ಉಜಿರೆ: ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಬೆಳಗಾವಿ (VTU) ಮೇ 2023 ರಲ್ಲಿ ನಡೆಸಿದ ಅಂತಿಮ ಸೆಮಿಸ್ಟರ್ ಪರೀಕ್ಷೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜು ಉಜಿರೆಯ (SDMIT) ಎಲ್ಲಾ ಆರು ವಿಭಾಗಗಳಲ್ಲೂ ಶೇಕಡಾ 100 ಫಲಿತಾಂಶ ದೊರಕಿದ್ದು, ಶೇಕಡಾ 97 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಈ ಶೈಕ್ಷಣಿಕ ವರ್ಷದಲ್ಲಿ ಕ್ಯಾಂಪಸ್ ನೇಮಕಾತಿ ಅತ್ಯುತ್ತಮವಾಗಿ ನಡೆದಿದ್ದು ಈಗಾಗಲೇ ಸುಮಾರು 130 ಕ್ಕೂ ಅಧಿಕ ಪ್ರತಿಷ್ಠಿತ ಕಂಪೆನಿಗಳು ವಿದ್ಯಾರ್ಥಿಗಳಿಗೆ ಸಂದರ್ಶನದ ಅವಕಾಶ ನೀಡಿರುತ್ತದೆ, ಅರ್ಹ ವಿದ್ಯಾರ್ಥಿಗಳಲ್ಲಿ ಶೇಕಡಾ 77 ಕ್ಕೂ ಅಧಿಕ ಕ್ಯಾಂಪಸ್ ನೇಮಕಾತಿ ಆಗಿರುತ್ತದೆ. ಇನ್ಫೋರ್ಮೇಶನ್ ಸಯನ್ಸ್ ಮತ್ತು ಮೆಕಾನಿಕಲ್ ವಿಭಾಗದಲ್ಲಿ ಎಲ್ಲ (ಶೇಕಡಾ 100) ಅರ್ಹ ವಿದ್ಯಾರ್ಥಿಗಳೂ ನೇಮಕಾತಿ ಹೊಂದಿದ್ದಾರೆ.
ಕಾಲೇಜಿನ ಪ್ರಸ್ತುತ ಶೈಕ್ಷಣಿಕ ಸಾಲಿನ ಆಡಳಿತ ಮಂಡಳಿ ಕೋಟಾದ ಪ್ರವೇಶ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು ಅತ್ಯತ್ತಮ ಉತ್ತಮ ಸ್ಪಂದನೆ ದೊರಕಿದೆ. ವಿದ್ಯಾರ್ಥಿಗಳ ಈ ಉತ್ತಮ ಸಾಧನೆಯನ್ನು ಅಧ್ಯಕ್ಷರಾದ ಡಾ. ವೀರೇಂದ್ರ ಹೆಗ್ಗಡೆಯವರು, ಕಾರ್ಯದರ್ಶಿಗಳಾದ ಹರ್ಷೇಂದ್ರ ಕುಮಾರ್ ಮತ್ತು ಡಾ. ಸತೀಶ್ ಚಂದ್ರ, ಪ್ರಾಂಶುಪಾಲರು ಮತ್ತು ಪ್ರಾದ್ಯಾಪಕ ವರ್ಗ ಅಭಿನಂದಿಸಿದ್ದಾರೆ.