July 24, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಗುರುವಾಯನಕೆರೆ: ಎಕ್ಸೆಲ್ ಕಾಲೇಜು ವತಿಯಿಂದ ನೀಟ್ ಸಾಧಕ ಆದಿತ್ ಜೈನ್ ಗೆ ಸನ್ಮಾನ

ಗುರುವಾಯನಕೆರೆ: ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆಯಾದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ 692 ಅಂಕಗಳೊಂದಿಗೆ ರಾಜ್ಯದಲ್ಲೇ ಅಪೂರ್ವ ಸಾಧಕನಾಗಿ ಗುರುತಿಸಿಕೊಂಡ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಆದಿತ್ ಜೈನ್ ಅವರನ್ನು ಕರಾಯದ ಬಳಿಯ ಅವರ ನಿವಾಸ ಬಾವಂತ ಬೆಟ್ಟಿನಲ್ಲಿ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.

ವೈದ್ಯಕೀಯ ಶಿಕ್ಷಣಕ್ಕೆ ತೆರಳುವ ಆದಿತ್ ಗೆ ಭಾರತೀಯ ವೈದ್ಯ ಜಗತ್ತಿನ ಅಧಿದೈವ ಧನ್ವಂತರಿ ದೇವರ ಪಂಚ ಲೋಹದ ವಿಗ್ರಹದ ಜೊತೆಗೆ, ಸ್ಟೆತಸ್ಕೋಪ್ , ವೈಟ್ ಕೋಟ್ ಸಹಿತ ಗೌರವಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಎಕ್ಸೆಲ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆ, ಆಡಳಿತಾಧಿಕಾರಿ ಪುರುಷೋತ್ತಮ್, ನೀಟ್ ಸಂಯೋಜಕ ಶ್ರೀನಿಧಿ ಶೆಟ್ಟಿ, ಗಣಕ ವಿಜ್ಞಾನ ವಿಭಾಗ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅಲ್ಲಿಬಾಯ್, ಆದಿತ್ ಅವರ ಅಜ್ಜ ನಿರಂಜನ ಜೈನ್ ಬಾವಂತ ಬೆಟ್ಟು, ತಾಯಿ ಪವಿತ್ರ ಜೈನ್, ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Related posts

ಊರ ಸುಶೀಲ ಪೂಜಾರ್ತಿ ಇವರ ಮೂರನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಸೇವಾ ಯೋಜನೆ ಹಸ್ತಾಂತರ

Suddi Udaya

ಕುವೆಟ್ಟು ಕೋಡಿಮನೆ ನಿವಾಸಿ ಕಲ್ಯಾಣಿ ನಿಧನ

Suddi Udaya

ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಶ್ರೀರಾಮೋತ್ಸವ ಸಂಭ್ರಮ

Suddi Udaya

ಕಳಿಯ ಕುದುರೆ ಕಲ್ಲು ಅಕೇಶಿಯ ಮೀಸಲು ನೆಡುತೋಪು ಪ್ರದೇಶದ ರಸ್ತೆಯಲ್ಲಿ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು : ನಾಗರಿಕರಲ್ಲಿ ಸೃಷ್ಟಿಯಾದ ಆತಂಕ

Suddi Udaya

ವೇಣೂರು ಯುವ ಸೇವಾ ಸಂಗಮ ಸೇವಾ ಟ್ರಸ್ಟ್ ನ ಆಮಂತ್ರಣ ಬಿಡುಗಡೆ

Suddi Udaya

ಬಂಗ್ಲೆಗುಡ್ಡೆಯಲ್ಲಿ ಸಿಕ್ಕ ಏಳು ಅಸ್ಥಿಪಂಜರ ಎಫ್ಎಸ್ಎಲ್ ಗೆ ರವಾನೆ

Suddi Udaya
error: Content is protected !!