32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಭಜನಾ ಪರಿಷತ್ತಿಗೆ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಕೊಯ್ಯೂರು ಪಿ ಚಂದ್ರಶೇಖರ ಸಾಲ್ಯಾನ್ ರವರಿಗೆ ಅಭಿನಂದನಾ ಕಾರ್ಯಕ್ರಮ

ಮಲೆಬೆಟ್ಟು : ಶ್ರೀರಾಮ ಭಜನಾ ಮಂಡಳಿ(ರಿ) ಮಲೆಬೆಟ್ಟು ಇದರ ವತಿಯಿಂದ ಭಜನಾ ಪರಿಷತ್ ಧರ್ಮಸ್ಥಳ ಇದರ ಬೆಳ್ತಂಗಡಿ ತಾಲೂಕಿನ ಭಜನಾ ಪರಿಷತ್ತಿಗೆ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಪಿ ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು ಇವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವನದುರ್ಗೆ ದೇವಸ್ಥಾನ ಮಲೆಬೆಟ್ಟು ಇದರ ಆಡಳಿತ ಮೊಕ್ತೇಸರರಾದ ಗಣೇಶ್ ಭಟ್ ಕಾಂತಾಜ, ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ ಕೃಷ್ಣ ಆಚಾರಿ ಮರಿಯ, ಕಾರ್ಯದರ್ಶಿಯಾದ ದೇಜಪ್ಪ ಪೂಜಾರಿ ಅಲನೆ , ಕೋಶಾಧಿಕಾರಿ ಚಂದ್ರಶೇಖರ ಗೌಡ ಮಲೆಬೆಟ್ಟು ಅಂತರ, ಕೇಶವ ಪೂಜಾರಿ ದೇವಸ, ವಿಶ್ವನಾಥ ಪೂಜಾರಿ ಗಾಳಿ ತೋಟ, ಮಕ್ಕಳ ಭಜನಾ ತಂಡದ ಉಸ್ತುವಾರಿ ಪ್ರಶಾಂತ್ ನಾಯ್ಕ ಹಾಗೂ ಭಜಕರು ಉಪಸ್ಥಿತರಿದ್ದರು.
ಭಜನಾ ಪರಿಷತ್ ನ ಕಾರ್ಯದರ್ಶಿ ಪಿ ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು ಇವರು ಭಜನೆಯ ಮಹತ್ವ ಹಾಗೂ ಭಜನಾ ಪರಿಷತ್ತಿನ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು
ದೇಜಪ್ಪ ಪೂಜಾರಿಯವರು ಸ್ವಾಗತಿಸಿದರು. ಗ್ರಾ ಪಂಚಾಯತ್ ಸದಸ್ಯ ಗಿರೀಶ್ ಆಚಾರಿಯವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related posts

ಬೆಳ್ತಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Suddi Udaya

ಬೆಳ್ತಂಗಡಿ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಅಧ್ಯಕ್ಷ ದೀಪಕ್ ಜಿ. ರವರಿಗೆ ಸಮಾಜ ರತ್ನ ಪ್ರಶಸ್ತಿ

Suddi Udaya

ಬಿರುವೆರ್ ಕುಡ್ಲ ತಂಡದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಗೆ ಭೇಟಿ: ಉದ್ಯಮಿ ಮೋಹನ್ ಕುಮಾರ್ ರವರಿಂದ ಗೌರವ,

Suddi Udaya

ಮಚ್ಚಿನ ಕೊಡಿಯೇಲು ಎಂಬಲ್ಲಿ ಹೆಜ್ಜೇನು ದಾಳಿ: ಆರು ಮಂದಿಗೆ‌ ಗಾಯ- ಗಂಭೀರ ಗಾಯಗೊಂಡ‌ ಯುವಕ ಪುತ್ತೂರು ಆಸ್ಪತ್ರೆಗೆ ದಾಖಲು

Suddi Udaya

ಡಿ.27-28: ಬರೆಂಗಾಯ ಸ.ಉ.ಹಿ.ಪ್ರಾ ಶಾಲಾ ಅಮೃತ ಮಹೋತ್ಸವ

Suddi Udaya

ಉಜಿರೆ ಸೈoಟ್ ಜಾರ್ಜ್ ಚರ್ಚಿನಲ್ಲಿ ಸಂಡೇ ಸ್ಕೂಲ್ ವಾರ್ಷಿಕ ದಿನ ಆಚರಣೆ

Suddi Udaya
error: Content is protected !!