September 6, 2026
ಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್‌ ಕಾಲೇಜಿಗೆ ಶೇ. 100 ಫಲಿತಾಂಶ

ಉಜಿರೆ: ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಬೆಳಗಾವಿ (VTU) ಮೇ 2023 ರಲ್ಲಿ ನಡೆಸಿದ ಅಂತಿಮ ಸೆಮಿಸ್ಟರ್ ಪರೀಕ್ಷೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್‌ ಕಾಲೇಜು ಉಜಿರೆಯ (SDMIT) ಎಲ್ಲಾ ಆರು ವಿಭಾಗಗಳಲ್ಲೂ ಶೇಕಡಾ 100 ಫಲಿತಾಂಶ ದೊರಕಿದ್ದು, ಶೇಕಡಾ 97 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಈ ಶೈಕ್ಷಣಿಕ ವರ್ಷದಲ್ಲಿ ಕ್ಯಾಂಪಸ್ ನೇಮಕಾತಿ ಅತ್ಯುತ್ತಮವಾಗಿ ನಡೆದಿದ್ದು ಈಗಾಗಲೇ ಸುಮಾರು 130 ಕ್ಕೂ ಅಧಿಕ ಪ್ರತಿಷ್ಠಿತ ಕಂಪೆನಿಗಳು ವಿದ್ಯಾರ್ಥಿಗಳಿಗೆ ಸಂದರ್ಶನದ ಅವಕಾಶ ನೀಡಿರುತ್ತದೆ, ಅರ್ಹ ವಿದ್ಯಾರ್ಥಿಗಳಲ್ಲಿ ಶೇಕಡಾ 77 ಕ್ಕೂ ಅಧಿಕ ಕ್ಯಾಂಪಸ್‌ ನೇಮಕಾತಿ ಆಗಿರುತ್ತದೆ. ಇನ್ಫೋರ್ಮೇಶನ್‌ ಸಯನ್ಸ್ ಮತ್ತು ಮೆಕಾನಿಕಲ್ ವಿಭಾಗದಲ್ಲಿ ಎಲ್ಲ (ಶೇಕಡಾ 100) ಅರ್ಹ ವಿದ್ಯಾರ್ಥಿಗಳೂ ನೇಮಕಾತಿ ಹೊಂದಿದ್ದಾರೆ.

ಕಾಲೇಜಿನ ಪ್ರಸ್ತುತ ಶೈಕ್ಷಣಿಕ ಸಾಲಿನ ಆಡಳಿತ ಮಂಡಳಿ ಕೋಟಾದ ಪ್ರವೇಶ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು ಅತ್ಯತ್ತಮ ಉತ್ತಮ ಸ್ಪಂದನೆ ದೊರಕಿದೆ. ವಿದ್ಯಾರ್ಥಿಗಳ ಈ ಉತ್ತಮ ಸಾಧನೆಯನ್ನು ಅಧ್ಯಕ್ಷರಾದ ಡಾ. ವೀರೇಂದ್ರ ಹೆಗ್ಗಡೆಯವರು, ಕಾರ್ಯದರ್ಶಿಗಳಾದ ಹರ್ಷೇಂದ್ರ ಕುಮಾರ್ ಮತ್ತು ಡಾ. ಸತೀಶ್ ಚಂದ್ರ, ಪ್ರಾಂಶುಪಾಲರು ಮತ್ತು ಪ್ರಾದ್ಯಾಪಕ ವರ್ಗ ಅಭಿನಂದಿಸಿದ್ದಾರೆ.

Related posts

ಸುಲ್ಕೇರಿಮೊಗ್ರು ಸ. ಹಿ. ಪ್ರಾ. ಶಾಲಾ ಶೌಚಾಲಯ ಕುಸಿತ

Suddi Udaya

ಬಜಿರೆ ಪಿ.ಎಂ. ಶ್ರೀ ಸ. ಉ. ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ನಿಡ್ಲೆ 18ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ರಚನೆ: ಅಧ್ಯಕ್ಷರಾಗಿ ತಿಮ್ಮಪ್ಪ ಗೌಡ ನೂಜಿಲ

Suddi Udaya

ಆರಂಬೋಡಿ: ಪಾಲ್ಯ ನಿವಾಸಿ ಓಡಿ ಕೊರಗ ನಿಧನ

Suddi Udaya

ಭೀಮ ಗೋಲ್ಡ್ CSR ಸಹಕಾರದಿಂದ ಬೈಂದೂರು ಸೇವಾಧಾಮದಲ್ಲಿ ನೀರಿನ ಘಟಕದ ಉದ್ಘಾಟನೆ

Suddi Udaya

ಅಳದಂಗಡಿ ದೈಲ ಮರಿಯಣ್ ಡಿಸೋಜ ನಿವಾಸಕ್ಕೆ ಸ್ಪೀಕರ್ ಯು ಟಿ ಖಾದರ್ ಭೇಟಿ

Suddi Udaya
error: Content is protected !!