31.8 C
ಪುತ್ತೂರು, ಬೆಳ್ತಂಗಡಿ
May 18, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿ

ಬಂದಾರು: ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿ ರಿಕ್ಷಾ ಚಾಲಕ ಸಹಿತ ಇಬ್ಬರ ಬಂಧನ

ಬಂದಾರು : ಬಂದಾರು ಗ್ರಾಮದ ನೇರೋಳ್ದಪಲ್ಕೆ ಎಂಬಲ್ಲಿ ಬಾಲಕಿಯೋರ್ವಳನ್ನು ರಿಕ್ಷಾದಲ್ಲಿ ಕರೆದೊಯ್ದು ಮಾನಭಂಗಕ್ಕೆ ಯತ್ನ ನಡೆಸಿದ ಆರೋಪದಲ್ಲಿ ರಿಕ್ಷಾ ಚಾಲಕ ಮತ್ತು ಇನ್ನೋರ್ವನ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬಂದಾರು ಗ್ರಾಮದ ನೇರೋಳ್ದಪಲ್ಕೆ ಎಂಬಲ್ಲಿನ ನಿವಾಸಿ ಕರೀಂ ಮತ್ತು
ರಿಕ್ಷಾ ಚಾಲಕ ಸಾದಿಕ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಅವರಿಗೆ ೧೫ ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
೧೭ ವರ್ಷದ ಬಾಲಕಿ ಜೂ. ೧೮ ರಂದು ತಾಯಿಯ ಪರವಾಗಿ ಸ್ವ ಸಹಾಯ ಸಂಘದ ಹಣ ಕಟ್ಟಲು ನಡೆದುಕೊಂಡು ಹೋಗುತ್ತಿದ್ದಾಗ ಕುಂಟಾಲಪಲ್ಕೆ ನೇರೋಳ್ದಪಲ್ಕೆ ಎಂಬಲ್ಲಿ ರಿಕ್ಷಾ ಚಾಲಕ ಸಾದಿಕ್ ಮತ್ತು ಪರಿಚಿತ ವ್ಯಕ್ತಿ ಕರೀಂ, ಬಾಲಕಿಯನ್ನು ದುರುಪಯೋಗಪಡಿಸಲು ಯತ್ನ ನಡೆಸಿದ್ದರು. ಅದಕ್ಕೂ ಮುನ್ನ ಬಾಲಕಿಗೆ ಕರೀಂ, ೨೦೦ ರೂ. ನೀಡಿ ರಿಕ್ಷಾದಲ್ಲಿ ಬೆಳ್ತಂಗಡಿಗೆ ಬರುವಂತೆ ಕರೆದಿದ್ದು, ಅದಕ್ಕೆ ಆಕೆ ನಿರಾಕರಿಸಿದ ವೇಳೆ ಕರೀಂ ಆಕೆಯ ದೇಹದ ಭಾಗಕ್ಕೆ ಕೈ ಹಾಕಿದ್ದು, ಆಕೆ ಆಟೋ ರಿಕ್ಷಾದಿಂದ ಜಿಗಿದು ಅವರಿಂದ ತಪ್ಪಿಸಿಕೊಂಡಿದ್ದಳು. ಈ ವೇಳೆ ಆಕೆಯ ಕಾಲು ಮತ್ತು ಕೈಗೆ ಗಾಯವಾಗಿದೆ. ಈ ವೇಳೆ ಆರೋಪಿಗಳು ರಿಕ್ಷಾ ನಿಲ್ಲಿಸದೆ ಪರಾರಿಯಾಗಿದ್ದರು. ಬಾಲಕಿ ಧರ್ಮಸ್ಥಳ ಠಾಣೆಗೆ ನೀಡಿದ ದೂರಿನಂತೆ ಆರೋಪಿಗಳನ್ನು ಬಂಧಿಸಲಾಗಿದೆ.

Related posts

ವೇಣೂರು: ಕಲ್ಲು ಬಸದಿ ನಿವಾಸಿ ವಾಗೀಶ್ವರಿ ಇಂದ್ರ ನಿಧನ

Suddi Udaya

ಧರ್ಮಸ್ಥಳ: 26ನೇ ವರ್ಷದ ಭಜನಾ ಕಮ್ಮಟದ 4ನೇ ದಿನದ ಕಾರ್ಯಕ್ರಮ

Suddi Udaya

ಕನ್ಯಾಡಿ ಶಾಲೆಗೆ ಖಾಯಂ ಮುಖ್ಯೋಪಾಧ್ಯಾಯರು ಮತ್ತು ದೈಹಿಕ ಶಿಕ್ಷಕರನ್ನು ಒದಗಿಸುವಂತೆ ಶಾಸಕ ಹರೀಶ್ ಪೂಂಜಾರಿಗೆ ಮನವಿ

Suddi Udaya

ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್‍ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

Suddi Udaya

ಪ್ರತಿಭಾ ಕಾರಂಜಿ ಭರತನಾಟ್ಯ ಸ್ಪರ್ಧೆ: ಧರ್ಮಸ್ಥಳ ಶ್ರೀ ಮಂ.ಆಂ.ಮಾ. ಶಾಲೆಯ ವಿದ್ಯಾರ್ಥಿನಿ ಹಂಸಿನಿ ಭಿಡೆ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಹೊಕ್ಕಾಡಿಗೋಳಿ ಕುಲಾಲ ಯಾನೆ ಕುಂಬಾರರ ಸಮಾಜ ಸೇವಾ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಬಡ ಕುಟುಂಬದ ಮನೆಯ ಮೇಲ್ಚಾವಣಿ ದುರಸ್ತಿ

Suddi Udaya
error: Content is protected !!