್ವಾಗತಿಸಿ, ಶಿಕ್ಷಕಿ ಸವಿತ ವೇದಪ್ರಕಾಶ್ ನಿರೂಪಣೆ ಮತ್ತು ವಂದಿಸಿದರು.

Related posts

ಬೆಳ್ತಂಗಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವದ ಸಂಭ್ರಮ

Suddi Udaya

ಗುರುವಾಯನಕೆರೆ: ಸುಧಾಕರ ನಾಯಕ್ ನಿಧನ

Suddi Udaya

ಸೇಕ್ರೆಡ್ ಹಾರ್ಟ್ ಪ. ಪೂ ಕಾಲೇಜಿನ ಅನೀಶ್ ಎನ್.ಸಿಸಿ ರಾಷ್ಟ್ರೀಯ ಏಕತಾ ಶಿಬಿರಕ್ಕೆ ಆಯ್ಕೆ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ, ಧಾರ್ಮಿಕ ಸಭೆ

Suddi Udaya

ವಿ.ಆರ್.ಡಿ.ಎಫ್ ಜಾಲ್ಸುರು ಸಮಿತಿ ಸದಸ್ಯರ ಕೃಷಿ ಅಧ್ಯಯನ ಪ್ರವಾಸ: ಬೆಳ್ತಂಗಡಿಯ ಕಡಮ್ಮಾಜೆ ಫಾರ್ಮ್ ಗೆ ಭೇಟಿ

Suddi Udaya

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ವತಿಯಿ೦ದ ರಾಜ್ಯ ಮಹಿಳಾಗೋಷ್ಠಿ

Suddi Udaya
error: Content is protected !!