September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಮಂಜೊಟ್ಟಿ ಸ್ಟಾರ್ ಲೈನ್ ಆಂ.ಮಾ. ಶಾಲೆ ರಝಾ ಗಾರ್ಡನ್ ನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ವಸುದೈವ ಕುಟುಂಬಕಂ ಎಂಬ ದ್ಯೇಯ ವಾಕ್ಯದೊಂದಿಗೆ 2023-24 ನೇ ಸಾಲಿನ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ .21ರಂದು ಸ್ಟಾರ್ ಲೈನ್ ವಿದ್ಯಾಸಂಸ್ಥೆಯಲ್ಲಿ ಬಹಳ ಅರ್ಥಪೂರ್ಣವಾಗಿ ಆಚಾರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ| ಪ್ರದೀಪ್, ಆರೋಗ್ಯ ಕ್ಲಿನಿಕ್ ನಾವೂರು ಇವರು ಮಾತನಾಡಿ ವಿಶ್ವವು ಒಂದು ಕುಟುಂಬ ಎಂಬ ದ್ಯೇಯ ವಾಕ್ಯದೊಂದಿಗೆ ಆಚರಿಸಿದ ಯೋಗ ದಿನಾಚರಣೆಯ ಶುಭಾಶಯಗಳನ್ನು ಕೋರಿ ಯೋಗವನ್ನು ದಿನ ನಿತ್ಯ ಮಾಡುವುದರ ಮೂಲಕ ಜೀವನವನ್ನು ಸಾರ್ಥಕಗೊಳಿಸೋಣ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಟಾರ್ ಲೈನ್ ವಿದ್ಯಾಸಂಸ್ಥೆಯ ಸಂಚಾಲಕ ಜನಾಬ್ ಸಯ್ಯದ್ ಹಬೀಬ್ ವಹಿಸಿಕೊಂಡಿದ್ದರು.

ವೇದಿಕೆಯಲ್ಲಿ ಈ ವಿದ್ಯಾಸಂಸ್ಥೆಯ ಟ್ರಸ್ಟಿನ ಕಾರ್ಯದರ್ಶಿ ಸಯ್ಯದ್ ಅಯ್ಯೂಬ್, ಕೋಶಾಧಿಕಾರಿ ಸಯ್ಯದ್ ಇರ್ಫಾನ್, ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ಜಾಕಿನ್ ಬಿನ್ ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ವಿವಿಧ ಯೋಗಾಸನಗಳ ಪ್ರದರ್ಶನ, ಸೂರ್ಯನಮಸ್ಕಾರ ಮುಂತಾದ ಕಾರ್ಯಕ್ರಮಗಳು ಬಹಳ ಸುಂದರವಾಗಿ ಮೂಡಿಬಂದವು. ಸಹ ಶಿಕ್ಷಕಿ ಶ್ರೀಮತಿ ಹರ್ಶಿ ಅಫ್ರಿನಾ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಿಕಿ ಶ್ರೀಮತಿ ಯಶಸ್ವಿನಿ ಸ್ವಾಗತಿಸಿ ವಂದಿಸಿದರು.

Related posts

ಗುರುವಾಯನಕೆರೆ ಎಕ್ಸೆಲ್ ನಲ್ಲಿ ಭಾರತೀಯ ಜೈನ್ ಮಿಲನ್ ಸಭೆ

Suddi Udaya

ಕೊಕ್ಕಡ: ಕೊಲ್ಲಾಜೆಪಲ್ಕೆ ನಿವಾಸಿ ಹರೀಶ್ ನಿಧನ

Suddi Udaya

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿ ಮಂಡಲ ಪದಪ್ರಧಾನ

Suddi Udaya

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಗೆ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

Suddi Udaya

ಧರ್ಮಸ್ಥಳದಲ್ಲಿ 54 ನೇ ವರ್ಷದ ಪುರಾಣ ವಾಚನ-ಪ್ರವಚನ ಉದ್ಘಾಟನೆ

Suddi Udaya

ಸೈಂಟ್‌ ಮೇರಿಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya
error: Content is protected !!